ಅಂಗದಾನ ಮಾಡಿ - ಜೀವಗಳನ್ನು ಉಳಿಸಿ

varthajala
0

ಅಂಗದಾನ ಉತ್ತೇಜಿಸಲು ಎಲ್ಲರೂ ಸಹಕರಿಸಿ - ದಿನೇಶ್ ಗುಂಡೂರಾವ್

ಅಂಗದಾನದಿಂದ ಹಲವಾರು ಜೀವಗಳಿಗೆ ಜೀವದಾನ ಮಾಡಬಹುದಾಗಿದೆ. ರಾಜ್ಯದಲ್ಲಿ ಅಂಗದಾನವನ್ನು ಉತ್ತೇಜಿಸಲು ಸರ್ಕಾರ ಹಲವು ಕ್ರಮಗಳನ್ನು ಅಳವಡಿಸಿಕೊಂಡಿದೆ. ಇಂತಹ ಉತ್ತಮ ಕೆಲಸಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದರು.


ಬೆಂಗಳೂರಿನ ಎಪಿಐ ಭವನದಲ್ಲಿ ರೋಟರಿ ಕ್ಲಬ್ ಆಫ್ ಆರ್ಗನ್ ಡೊನೇಷನ್ ಸಂಸ್ಥೆಯ ಜೀವಸಾರ್ಥಕತೆ ಸಹಕಾರದೊಂದಿಗೆ, ಆಯೋಜಿಸಿದ್ದ ಮೃತ ವ್ಯಕ್ತಿಯ ಅಂಗದಾನ ಸಂಗ್ರಹಣೆಯನ್ನು ಬಲಪಡಿಸುವ ಉದ್ದೇಶದಿಂದ NTORC Launchpad  ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ವೈದ್ಯಕೀಯ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಅವಧಿಯಲ್ಲಿಯೇ ಅಂಗದಾನದ ಬಗ್ಗೆ ಅರಿವು ಮೂಡಿಸುವುದು ಅಗತ್ಯ. ಮೆದುಳು ನಿಷ್ಕ್ರಿಯ ವ್ಯಕ್ತಿಗಳ ಕುಟುಂಬಗಳಿಗೆ ಸೂಕ್ತವಾದ ಉನ್ನತ ಮಾನದಂಡದ ಆಪ್ತ ಸಲಹೆಗಾರರನ್ನು ಸರ್ಕಾರಿ ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ನಿಯೋಜಿಸಲು ಕ್ರಮ ವಹಿಸಲಾಗುವುದು. ಸಾರ್ವಜನಿಕ - ಖಾಸಗಿ ಸಹಕಾರವನ್ನು ಉತ್ತೇಜಿಸುವುದು, ಎನ್‍ಜಿಒಗಳೊಂದಿಗೆ ಸಮಾಜದಲ್ಲಿ ಜಾಗೃತಿ ಮೂಡಿಸಲು ಸಹಕಾರ ನೀಡಲಾಗುವುದು ಎಂದರು.

ವೈದ್ಯಕೀಯ, ಕಾನೂನು ಮತ್ತು ಮಾನಸಿಕ- ಸಾಮಾಜಿಕ ಅಂಶಗಳ ಕುರಿತು ತಜ್ಞರಿಂದ ಉಪನ್ಯಾಸ ಹಾಗೂ ಚರ್ಚೆ ನಡೆಯಿತು.

ಕಾರ್ಯಕ್ರಮದಲ್ಲಿ ಜೀವಸಾರ್ಥಕತೆ ಸಂಚಾಲಕ ಡಾ. ರವಿಶಂಕರ ಶೆಟ್ಟಿ ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

VK DIGITAL NEWS:ʼನಾನು ಸಿಎಂ ಆಗಬೇಕಿತ್ತುʼ ಎಂಬ ಖರ್ಗೆ ಮಾತಿನ ಲೆಕ್ಕಾಚಾರವೇನು?



Post a Comment

0Comments

Post a Comment (0)