ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಜುಲೈ ಅವೃತ್ತಿಯಲ್ಲಿ ಪ್ರಥಮ / ದ್ವಿತೀಯ ಸಾಲಿಗೆ ಪ್ರವೇಶಾತಿ

varthajala
0

 ಬೆಂಗಳೂರು, ಆಗಸ್ಟ್ 19, (ಕರ್ನಾಟಕ ವಾರ್ತೆ) : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2021-22, 2022-23, 2023-24, 2024-25ರ ಜುಲೈ ಆವೃತ್ತಿಗಳಲ್ಲಿ ಪ್ರಥಮ/ದ್ವಿತೀಯ ಸಾಲಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳು 2025-26ನೇ ಸಾಲಿಗೆ (ಜುಲೈ ಆವೃತ್ತಿ) ದ್ವಿತೀಯ/ತೃತೀಯ ಬಿ.ಎ/ಬಿ.ಕಾಂ, ಬಿ.ಎಸ್ಸಿ. (ಜನರಲ್/ಹೋಮ್/ಸೈನ್ಸ್/ಐಟಿ), ಬಿ.ಸಿಎ., ಬಿ.ಬಿ.ಎ ಹಾಗೂ 2022-23, 2023-24, 2024-25 (ಜುಲೈ) ಅಂತಿಮ ಎಂ.ಎ(ಎಂ.ಸಿ.ಜೆ)/ಎಂ.ಕಾಂ, ಎಂ.ಬಿ.ಎ., ಎಂ.ಎಸ್ಸಿ., ಕೋರ್ಸ್‍ಗಳಿಗೆ ಬೋಧನಾ ಶುಲ್ಕವನ್ನು  ನಿಗದಿಪಡಿಸಿದೆ.

ದ್ವಿತೀಯ/ತೃತೀಯ ಬಿ.ಎ/ಬಿ.ಕಾಂ, ಬಿ.ಎಸ್ಸಿ. (ಜನರಲ್/ಹೋಮ್/ಸೈನ್ಸ್/ಐಟಿ), ಬಿ.ಸಿಎ., ಬಿ.ಬಿ.ಎ, ಬಿ.ಎಸ್.ಡಬ್ಲ್ಯೂ ಹಾಗೂ ಅಂತಿಮ ಎಂ.ಎ(ಎಂ.ಸಿ.ಜೆ)/ಎಂ.ಕಾಂ, ಎಂ.ಬಿ.ಎ., ಎಂ.ಎಸ್ಸಿ., ಎಂ.ಸಿ.ಎ, ಎಂ.ಎಸ್.ಡಬ್ಲ್ಯೂ ಕೋರ್ಸ್‍ಗಳಿಗೆ ವಿಶ್ವವಿದ್ಯಾನಿಲಯ ನಿಗದಿ ಪಡಿಸಿದ ಬೋಧನಾ ಶುಲ್ಕವನ್ನು ದಂಡವಿಲ್ಲದೆ ಶುಲ್ಕ ಪಾವತಿಸಲು 2025ನೇ ಆಗಸ್ಟ್ 30 ಹಾಗೂ ರೂ. 200 ದಂಡದೊಡನೆ ಪಾವತಿಸಲು 2025ನೇ  ಸೆಪ್ಟಂಬರ್ 10 ಮತ್ತು  ರೂ. 400 ದಂಡದೊಡನೆ ಶುಲ್ಕ ಪಾವತಿಸಲು 2025ನೇ ಸೆಪ್ಟಂಬರ್ 26 ಕೊನೆಯ ದಿನಾಂಕವಾಗಿರುತ್ತದೆ.
ವಿದ್ಯಾರ್ಥಿಗಳು ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‍ಸೈಟ್ www.ksoumysuru.ac.in    ಮೂಲಕ ತಾವೇ ಪರೀಕ್ಷಾಶುಲ್ಕವನ್ನು ಪಾವತಿಸಿಕೊಂಡು ಶುಲ್ಕ ಪಾವತಿಸಿ 15 ದಿನಗಳ ಒಳಗಾಗಿ ಪ್ರವೇಶಾತಿ ಮಾಡಿದ ಪ್ರಾದೇಶಿಕ ಕೇಂದ್ರಕ್ಕೆ ಖುದ್ದಾಗಿ ಭೇಟಿ ನೀಡಿ ಪ್ರವೇಶಾತಿ ನವೀಕರಣ ಪೂರ್ಣಗೊಳಿಸಬೇಕು.
ಹೆಚ್ಚಿನ ವಿವರಗಳಿಗೆ ಪ್ರಾದೇಶಿಕನಿರ್ದೇಶಕರು, ಬೆಂಗಳೂರು ಪ್ರಾದೇಶಿಕ ಕೇಂದ್ರ-01, ಮೊದಲನೇಮಹಡಿ, ಕೆ.ಎಸ್.ಆರ್.ಟಿ.ಸಿ.ಸ್ಯಾಟಲೈಟ್ ಬಸ್ ನಿಲ್ದಾಣ, ಮೈಸೂರು ರಸ್ತೆ, ಬಾಪೂಜಿನಗರ, ಬೆಂಗಳೂರು-26, ಕಛೇರಿ ದೂರವಾಣಿ ಸಂಖ್ಯೆ 080-26603664 ಹಾಗೂ 9880626439 ಅಥವಾ 9019526439 ಅನ್ನು ಸಂಪರ್ಕಿಸಲು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ರೋಹಿತ್ ಹೆಚ್.ಎಸ್. ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Post a Comment

0Comments

Post a Comment (0)