ಚಲನಚಿತ್ರ ನಟಿ ಹಾಗೂ ಮಾಜಿ ಸಂಸದೆಯಾದ ರಮ್ಯಾ/ದಿವ್ಯಸ್ಪಂದನ ರವರು ಮೃತ ರೇಣುಕಾಸ್ವಾಮಿ ಕೊಲೆ ಪ್ರಕರಣಣಕ್ಕೆ ಸಂಬಧಿಸಿದತೆ, ಭಾರತದ ಗೌರವಾನ್ವಿತ ಸರ್ವೋಚ್ಚ ನ್ಯಾಯಾಲಯದ ಮುಂದೆ ದಿನಾಂಕ:24/07/2025 ರಂದು ವಿಚಾರಣೆಗೆ ಬಂದಿರುತ್ತದೆ. ಮಾನ್ಯ ಉಚ್ಚ ನ್ಯಾಯಾಲಯದ ಕಲಾಪಗಳ ಬಗ್ಗೆ ಸುದ್ಧಿ ವಾಹಿನಿಗಳು ತಮ್ಮ ವೆಬ್‌ಸೈಟ್‌ಗಳಲ್ಲಿ ವರದಿಮಾಡಲಾಗಿರುತ್ತದೆ. ಈ ಕುರಿತು ನಟಿ ರಮ್ಯಾ ರವರು ಮಾಜಿ ಚುನಾಯಿತ ಪ್ರತಿನಿಧಿಯಾಗಿದ್ದು, ಮಾನ್ಯ ಸುಪ್ರೀಂಕೋರ್ಟ್ನ ಕಾರ್ಯಕಲಾಪಗಳ ಸುದ್ದಿ ವರದಿಯನ್ನು ಅವರ ಇನ್‌ಸ್ಟಾçಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊAಡಿರುತ್ತಾರೆ.
ನಟಿ ರಮ್ಯಾ ರವರು ತಮ್ಮ ಖಾತೆಗಳಲ್ಲಿ ಸುಮಾರು 1.1 ಮಿಲಿಯನ್‌ಗಳಿಗಿಂತಲೂ ಹೆಚ್ಚು ಅಭಿಮಾನಿಗಳನ್ನು ಹೊಂದಿರುತ್ತಾರೆ. ನಟಿ ರಮ್ಯಾ ರವರು ಇನ್‌ಸ್ಟಾçಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಹಂಚಿಕೊAಡಿದ್ದರ ವಿರುದ್ಧ ಅತೃಪ್ತಗೊಂಡ ಅಭಿಮಾನಿಗಳು ವಿವಿಧ ಖಾತೆಗಳ ಮೂಲಕ ಅವಹೇಳನಕಾರಿ, ಅಶ್ಲೀಲ/ಅಸಹ್ಯಕರ ಹಾಗೂ ಕೊಲೆ ಬೆದರಿಕೆ, ಬಲಗ್ರಹಣದಂತಹ ಸಂದೇಶಗಳನ್ನು ಕಾಮೆಂಟ್ ಮಾಡಿರುತ್ತಾರೆ. ಈ ಸಂದೇಶಗಳು ಸ್ತಿದ್ವೇಷಪೂರಿತವಾಗಿರುತ್ತವೆ. ಈ ಕುರಿತು ನಟಿ ರಮ್ಯಾ ರವರು ಸಂದೇಶಗಳನ್ನು ಕಾಮೆಂಟ್‌ಗಳನ್ನು ಮಾಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ದಿನಾಂಕ:28/07/2025 ರಂದು ಮಾನ್ಯ ಪೊಲೀಸ್ ಆಯುಕ್ತರಿಗೆ ದೂರನ್ನು ಸಲ್ಲಿಸಿರುತ್ತಾರೆ.
ದೂರನ್ನು ಸ್ವೀಕರಿಸಿದ ಸೈಬರ್ ಕ್ರೆö ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಂಡು ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗಳು ಉಪಯೋಗಿಸಿದ ಖಾತೆಗಳ ಜಾಡನ್ನು ಹಿಡಿದು, ಅವರುಗಳ ಮಾಹಿತಿಪಡೆದು, ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿರುತ್ತದೆ. ಆರೋಪಿಗಳನ್ನು ವಿಚಾರಿಸಲಾಗಿ ಅವರು ಈ ಕೃತ್ಯಗಳನ್ನು ಎಸಗಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾರೆ. ಸದ್ಯಕ್ಕೆ ಆರೋಪಿಗಳು ಪೊಲೀಸ್ ಅಭಿರಕ್ಷೆಯಲ್ಲಿದ್ದು, ಹೆಚ್ಚಿನ ತನಿಖೆಗೆ ಒಳಪಡಿಸಿದ್ದು, ತನಿಖೆ ಮುಂದುವರೆದಿದೆ. ಅದೇ ರೀತಿ ಟ್ಟಿಟ್ ಮಾಡಿದ ಇನ್ನೂ 11 ವ್ಯಕ್ತಿಗಳ ಮಾಹಿತಿ ಸಂಗ್ರಹಿಸಿದ್ದು, ಮುಂದಿನ ತನಿಖೆಯಲ್ಲಿ ಅವರುಗಳನ್ನು ವಶಕ್ಕೆ ಪಡೆದುಕೊಳ್ಳಲಾಗುತ್ತದೆ. ಈ ಪ್ರಕರಣದಲ್ಲಿ ಸುಮಾರು 48 ಕ್ಕೂ ಹೆಚ್ಚು ಆರೋಪಿಗಳು ಟ್ವಿಟ್ ಮಾಡಿದ್ದು, ಆರೋಪಿಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಲೆಮರೆಸಿಕೊಂಡಿರುತ್ತಾರೆ. ಅವರ ಪತ್ತೆಕಾರ್ಯ ಮುಂದುವರೆದಿದೆ.
VK DIGITAL NEWS:ಧರ್ಮಸ್ಥಳ - ಅಸ್ತಿಪಂಜರದ ಅವಶೇಷಗಳು ಪತ್ತೆ ; ಮಾಲೆಗಾಂವ್ ಪ್ರಕರಣ - ಆರೋಪಿಗಳ ಖುಲಾಸೆ