ಬೆಂಗಳೂರು,ಆಗಸ್ಟ್ 21 (ಕರ್ನಾಟಕ ವಾರ್ತೆ): 2025ನೇ ಸಾಲಿನ ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಿ ಅಂಗೀಕರಿಸಲು ವಿಧಾನಸಭೆ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ ಎಂದು ಸಭಾಧ್ಯಕ್ಷ ಯು.,ಟಿ. ಖಾದರ್ ಹೇಳಿದರು.
ಶಾಸಕರಾದ ಸದರಿ ವಿಧೇಯಕವನ್ನು ಪ್ರಸ್ತಾಪಿಸಿ ಸದರಿ ವಿಧೇಯಕವು ಅಸಂಗತವಲ್ಲದ ಮತ್ತು ಅವಿಭಕ್ತ ಕುಟುಂಬದ ಎಲ್ಲಾ ಅಧಿಭೋಗದಾರರ ಹೆಸರುಗಳ ಅನುಸಾರ ಕೊಡಗು ಜಿಲ್ಲೆಯಲ್ಲಿ ಜಮ್ಮಾ ಬಾಣೆ ಭೂಮಿಗಳಿಗೆ ನಿಯಮಿಸಲಾದ ವಿಧಾನದಲ್ಲಿನ ಇತರೆ ಸೇರ್ಪಡೆಗಳು, ರದ್ದತಿಗಳು ಮತ್ತು ಸರಪಡಿಸುವಿಕೆಗಳು ಸಂಬಧಿಸಿದಾಗಿದ್ದು ಈ ವಿಧೇಯಕವು ತಿದ್ದುಪಡಿಗೆ ತದ್ವಿರುದ್ದವಾಗಿದೆ. ಸದರಿ ವಿಧೇಯಕವನ್ನು ಮತ್ತೊಮ್ಮೆ ಪರ್ಯಾಲೋಚಿಸಿ ತಿದ್ದುಪಡಿ ಮಾಡುವುದು ಅಗತ್ಯವೆಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ವಿರೋಧಪಕ್ಷದ ನಾಯಕರು ಇದೊಂದು ಗಂಭೀರ ವಿಚಾರವಾಗಿದ್ದು ಪರಿಶೀಲನೆ ಮಾಡುವುದು ಅಗತ್ಯವಾಗಿರುತ್ತದೆ ವಿಧಾನಸಭೆ ಆಯ್ಕೆ ಸಮಿತಿ ರಚಿಸಿ ಆಯ್ಕೆ ಸಮಿತಿಯ ಮುಂದೆ ಮಂಡಿಸಿ ತೀರ್ಮಾನಿಸುವುದು ಸೂಕ್ತವೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸದರಿ ವಿಧೇಯಕವನ್ನು ಪರ್ಯಾಲೋಚಿಸಿ ಇತ್ಯರ್ಥಪಡಿಸಲು ವಿಧಾನಸಭೆ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ ಎಂದು ಸಭಾಧ್ಯಕ್ಷ ಯು..ಟಿ ಖಾದರ್ ವಿಧಾನಸಭೆಯಲ್ಲಿ ತಿಳಿಸಿದರು.
