ಕರ್ನಾಟಕ ರಾಜ್ಯವು ರಚನೆಯಾಗಿ ೭೦ ವರ್ಷಗಳಾಗುತ್ತಿರುವ, ಕನ್ನಡವನ್ನು ಆಡಳಿತ ಭಾಷೆ ಎಂದು ರಾನ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿ ೬೨ ವರ್ಷಗಳಾಗಿದೆ (೧೯೬೩). ಆದರೆ, ಪ್ರಸ್ತುತ ನಡೆಯುತ್ತಿರುವ ವಿಧಾನಸಭೆ ಮುಂಗಾರು ಅಧೀವೇಶನದಲ್ಲಿ ವಿದೇಯಕ ಮಂಡನೆಯಾಗುವು ವೇಳೆ ಸದಸ್ಯರಿಗೆ ವಿಧೇಯಕಗಳ ಇಂಗ್ಲಿಷ್ ಪ್ರತಿಗಳನ್ನು ನೀಡುವ ಮೂಲಕ ವಿಧಾನ ಪರಷತ್ ಸಚಿವಾಲಯದ ಸಿಬ್ಬಂದಿ ಕನ್ನಡ ಭಾಷೆಯನ್ನು ಅವಮಾನಿಸಿದೆ ಇದನ್ನು ಕನ್ನಡ ಗೆಳೆಯರ ಬಳಗವು ತೀವ್ರವಾಗಿ ಖಂಡಿಸುತ್ತದೆ ಮತ್ತು ಕನ್ನಡ ವಿರೋಧಿ ಕೃತ್ಯ ಎಸಗಿದವರನ್ನು ಅಮಾನತು ಗೊಳಿಸಬೇಕೆಂದು
ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್ ಅವರು ‘ವಿಧೇಯಕದ ಕನ್ನಡ ಪ್ರತಿ ಕೊಡಿ ಎಂದು ಕೇಳಿದರೂ ಸಚಿವಾಲಯದ ಸಿಬ್ಬಂದಿಗಳು ಹುಡುಕಾಟ ನಡೆಸಿ ಕನ್ನಡ ಪ್ರತಿ ಇಲ್ಲ’ ಎಂದು ಹೇಳುತ್ತಾರೆ ಎಂದು ಸದನದಲ್ಲೇ ಹೇಳಿದ್ದಾರೆ. ಸಿಬ್ಬಂದಿ ಈ ನಡೆ ಕನ್ನಡಕ್ಕೆ ಮಾಡಿರುವ ಅವಮಾನ ಮಾತ್ರವಲ್ಲ, ಸಂವಿಧಾನದ ಸ್ಪಷ್ಟ ಉಲ್ಲಂಘನೆ ಆಗಿದೆ. ಈ ವಿಚಾರವಾಗಿ ಸರ್ಕಾರವು ಬಹಿರಂಗವಾಗಿ ಸ್ಪಷ್ಟನೆ ನೀಡಬೇಕೆಂದು ಕನ್ನಡ ಗೆಳೆಯರ ಬಳಗವು ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷರಾಗಿದ್ದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರನ್ನು ಒತ್ತಾಯಿಸುತ್ತದೆ ಮತ್ತು ಕನ್ನಡವನ್ನು ಕಡೆಗಣಿಸಿರುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ಆಗ್ರಹಿಸುತ್ತದೆ. ಕನ್ನಡದಲ್ಲಿ ವಿಧೇಯಕವನ್ನು ಸಿದ್ಧಪಡಿಸಿ ಅದನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಬೇಕು ಮತ್ತ ಶಾಸಕರಿಗೆ ಮತ್ತು ರಾಜ್ಯದ ಜನತೆಗೆ ಕನ್ನಡ ಭಾಷೆಯ ವಿಧೇಯಕದ ಪ್ರತಿಯನ್ನೇ ನೀಡಬೇಕು ಎಂದು ಕನ್ನಡ ಗೆಳೆಯರ ಬಳಗವು ಮನವಿ ಮಾಡುತ್ತದೆ.