ಬೆಂಗಳೂರು -ಜು. 10-ನಗರದ ತ್ಯಾಗರಾಜ್ ನಗರದ ಶ್ರೀ ಸಾಯಿ ಆದ್ಯಾತ್ಮಿಕ ಕೇಂದ್ರದ ಸಾಯಿ ಮಂದಿರದಲ್ಲಿ ಇಂದು ಗುರು ಪೂರ್ಣಿಮೆ ಅಂಗವಾಗಿ ವಿಶೇಷ ಪೂಜೆ, ಧಾರ್ಮಿಕ ಮತ್ತು ಸಂಸ್ಕೃತಿಕ ಕಾರ್ಯಕ್ರಮಗಳನ್ನ ನಡೆಸಲಾಯಿತು. ಭಕ್ತರ ನೆರವಿನಿಂದ ಹರಿದುಬಂದ 6 ಟನ್ ವಿವಿಧ ತರಕಾರಿಗಳು ಮತ್ತು 5 ಟನ್ ವಿವಿಧ ರೀತಿಯ ಹಣ್ಣುಗಳಿಂದ ಮತ್ತು ಹೂವುಗಳಿಂದ ದೇವಸ್ಥಾನವನ್ನ , ಸದ್ಗುರು ಶ್ರೀ ಸಾಯಿ ಬಾಬಾ, ಶ್ರೀ ನರಸಿಂಹ ಸ್ವಾಮೀಜಿ, ಮತ್ತು ರಾಧಾಕೃಷ್ಣ ಸ್ವಾಮೀಜಿಯವರನ್ನ ವಿಶೇಷವಾಗಿ ಅಲಂಕರಿಸಲಾಗಿದ್ದು ದೇವಲೋಕವೇ ಭೂಮಿಗೆ ಬಂದಂತಿತ್ತು.
50 ವರ್ಷದ ನಂತರ ಇಂದು ಗುರುವಾರದ ದಿನ ಗುರು ಪೌರ್ಣಿಮೆ ಬಂದಿರುವುದು ತುಂಬಾ ವಿಶೇಷವಾಗಿದೆ. ಬೆಳಿಗ್ಗೆ 9 ಗಂಟೆಗೆ ವ್ಯಾಸ ಪೂಜೆ,ಸಂಜೆ 6 ಗಂಟೆಗೆ ಸತ್ಯನಾರಾಯಣ ಪೂಜೆ, ರಾತ್ರಿ ಶೇಜಾರತಿ ನಡೆಯಿತು.
ಬೆಳಗಿನಿಂದ ಸಂಜೆಯವರೆಗೆ ಸುಮಾರು ಒಂದು ಲಕ್ಷ ಭಕ್ತರು ಸಾಲಿನಲ್ಲಿ ನಿಂತು ಆಗಮಿಸಿ ಸಾಯಿ ಗುರುವಿನ ದರ್ಶನ ಪಡೆದರು. ಕ್ಷೇತ್ರದ ಅನೇಕ ಗಣ್ಯರು ಆಗಮಿಸಿದ್ದರು. ಎಲ್ಲಾ ಭಕ್ತರಿಗೋ ತುಪ್ಪದ ಮೈಸೂರುಪಾಕ್ ಸೇರಿದಂತೆ ವಿವಿಧ ಪ್ರಸಾದ ತೀರ್ಥವನ್ನ ವಿತರಿಸಲಾಯಿತು.
ದಿನಾಂಕ 12 ರಂದುಬೆಳಿಗ್ಗೆ 9 ರಿಂದ ರಾತ್ರಿ 9 ಗಂಟೆಯವರೆಗೆ ನಿರಂತರವಾಗಿ ಭಜನೆ ಕಾರ್ಯಕ್ರಮ ಹೆಮ್ಮಿಕೊಳ್ಳಲಾಗಿದೆ, ಇದರಲ್ಲಿ ಶ್ರೀ ಸಾಯಿ ಸ್ಮರಣ್ ಭಜನಾ ವೃಂದ, ಶ್ರೀ ಅನಂತ ಸಾಯಿ ಸಂಗೀತ ತಂಡ, ತಿಲಕ್ ಕಾರ್ತಿಕ್ ಶಿವ ಚರಣ್ ಮತ್ತು ವೃಂದ, ಸಾಯಿಗೀತಾ ಭಜನಾ ಮಂಡಳಿ, ಸಾಯಿ ಪಾದಾನಂದ ಬಾಲ ವಿಹಾರ ಕೇಂದ್ರ, ಸಾಯಿ ಅಧ್ಯಾತ್ಮಕ ಕೇಂದ್ರ ಇವರುಗಳು ನಿರಂತರ ಭಜನೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
75 ವರ್ಷಗಳ ಇತಿಹಾಸವಿರುವ ಬೆಂಗಳೂರಿನ ತ್ಯಾಗರಾಜ್ ನಗರದ ಸಾಯಿ ಆಧ್ಯಾತ್ಮಿಕ ಕೇಂದ್ರ ಬೆಂಗಳೂರಿನ ತ್ಯಾಗರಾಜ ನಗರ, ವಸಂತ ನಗರ, ಮತ್ತು ತಮಿಳು ನಾಡಿನಲ್ಲಿಯು ಸಹ ಶ್ರೀ ಸಾಯಿ ಮಂದಿರವನ್ನ ಹೊಂದಿದ್ದು ನಿರಂತರವಾಗಿ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ ನೆರವಿನ ಕಾರ್ಯಕ್ರಮಗಳನ್ನ ನಡಸುತ್ತ ಬಂದಿದೆ, ಪ್ರತಿದಿನ ಎಂಟು ಸಾವಿರ ಶಾಲಾ ಮಕ್ಕಳಿಗೆ, ಒಂದು ಸಾವಿರ ರೋಗಿ ಮತ್ತು ಆಸ್ಪತ್ರೆ ಸಿಬ್ಬಂದಿಗಳಿಗೆ ಮಧ್ಯಾಹ್ನ ಬಿಸಿ ಊಟವನ್ನ ವಿತರಿಸುತ್ತಿದ್ದಾರೆ.
ವಿಶೇಷ ಅಲಂಕಾರವನ್ನ ಸಾರ್ವಜನಿಕರಿಗೆ ವೀಕ್ಷಣೆಗಾಗಿ ಭಾನುವಾರದವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.
|
ವೆಂಕಟೇಶ್
ಕಾರ್ಯಕಾರಿ ಸದಸ್ಯ
ಸಾಯಿ ಆಧ್ಯಾತ್ಮಿಕ ಕೇಂದ್ರ