- ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಭಾಗಿ - ಪೂಜ್ಯ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರ ಸಾನ್ನಿಧ್ಯ, ಮಾನ್ಯಶ್ರೀ ಬಿ.ಕೆ. ಹರಿಪ್ರಸಾದ್ ಅವರಿಂದ ಕಾರ್ಯಕ್ರಮದ ಅಧ್ಯಕ್ಷತೆ
ಬೆಂಗಳೂರು ಆಗಸ್ಟ್ 04: ಕಳೆದ 50 ವರ್ಷಗಳಿಂದ ಸಮಾಜದ ಸೇವೆ ಸಲ್ಲಿಸುತ್ತಿರುವ ಬಿಲ್ಲವ ಅಸೋಸಿಯೇಷನ್ ನ ಸುವರ್ಣಮಹೋತ್ಸವದ ಸಮಾರೋಪ ಕಾರ್ಯಕ್ರಮವನ್ನು ಆಗಸ್ಟ್ 10 ರಂದು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸನ್ಮಾನ್ಯ ಉಪಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಭಾಗವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷರಾದ ಎಂ. ವೇದಕುಮಾರ್ ತಿಳಿಸಿದರು.
ಇಂದು ಪ್ರೆಸ್‌ಕ್ಲಬ್ ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಇಂದಿಗೆ ಸಂಘದಲ್ಲಿ 6000 ಸದಸ್ಯರು ಸಕ್ರಿಯರಾಗಿದ್ದು ಸಂಘದ ಪ್ರಕ್ರಿಯೆಗಳು ದ.ಕ, ಉಡುಪಿ, ಕಾಸರಗೋಡು, ಕೊಡಗು, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು ಜಿಲ್ಲೆಗಳ ವ್ಯಾಪ್ತಿಗೂ ಹಬ್ಬಿದೆ. ವಿದ್ಯಾರ್ಥಿವೇತನ, ವಿದ್ಯಾರ್ಥಿಗಳ ದತ್ತು ಸ್ವೀಕಾರ ಆರೋಗ್ಯ ಸೇವೆ, ಉಚಿತ ಆರೋಗ್ಯ ಸೇವೆ, ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ, ರಕ್ತದಾನ ಶಿಬಿರ, ಪ್ರಕೃತಿ ವಿಕೋಪ ಮತ್ತಿತರ ಸಂಕಷ್ಟದ ಸಂದರ್ಭದಲ್ಲಿ ಸಹಾಯ ವಧುವರಾನ್ವೇಷಣೆ, ಸಂತೋಷ ಕೂಟ, ಏಕದಿನ ಪ್ರವಾಸ, ಶಿವಗಿರಿ ದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಮುಂತಾದ ಕಾರ್ಯಕ್ರಮಗಳಿಂದ ಸಂಘ ನಿರಂತರವಾಗಿ ಸದಸ್ಯರ ಹಾಗೂ ಸಮಾಜದ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದೆ ಎಂದರು.
2025 ಸಂಘದ ಸುವರ್ಣ ವರ್ಷ ಈ ಸುವರ್ಣ ಸಂಭ್ರಮದ ಕಾರ್ಯಕ್ರಮಗಳನ್ನು ಜನವರಿ ತಿಂಗಳಲ್ಲಿಯೇ ಪ್ರಾರಂಭಿಸಲಾಗಿದ್ದು ಅಗಸ್ಟ್ 10 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಗಿದೆ. ಪೂಜ್ಯ ಶ್ರೀ ವಿಖ್ಯಾತಾನಂದ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ, ಸನ್ಮಾನ್ಯ ಮುಖ್ಯ ಮಂತ್ರಿ ಶ್ರೀ ಸಿದ್ದರಾಮಯ್ಯನವರು ಕಾರ್ಯಕ್ರಮವನ್ನು ಉದ್ಘಾಟಿಸಲಿರುವರು ಸನ್ಮಾನ್ಯ ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಕೃತಿ ಬಿಡುಗಡೆ, ಮಾನ್ಯಶ್ರೀ ಬಿ.ಕೆ. ಹರಿಪ್ರಸಾದ್ ವಿಧಾನಪರಿಷತ್ ಸದಸ್ಯರು ಕಾರ್ಯಕ್ರವiದ ಅಧ್ಯಕ್ಷತೆ ವಹಿಸಿದರೆ ಸನ್ಮಾನ್ಯ ಶ್ರೀ ಯು.ಟಿ.ಖಾದರ್ ಮಾನ್ಯ ವಿಧಾನಸಭಾ ಅಧ್ಯಕ್ಷರು ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಿದರು.
10.08.2025ರಂದು ಅರಮನೆ ಮೈದಾನದ ವೈಟ್ ಪೆಟಲ್ ಸಭಾಂಗಣದಲ್ಲಿ ಬೆಳಿಗ್ಗೆ 8ರಿಂದ ಸಂಜೆ 8ರ ತನಕ ನಡೆಯಲಿರುವ ಕಾರ್ಯಕ್ರಮದಲ್ಲಿ ಸಭಾ ಕಾರ್ಯಕ್ರಮದ ನಂತರ, ಖ್ಯಾತ ಕಲಾವಿದರಿಂದ “ಜಾನಪದ ಕಲರವ” “ ಯಕ್ಷ ಹಾಸ್ಯ ರಸ” “ ಕಲಿ ವಲಿ ಕಾಮಿಡಿ” “ ಕಿಲಾಡಿ ದರ್ಬಾರ್” ಹಾಗೂ “ ಸುವರ್ಣನರ್ತನ” ಕಾರ್ಯಕ್ರಮಗಳು ಜರಗಲಿವೆ. ಬೆಳಿಗ್ಗೆ, ಮಧ್ಯಾಹ್ನ ಸಂಜೆ, ಉಪಾಹಾರ ಕರಾವಳಿ ಶೈಲಿಯ ಭೋಜನ ವ್ಯವಸ್ಥೆ ಇದ್ದು ಎಲ್ಲರು ಸಕ್ರೀಯವಾಗಿ ಭಾಗವಹಿಸುವಂತೆ ಅಧ್ಯಕ್ಷರಾದ ಎಂ ವೇದಕುಮಾರ್ ಎಲ್ಲರನ್ನೂ ಗೌರವ ಪೂರ್ವಕವಾಗಿ ಆಮಂತ್ರಿಸಿದರು.