ಶ್ರೀ ಚರಣ್ ಕೋ ಆಪರೇಟೀವ್ ಬ್ಯಾಂಕ್ ಲಾಭ ₹ 2.92 ಕೋಟಿ

varthajala
0

 ಬೆಂಗಳೂರು ಆಗಸ್ಟ್‌ 4: ನಗರದ ಬಸವನಗುಡಿಯಲ್ಲಿರುವ ಪ್ರತಿಷ್ಠಿತ ಶ್ರೀ ಚರಣ್‌ ಕೋ- ಅಪರೇಟೀವ್ ಬ್ಯಾಂಕ್‌ಪ್ರಸಕ್ತ ಹಣಕಾಸು ವರ್ಷದ ಜುಲೈ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 2.92 ಕೋಟಿ ಲಾಭ ಗಳಿಸಿದೆ.

 ನಗರದ ಶಂಕರಪುರಂ ಪಂಪ ಮಹಾಕವಿ ರಸ್ತೆಯಲ್ಲಿರುವ ವಿದ್ಯಾಶ್ರೀ ವಿದ್ಯಾವಿಹಾರ ಸಭಾಂಗಣದಲ್ಲಿ ಭಾನುವಾರ ನಡೆದ 29ನೇ ಸರ್ವ ಸದಸ್ಯರ ಸಭೆಯಲ್ಲಿ ಬ್ಯಾಂಕ್‌ನ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಶ್ರೀ ಬಿ.ವಿ. ದ್ವಾರಕಾನಾಥ್ ಅವರು ಈ ಮಾಹಿತಿ ನೀಡದರು. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್ ₹2.89 ಕೋಟಿ ಲಾಭ ಗಳಿಸಿತ್ತು.2024-25ನೇ ಸಾಲಿನಲ್ಲಿ ಎಸ್ಎಸ್ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇ. 95ಕ್ಕಿತ ಹೆಚ್ಚ ಅಂಕ ಪಡೆದ ಬ್ಯಾಂಕಿನ ಸದಸ್ಯರ ಮಕ್ಕಳಿಗೆ ಇದೇ ವೇಳೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

 

ನಿಮ್ಹಾನ್ಸ್ ಆಸ್ಪತ್ರೆಯ ಮಾಜಿ ಉಪ ಅಧೀಕ್ಷಕರೂ ಆಗಿರುವ ಮಾನಸಿಕ ರೋಗಿಗಳಿಗೆ ಉಚಿತ ಸಮಾಲೋಚನೆ ನೀಡುತ್ತಿರುವ "ಸಮಾಧಾನ" ಸಂಸ್ಥೆಯ ಸಂಸ್ಥಾಪಕ ಪದ್ಮಶ್ರಿ ಡಾ.ಸಿ.ಆರ್.ಚಂದ್ರಶೇಖರ್ ಅವರು ಮಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.


 ಅಂಕ (ಮಾರ್ಕ್ಸ್)ಹಣ(ಮನಿ) ಮತ್ತು ವಸ್ತುಗಳ (ಮೆಟೀರಿಯಲ್ಸ್) ಹಿಂದೆ ಓಡುವುದು ಬಿಡಬೇಕು. ಹತ್ತು ನಿಮಿಷ ಕೂತಿದ್ದರೆ ಹತ್ತು ನಿಮಿಷ ಓಡಾಡಿ. ಸದಾ ಕ್ರಿಯಾಶೀಲವಾಗಿರಿ ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು.ಚಲನಚಿತ್ರ ನಿರ್ಮಾಪಕರೂ ಆಗಿರುವ ಬ್ಯಾಂಕಿನ ಗ್ರಾಹಕ ಬಿ.ಕೆ.ಶ್ರೀನಿವಾಸ್ ಅವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


VK DIGITAL NEWS:


Post a Comment

0Comments

Post a Comment (0)