ಸುಂದರ ಗಾಂಧಿನಗರಕ್ಕೆ ಕೈಜೋಡಿಸೋಣ-ದಿನೇಶ್ ಗುಂಡೂರಾವ್

varthajala
0

 ಗಾಂಧಿನಗರ:ಗುಬ್ಬಿ ವೀರಣ್ಣ ರಂಗಮಂದಿರ ಮುಂಭಾಗದಲ್ಲಿ ಸ್ಥಳೀಯ ಶಾಸಕರು, ಕುಟುಂಬ ಮತ್ತು ಕಲ್ಯಾಣ ಇಲಾಖೆ ಸಚಿವರಾದ ದಿನೇಶ್ ಗುಂಡೂರಾವ್ ರವರ ನೇತೃತ್ವದಲ್ಲಿ ಬೃಹತ್ ಜನಜಾಗೃತಿ ಅಭಿಯಾನ ಕಾರ್ಯಕ್ರಮ. ಸಚಿವ ದಿನೇಶ್ ಗುಂಡೂರಾವ್ ರವರು, ಪಶ್ಚಿಮ ವಲಯ ಜಂಟಿ ಆಯುಕ್ತರಾದ ಸಂಗಪ್ಪ, ಆರೋಗ್ಯಧಿಕಾರಿ ಮನೋರಂಜನ್ ಹೆಗಡೆ, ಬಿಬಿಎಂಪಿ ಅಧಿಕಾರಿಗಳಾದ  ಸೋಮಶೇಖರ್ ,ಶಾಂತಲ, ಸರ್ಣ, ಪೊಲೀಸ್ ಅಧಿಕಾರಿಗಳಾದ ಪುಟ್ಟಮ್ಮ, ಪರಪ್ಪರೆಡ್ಡಿ, ಮಾರುತಿ, ತಬರೇಜ್,ಕೃಷ್ಣಮೂರ್ತಿ,   ಅಧಿಕಾರಿಗಳಾದ ಮಧುಸೂಧನ್, ಶ್ರೀನಿವಾಸ್, ಸೋಮಶೇಖರ್, ಜಲಮಂಡಳಿ ಅಧಿಕಾರಿ ಚನ್ನಪ್ಪರವರು, ಹೆಲ್ತ್ ಸೂಪರ್ ವೈಸರ್ ಸಂತೋಷ್ ಕುಮಾರ್ ನಾಯಕ್, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಉಮೇಶ್ ಬಾಬು, ಮಾಜಿ ಪಾಲಿಕೆ ಸದಸ್ಯ ನವೀನ್ ಕುಮಾರ್ ಬಲೂನ್ ಗಳನ್ನು ಹಾರಿಬಿಡುವ ಮೂಲಕ ಜನಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

 ಸಚಿವರಾದ ದಿನೇಶ್ ಗುಂಡೂರಾವ್ ರವರು ಮಾತನಾಡಿ ಸಾರ್ವಜನಿಕರು ಎಲ್ಲ ಇಲಾಖೆ ಅಧಿಕಾರಿಗಳ ಜೊತೆಯಲ್ಲಿ ಮುಕ್ತ ಚರ್ಚೆ ಮಾಡಿ ಸಮಸ್ಯೆ ನಿವಾರಣೆಗಾಗಿ ಜನಜಾಗೃತಿ ಕಾರ್ಯಕ್ರಮ. ಗಾಂಧಿನಗರ ಪ್ರದೇಶ ಕರ್ನಾಟಕದ ಹೃದಯಭಾಗವಾಗಿದೆ. ಇಲ್ಲಿ ಲಕ್ಷಾಂತರ ಜನರು ಬರುತ್ತಾರೆ. ಗಾಂಧಿನಗರ ಪ್ರದೇಶ ನೋಡಿ ಸಂತೋಷವಾಗಬೇಕು ಜನರಿಗೆ. ಸಚಿವನಾಗಿ ನಾನು ಮತ್ತು ಅಧಿಕಾರಿ ಜೊತೆಯಲ್ಲಿ ಸಮನ್ವಯ ಮೂಲಕ ಸಮಸ್ಯೆ ನಿವಾರಣೆ ಮಾಡಲಾಗುವುದು.

ಜನರಿಗೆ ಜವಾಬ್ಬಾರಿ ಇರಬೇಕು ಎಲ್ಲವು ಸರ್ಕಾರ, ಬಿಬಿಎಂಪಿ ಮಾಡುತ್ತದೆ ಎಂದು ಕೈಚಲ್ಲಿ ಕೂರಬಾರದು, ಸರ್ಕಾರದ ಜೊತೆಯಲ್ಲಿ ಸಹಕಾರವಾಗಿ ಜನರು ನಿಂತಾಗ ಅಭಿವೃದ್ದಿ ಸಾಧ್ಯ. ಸಾರ್ವಜನಿಕರು ಹಸಿಕಸ, ಒಣಕಸ ವಿಂಗಡನೆ ಮಾಡಬೇಕು, ಎರಡು ಕಸ ಮರುಬಳಕೆ, ಗೊಬ್ಬರ ತಯಾರಿಕೆಯಾಗಿ ಅನುಕೂಲವಾಗುತ್ತದೆ. ಎಲ್ಲೆಂದರಲ್ಲಿ ಕಸ ಬಿಸಾಡಬೇಡಿ. ಸ್ವಚ್ಚತೆ ಕಾಪಾಡಬೇಕು. ನಮ್ಮ ಬದುಕು, ಉದ್ಯೋಗ ವ್ಯಾಪಾರ ಮಾಡುವ ಸ್ಥಳ ಸ್ವಚ್ಚತೆಯನ್ನ ನಾವು ಕಾಪಾಡಿಕೊಳ್ಳಬೇಕು. ಜನರಿಗೆ ಒಳ್ಳೆಯದಾಗಲಿ ಎಂದು ಅಭಿವೃದ್ದಿ ಕೆಲಸ ಮಾಡಿದ್ದೇವೆ.

 ಬೀದಿ ಬದಿಯ ವ್ಯಾಪಾರಿಗಳು ಪಾದಚಾರಿಗಳಿಗೆ ಅನುಕೂಲ ಮಾಡಿಕೊಟ್ಟು ವ್ಯಾಪಾರ ಮಾಡಿ,  ಸಾರ್ವಜನಿಕರು ತೊಂದರೆಯಾಗದಂತೆ ವ್ಯಾಪಾರ ಮಾಡಿ. ಟ್ರಾವಲ್ಸ್ ನವರು ಮೆಜೆಸ್ಟಿಕ್ ಪ್ರದೇಶದಲ್ಲಿ ಎಲ್ಲ ಕಡೆ ಪಾರ್ಕಿಂಗ್ ಮಾಡುತ್ತಿದ್ದಾರೆ ಇದು ತಪ್ಪು, ಹೊರಡುವ ಸಮಯಕ್ಕೆ ಬಂದು ಪ್ರಯಾಣಿಕರನ್ನ ಪೀಕ್ ಅಪ್ ಮಾಡಬೇಕು. ಪೊಲೀಸ್ ಇಲಾಖೆಯವರು ಅನಧಿಕೃತ ಬಸ್ ನಿಲ್ಲಿಸುವವರಮೇಲೆ ಕ್ರಮ ಕೈಗೊಳ್ಳಿ. ಸೇವೆ, ಸ್ವಚ್ಚತೆ ಕಾಪಾಡಬೇಕು ಎಲ್ಲ ಅಧಿಕಾರಿಗಳ ಮೇಲೆ ಜವಾಬ್ಬಾರಿ ಇದೆ. ಗಾಂಧಿನಗರ ವಿಧಾನಸಭಾ ಕ್ಷೇತ್ರಕ್ಕೆ ಕಾರ್ಯಯೋಜನೆ ರೂಪಿಸಬೇಕು ಬಸ್ ಪಾರ್ಕಿಂಗ್ ಮತ್ತು ಬೀದಿ ಬದಿಯ ವ್ಯಾಪಾರಿಗಳ ಕುರಿತು ಸಮರ್ಪಕ ಯೋಜನೆ ರೂಪಿಸಿ ನಿಯಂತ್ರಣಕ್ಕೆ ತರಬೇಕು.

ಕಾನೂನು ಸುವ್ಯವಸ್ಥೆ ಸಮರ್ಪಕವಾಗಿ ನಡೆಯಬೇಕು, ಅಹಿತಕಾರಿ ಘಟನೆಗಳು ಅಗದಂತೆ ತಡೆಯಬೇಕು. ಹೋಟೆಲ್ ಮಾಲೀಕರು ಒಳಚರಂಡಿ ಕಸಗಳನ್ನು ಹಾಕಬಾರದು. ಸಾರ್ವಜನಿಕರಿಗೆ ತೊಂದರೆಯಾಗದಂತೆ, ನಿಯಮಬದ್ದವಾಗಿ, ವ್ಯವಸ್ಥಿತವಾಗಿ ಕೆಲಸ ಕಾರ್ಯಗಳು ನಡೆಯಬೇಕು ಇದಕ್ಕೆ ನನ್ನ ಸಹಕಾರ ಇರುತ್ತದೆ ಎಂದು ಹೇಳಿದರು. ಸಾವಿರಾರು ಜನರು ಜನಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎನ್.ವಿ.ರಾವ್ ರವರು ಸ್ವಾಗತ ಕೋರಿದರು. ಹೋಮ್ ಸೈನ್ಸ್ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಪೌರ ಕಾರ್ಮಿಕರು ಉಪಸ್ಥಿತರಿದ್ದರು.

Post a Comment

0Comments

Post a Comment (0)