ರಾಷ್ಟ್ರ ಮಟ್ಟದ ದಸರಾ ಕಲಾ ಪ್ರದರ್ಶನಕ್ಕೆ ಕಲಾಕೃತಿಗಳ ಆಹ್ವಾನ

varthajala
0

 ಬೆಂಗಳೂರು, ಆಗಸ್ಟ್ 28, (ಕರ್ನಾಟಕ ವಾರ್ತೆ):

ನಾಡಹಬ್ಬ ಮೈಸೂರು ದಸರಾ ಮಹೋತ್ಸವ 2025ರಲ್ಲಿ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ವತಿಯಿಂದ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು, ಸಿದ್ಧಾರ್ಥನಗರ, ಮೈಸೂರು ಸಂಸ್ಥೆಯ ಆವರಣದಲ್ಲಿ 2025ನೇ ಸೆಪ್ಟೆಂಬರ್   26 ರಿಂದ 30ರ ವರೆಗೆ ನಡೆಯುವ ರಾಷ್ಟ್ರ ಮಟ್ಟದ ದಸರಾ ಕಲಾ ಪ್ರದರ್ಶನಕ್ಕೆ ಕಲಾಕೃತಿಗಳನ್ನು ಆಹ್ವಾನಿಸಲಾಗಿದೆ.
ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್ ಕಲೆ, ಛಾಯಾಚಿತ್ರ ಅನ್ವಯಕಲೆ ವಿಭಾಗಗಳಲ್ಲಿ ವೃತ್ತಿಪರ ಹಾಗೂ ಹವ್ಯಾಸಿ ವಿಭಾಗಗಳಿರುತ್ತದೆ. ಸಾಂಪ್ರದಾಯಿಕ ಶಿಲ್ಪಕಲೆ, ಸಾಂಪುದಾಯಿಕ ಚಿತ್ರಕಲೆ, ಕರಕುಶಲ ಕಲೆ / ಇನ್ಲೆ ವಿಭಾಗಗಳಲ್ಲಿ ಹವ್ಯಾಸಿ ವಿಭಾಗಗಳಿರುವುದಿಲ್ಲ.

ಎಲ್ಲಾ ವಿಭಾಗಗಳಲ್ಲಿ ಅತ್ಯುತ್ತಮ ಮೂರು ಕಲಾಕೃತಿಗಳಿಗೆ ಬಹುಮಾನಗಳನ್ನು ನೀಡಲಾಗುವುದು ಕಲಾಕೃತಿಗಳನ್ನು 2025ನೇ ಆಗಸ್ಟ್ 28 ರಿಂದ ಸೆಪ್ಟೆಂಬರ್ 12 ರೊಳಗೆ ಬೆಳಿಗ್ಗೆ, 10.30 ರಿಂದ ಸಂಜೆ 5.30 ರವರೆಗೆ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು (ಕಾವಾ), ಸಿದ್ಧಾರ್ಥನಗರ, ಮೈಸೂರು-570011, ಸಂಸ್ಥೆಯ ಕಚೇರಿ ಅವಧಿಯಲ್ಲಿ ಸಲ್ಲಿಸುವುದು.
ಕಲಾಕೃತಿಗಳನ್ನು ಸಲ್ಲಿಸುವ ಕಲಾವಿದರು, ಸಂಪೂರ್ಣ ವಿವರವನ್ನು ಸ್ವಯಂ ದೃಢೀಕರಣದೊಂದಿಗೆ ಉಪಸಮಿತಿಗೆ ತಲುಪಿಸುವುದು. ಅರ್ಜಿ ನಮೂನೆಯನ್ನು ವೆಬ್‍ಸೈಟ್ karnataka.gov.in & https://mysore.nic.inಮೂಲಕ ಪಡೆಯಬಹುದಾಗಿದೆ.
ಹೆಚ್ಚಿನ ವಿವರಗಳಿಗಾಗಿ ಲಲಿತಕಲೆ ಮತ್ತು ಕರಕುಶಲ ಕಲೆ ಉಪಸಮಿತಿಯ  ಚಂದ್ರಶೇಖರ್ ಎ.ಪಿ. ಮೊಬೈಲ್ ಸಂಖ್ಯೆ 9844595568, ವಿನಯ್ ಹೆ.ಎಸ್., ಮೊಬೈಲ್ ಸಂಖ್ಯೆ 9741220222 ಅಥವಾ ದೀಪಕ್ ಕುಮಾರ ಕೆ ಜೆ  ಮೊಬೈಲ್ ಸಂಖ್ಯೆ 9036162453 ಇವರನ್ನು ಸಂಪರ್ಕಿಸಬಹುದು ಎಂದು ಮೈಸೂರು ದಸರಾ-2025,  ಲಲಿತಕಲೆ ಮತ್ತು ಕರಕುಶಲ ಉಪಸಮಿತಿಯ ಕಾರ್ಯಾಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)