ಕರ್ನಾಟಕ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ 2025 ಅಂಗೀಕಾರ

varthajala
0

 ಬೆಂಗಳೂರು, ಆಗಸ್ಟ್ 21, (ಕರ್ನಾಟಕ ವಾರ್ತೆ) :

ಕರ್ನಾಟಕ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ  ಅಂಗೀಕಾರ ದೊರೆಯಿತು.
ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿರುವ 2025ನೇ ಸಾಲಿನ “ಕರ್ನಾಟಕ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ”ವನ್ನು ಮಾನ್ಯ ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅವರು ಅಂಗೀಕಾರ ಮಾಡುವಂತೆ ಪರ್ಯಾಲೋಚನೆಗೆ ಮಂಡಿಸಿದರು.
ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ 1976 (1977ರ ಕರ್ನಾಟಕ ಅಧಿನಿಯಮ 14)ನ್ನು ಮತ್ತಷ್ಟು ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಿ, ಕಡಿತಗೊಳಿಸುವಿಕೆ ಮತ್ತು ಅನಿಯಂತ್ರಣಗೊಳಿಸುವಿಕೆಯನ್ನು ಅನುಪಾಲಿಸುವುದಕ್ಕಾಗಿ ಭಾರತ ಸರ್ಕಾರದ ಶಿಫಾರಸ್ಸುಗಳನ್ನು ನಿಯಮಿತಗೊಳಿಸುವುದು, ಕಟ್ಟಡ ನಕ್ಷೆಗಳ ಅನುಮತಿಗಳನ್ನು ಮಂಜೂರು ಮಾಡುವ ಕಾರ್ಯ ವಿಧಾನವನ್ನು ಸರಳೀಕರಿಸುವುದು, ಅನುಮತಿಸಲಾದ ನಕ್ಷೆಗಳ ಉಪಬಂಧಗಳನುಸಾರ ನಿರ್ಮಾಣಗಳನ್ನು ಮಾಡಿರುವುದನ್ನು ಸ್ಪಷ್ಟಪಡಿಸಲು ಮತ್ತು ಸ್ಥಳೀಯ ಪ್ರಾಧಿಕಾರಕ್ಕೆ ವರದಿ ನೀಡಲು, ಕಟ್ಟಡದ ನಿವೇಶನಗಳಿಗೆ ನಿರ್ಮಾಣದ ಮೊದಲು, ನಿರ್ಮಾಣದ ಸಮಯದಲ್ಲಿ ಮತ್ತು ಸಂದರ್ಭಾನುಸಾರ ನಿರ್ಮಾಣದ ತರುವಾಯ ಪಟ್ಟಿ ಮಾಡಲಾದ ವೃತ್ತಿಪರರನ್ನು ತಪಾಸಣೆ ಮಾಡಲು ಉಪಬಂಧಗಳನ್ನು ಪರಿಚಯಿಸುವುದು, ಸ್ವಯಂ ಪ್ರಮಾಣೀಕರಣದ ಮುಖಾಂತರ ಸರ್ಕಾರವು ಅಧಿಸೂಚಿಸಿದಂತೆ ಕಟ್ಟಡಗಳಿಗೆ ಅನುಮತಿ ಮಂಜೂರು ಮಾಡುವುದನ್ನು ಒಳಗೊಳ್ಳುವುದು, ಉಲ್ಲಂಘನೆಯ ಪ್ರಕರಣಗಳಲ್ಲಿ ಪಟ್ಟಿ ಮಾಡಲಾದ ವೃತ್ತಿಪರರಿಗೆ ದಂಡನಾ ಉಪಬಂಧವನ್ನು ಒಳಗೊಳ್ಳುವುದು, ಮಾಲೀಕರಿಂದ ಪಟ್ಟಿ ಮಾಡಲಾದ ವೃತ್ತಿಪರರು ಶುಲ್ಕವನ್ನು ಸಂಗ್ರಹಿಸುವುದನ್ನು ಒಳಗೊಂಡಂತೆ ಮುನ್ಸಿಪಾಲಿಟಿಗಳು ಲೆವಿಯನ್ನು ವಿಧಿಸುವುದಕ್ಕಾಗಿ ಉಪಬಂಧಗಳನ್ನು ಕಲ್ಪಿಸುವುದು ಮತ್ತು ವ್ಯಾಪಾರ ಲೈಸೆನ್ಸ್‍ನ್ನು ತರ್ಕಬದ್ಧಗೊಳಿಸುವುದು ಎಂದು ತಿಳಿಸಿದ ಸಚಿವರು ವಿಧೇಯಕವನ್ನು ಅಂಗೀಕಾರ ಮಾಡುವಂತೆ ಮಾನ್ಯ ಸಭಾಪತಿಗಳನ್ನು ಕೋರಿದರು.
“ಕರ್ನಾಟಕ ಮುನ್ಸಿಪಾಲಿಟಿಗಳ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ 2025”ಕ್ಕೆ ಮಾನ್ಯ ಸಭಾಪತಿಗಳಿಂದ ಅಂಗೀಕಾರ ದೊರೆಯಿತು.  

Post a Comment

0Comments

Post a Comment (0)