ಹಾಸನದ ಉತ್ತರ ಬಡಾವಣೆಯಲ್ಲಿ ಸ್ಥಾಪಿತವಾಗಿರುವ ಸಂಸ್ಥೆ ನಾಟ್ಯ ಕಲಾ ನಿವಾಸ್ ವತಿಯಿಂದ ಆಗಸ್ಟ್ ೨ ರಂದು, ಹಾಸನಾಂಬ ಕಲಾಕ್ಷೇತ್ರದಲ್ಲಿ ತನ್ನ ೧೮ ನೇ ವರ್ಷದ ವಾರ್ಷಿಕೋತ್ಸವನ್ನು ಆಚರಿಸಿಕೊಳ್ಳುತ್ತಿದೆ.
ಈ ಸಂಭ್ರಮದ ಸಲುವಾಗಿ, 2 ವಿಶೇಷ ಕಾರ್ಯಕ್ರಮವನ್ನು ಆಯೋಜನೆ ಮಾಡಿಕೊಂಡಿದೆ. ಸಂಜೆ 4 ಗಂಟೆಗೆ ಸರಿಯಾಗಿ ' ಹರಿಹರ ಸುತ' - (ಅಯ್ಯಪ್ಪ ಸ್ವಾಮಿಯ ಚರಿತ್ರೆ ) ಎಂಬ ನೃತ್ಯ ನಾಟಕ ಹಾಗೂ ಸಂಜೆ 6 ಗಂಟೆಯಿಂದ ಕರ್ನಾಟಕದ ಪ್ರತಿಷ್ಠಿತ ನೃತ್ಯ ಕಲಾವಿದರಿಂದ 'ನಾಟ್ಯ ದಾಸೋಹಂ' ಹರಿದಾಸರ ಸುಂದರ ರಚನೆಯ ಅದ್ವಿತೀಯ ಪ್ರದರ್ಶನವನ್ನುಆಯೋಜನೆ ಮಾಡಿಕೊಳ್ಳಲಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲರು ಉನ್ನತ್ ಜೈನ್ ತಿಳಿಸಿದ್ದಾರೆ.