ಕರ್ನಾಟಕಕ್ಕೆ ಕಳಂಕ ಮೆತ್ತಿದ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣರವರ ಮೇಲಿನ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಆರೋಪ ಸಾಬೀತಾಗಿದೆ. ಜನಪ್ರತಿನಿಧಿಗಳ ನ್ಯಾಯಾಲಯದ ಈ ಘೋಷಣೆ ಲಿಂಗತ್ವ ಸಮನ್ಯಾಯದ ಪರವಾದ ಎಲ್ಲ ಶಕ್ತಿಗಳಿಗೆ ಸಂದ ಜಯವೆಂದು ಸಿಪಿಐ(ಎಂ) ಹೇಳಿದೆ.
ಅಧಿಕಾರ ಮತ್ತು ಸಂಪತ್ತಿನ ಮದದಿಂದ ಸೊಕ್ಕಿ ನಡೆಸಿದ ಸರಣಿ ಲೈಂಗಿಕ ದೌರ್ಜನ್ಯಗಳಲ್ಲಿ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದ ತೀರ್ಪು ಇದಾಗಿದೆ.
ಲೈಂಗಿಕ ದುರಾಚಾರ ನಡೆಸಿ ಅದರ ವಿಡಿಯೋ ಚಿತ್ರೀಕರಣ ಮಾಡಿ ಬ್ಲಾಕ್ ಮೇಲ್ ಮಾಡುವಷ್ಟು ಹೇಯ ಕೃತ್ಯಕ್ಕೆ ಅತ್ಯುಗ್ರ ಶಿಕ್ಷೆ ನೀಡುವುದೆ ಸೂಕ್ತವಾದದ್ದು.
ಪ್ರಕರಣ ಬೆಳಕಿಗೆ ಬಂದ ತಕ್ಷಣ ಹಾಸನದಲ್ಲಿ ರಾಜ್ಯದ ಎಲ್ಲ ಪ್ರಗತಿಪರ ಸಂಘಟನೆಗಳು, ಶಕ್ತಿಗಳು ಮಾಡಿದ ಪ್ರತಿಭಟನೆಗೆ ಸಿಪಿಐ(ಎಂ) ಬೆಂಬಲ ನೀಡಿತ್ತು. ಕಳೆದ ಮೇ ತಿಂಗಳಲ್ಲಿ ನಡೆದ ಬೃಹತ್ ಪ್ರತಿಭಟನಾ ಪ್ರದರ್ಶನದಲ್ಲಿ ಪಕ್ಷದ ಪೆÇಲಿಟ್ ಬ್ಯೂರೋ ಸದಸ್ಯರಾದ ಕಾಂ.ಸುಭಾಷಿಣಿ ಅಲಿ ಯವರು ಬೆಂಬಲಿಸಿ ಪಾಲ್ಗೊಂಡಿದ್ದರು.
ಈ ಪ್ರಕರಣದಲ್ಲಿ ಎಲ್ಲ ಒತ್ತಡಗಳಿದ್ದಾಗ್ಯೂ ಹೆದರದೇ ಧೈರ್ಯದಿಂದ ಮುಂದೆ ಬಂದ ಸಂತ್ರಸ್ಥರಿಗೆ ಅಭಿನಂದಿಸುತ್ತದೆ. ಅವರ ರಕ್ಷಣೆ ಮತ್ತು ಜೀವನ ನಿರ್ವಹಣೆಗೆ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಬೇಕೆಂದು ಒತ್ತಾಯಿಸುತ್ತದೆ.
ಸಮರ್ಥವಾಗಿ ತನಿಖೆ ನಡೆಸಿ ಆರೋಪ ಸಾಬೀತು ಪಡಿಸಲು ಶ್ರಮವಹಿಸಿದ ವಿಶೇಷ ತನಿಖಾ ತಂಡ ಮತ್ತು ನ್ಯಾಯವಾದಿಗಳನ್ನು ಅಭಿನಂದಿಸುತ್ತದೆ.