ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳ ಪರಿಷ್ಕøತ ಕೀ ಉತ್ತರ ಪ್ರಕಟ

varthajala
0

ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿಸಲಾದ ಸಾರಿಗೆ ಇಲಾಖೆಯಲ್ಲಿನ ಮೋಟಾರು ವಾಹನ ನಿರೀಕ್ಷಕರು (ಉ.ಮೂ.ವ್ಯ.) ಹುದ್ದೆಗಳ ನೇಮಕಾತಿ ಸಂಬಂಧ 2025ರ ಮೇ 14 ರಂದು ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ಸಾಮಾನ್ಯ ಜ್ಞಾನ ಪತ್ರಿಕೆ-1 ವಿಷಯ ಸಂಕೇತ-650 ಮತ್ತು ಪತ್ರಿಕೆ-2 ವಿಷಯ ಸಂಕೇತ-651 ರ ಪರಿಷ್ಕøತ ಕೀ-ಉತ್ತರಗಳನ್ನು ಆಯೋಗದ ಜಾಲತಾಣ http://kpsc.kar.nic.in/ Key Answer ನಲ್ಲಿ ಪ್ರಕಟಿಸಲಾಗಿದೆ.

ಪರಿಷ್ಕøತ ಕೀ-ಉತ್ತರಗಳು ಪ್ರಕಟಿಸಿದ ನಂತರ, ಕೀ-ಉತ್ತರ ಹಾಗೂ ಪರಿಷ್ಕøತ ಕೀ-ಉತ್ತರಗಳಿಗೆ ಸಂಬಂಧಿಸಿದಂತೆ ಸಲ್ಲಿಸುವ ಯಾವುದೇ ಮನವಿ ಅಥವಾ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ನಿಯಂತ್ರಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

VK DIGITAL NEWS:

Post a Comment

0Comments

Post a Comment (0)