ಕೆಂಪೇಗೌಡ ಬಸ್ ನಿಲ್ದಾಣದ ಧನ್ವಂತರಿ ರಸ್ಥೆಯಲ್ಲಿ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಎಟಿಎಂ ಪ್ರಾರಂಭ

varthajala
0

 ಕೆಂಪೇಗೌಡ ಬಸ್ ನಿಲ್ದಾಣದ ಧನ್ವಂತರಿ ರಸ್ತೆಗೆ ಹೊಂದಿಕೊಂಡಂತೆ ಯಾವುದೇ ಬ್ಯಾಂಕ್ ಎಟಿಎಂ ಸೌಲಭ್ಯವಿರಲಿಲ್ಲ. ನಿಗಮದ ಸಿಬ್ಬಂದಿಗಳು ಹಾಗೂ ಪ್ರಯಾಣಿಕರು ತುರ್ತು ಕೆಲಸಕ್ಕಾಗಿ ಹಣ ಪಡೆಯಲು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡು ಇಂದು ಧನ್ವಂತರಿ ರಸ್ತೆಗೆ ಹೊಂದಿಕೊಂಡಂತೆ ಕೆಂಪೇಗೌಡ ಬಸ್ ನಿಲ್ದಾಣದ ಟರ್ಮಿನಲ್ 1 ರ ಮುಖ್ಯ ರಸ್ತೆಯಲ್ಲಿ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಎಟಿಎಂ ಅನ್ನು ಪ್ರಾರಂಭಿಸಿದ್ದು, ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂಪಾಷ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ  ಉಮೇಶಕುಮಾರ್ ಸಿಂಗ್ ಪ್ರಾದೇಶಿಕ ಮುಖ್ಯಸ್ಥರು, ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಬೆಂಗಳೂರು ವಲಯ, ಸಂತೋಷ ಕುಮಾರ್ ಪಾಂಡೆ, ಎಜಿಎಂ, ಇಂಡಿಯನ್ ಓವರ್ ಸೀಸ್ ಬ್ಯಾಂಕ್, ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಬಸ್ ನಿಲ್ದಾಣದ ಪರಿವೀಕ್ಷಣೆ ನಡೆಸಿದ ವ್ಯವಸ್ಥಾಪಕ ನಿರ್ದೇಶಕರು ಮುಂಗಡ ಟಿಕೇಟ್ ಕಾಯ್ದಿರಿಸುವ ಕೇಂದ್ರ, ವಾಣಿಜ್ಯ ಮಳಿಗೆಗಳು, ಒಪ್ಪಂದ ಮೇರೆಗೆ ನೀಡುವ ವಾಹನ ಕೇಂದ್ರ, ಬಸ್ ನಿಲ್ದಾಣದ ಸ್ವಚ್ಚತೆಯನ್ನು ಪರಿವೀಕ್ಷಣೆ ನಡೆಸಿದರು.
VK DIGITAL NEWS:ಶ್ರಾವಣ ಶನಿವಾರ ಆಚರಣೆ ಮಾಡುವುದು ಹೇಗೆ...? ರಾಧಿಕಾ ಹೃಷಿಕೇಶ್‌ ವಿವರವಾಗಿ ತಿಳಿಸಿದ್ದಾರೆ.


Post a Comment

0Comments

Post a Comment (0)