ಸಂಸ್ಕತ ಹಾಗೂ ಕನ್ನಡ ಭಾಷೆಯಲ್ಲಿ ಆಗಮ ಶಿಕ್ಷಣ ಪಾಠ ಪ್ರವಚನ ನಡೆಸಿಕೊಂಡು ಬರಲಾಗುತ್ತಿದೆ - ಸಚಿವ ರಾಮಲಿಂಗಾರೆಡ್ಡಿ

varthajala
0

ಬೆಂಗಳೂರು, ಆಗಸ್ಟ್ 13, (ಕರ್ನಾಟಕ ವಾರ್ತೆ) : ಹಿಂದಿನಿಂದಲೂ ನಡೆದು ಬರುತ್ತಿರುವ ರೂಢಿ ಸಾಂಪ್ರದಾಯ ಪದ್ದತಿಗಳಿಗೆ ಅನುಸಾರವಾಗಿ ಮತ್ತು ರೂಢಿ ಮತ್ತು ಸಾಂಪ್ರದಾಯಗಳಿಗೆ ಯಾವುದೇ ಭಾದಕವಾಗದಂತೆ ಸಂಸ್ಕøತ ಭಾಷೆ ಹಾಗೂ ಕನ್ನಡ ಭಾಷೆಯಲ್ಲಿ ಆಗಮ ಶಿಕ್ಷಣ ಪಾಠ ಪ್ರವಚನಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದು ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.



ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನ ಪರಿಷತ್ ಸದಸ್ಯೆ ಶ್ರೀಮತಿ ಭಾರತಿ ಶೆಟ್ಟಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997ರ ಸೆಕ್ಷನ್ 58 ರಲ್ಲಿ ಕಲ್ಪಿಸಿರುವಂತೆ ಧಾರ್ಮಿಕ ಸಂಸ್ಥಗೆ ಸೂಕ್ತವಾದ ಸಂಪ್ರದಾಯ ಆಚರಣೆ ಸಮಾರಂಭ ಮತ್ತು ಪದ್ದತಿಗಳಲ್ಲಿ ಹಸ್ತಕ್ಷೇಪವನ್ನು ಮಾಡದೇ ಮತ್ತು ಅವುಗಳನ್ನು ಪಾಲಿಸತಕ್ಕದ್ದರಿಂದ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ ಹಿಂದಿನಿಂದಲೂ ನಡೆದು ಬರುತ್ತಿರುವ ರೂಢಿ ಸಾಂಪ್ರದಾಯ ಪದ್ದತಿಗಳಿಗೆ ಅನುಸಾರವಾಗಿ ಮತ್ತು ರೂಢಿ ಮತ್ತು ಸಾಂಪ್ರದಾಯಗಳಿಗೆ ಯಾವುದೇ ಭಾದಕವಾಗದಂತೆ ಕ್ರಮ ವಹಿಸಬೇಕಾಗಿರುತ್ತದೆ. ಈ ನಿಟ್ಟಿನಲ್ಲಿ ಆಗಮ ಶಿಕ್ಷಣದಲ್ಲಿ ಸಂಸ್ಕøತ ಭಾಷೆಯಲ್ಲಿ ಗ್ರಂಥಗಳು ಇರುವುದರಿಂದ ಸಂಸ್ಕøತ ಭಾಷೆ ಹಾಗೂ ಕನ್ನಡ ಭಾಷೆಯಲ್ಲಿ ಆಗಮ ಶಿಕ್ಷಣ ಪಾಠ ಪ್ರವಚನಗಳನ್ನು ನಡೆಸಿಕೊಂಡು ಬರಲಾಗುತ್ತಿದೆ

ಆಗಮ ಶಿಕ್ಷಣವನ್ನು ಬೋಧಿಸುವ ಸಂದರ್ಭದಲ್ಲಿ ಸಂಸ್ಕøತ ಪಾಠಶಾಲೆಯ ಬೋಧಕ ವರ್ಗದ ಅಧ್ಯಾಪಕರು /ಪ್ರಾಧ್ಯಾಪಕರುಗಳು ಆಗಮ ಶಿಕ್ಷಣಾರ್ಥಿಗಳಿಗೆ ಕನ್ನಡದಲ್ಲಿ ಅರ್ಥಗಳನ್ನು ಹೇಳಿ ಬೋಧನೆಯ ಸಂದರ್ಭದಲ್ಲಿ ಕನ್ನಡವನ್ನು ಸಹ ಹೇಳಿ ಕೊಡಲಾಗುತ್ತಿದ್ದು, ವಿದ್ಯಾರ್ಥಿಗಳು ಪರೀಕ್ಷೆಯನ್ನು ಕನ್ನಡ ಮತ್ತು ಸಂಸ್ಕøತ ಎರಡು ಭಾಷೆಗಳಲ್ಲಿ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ರಾಜ್ಯದ ದೇವಾಲಯಗಳಲ್ಲಿ ಪೂಜಾ ಕೈಂಕರ್ಯಗಳನ್ನು ಕಲ್ಪಿಸಲು ಆಗಮ ಶಿಕ್ಷಣದಲ್ಲಿ ಸಂಸ್ಕøತ ಮತ್ತು ಕನ್ನಡ ಭಾಷಾ ಮಾಧ್ಯಮವನ್ನು ಸಹ ಅನುಸರಿಸಲಾಗುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿರುವ ಅಧಿಸೂಚಿತ / ಘೋಷಿತ ದೇವಾಲಯ/ ಸಂಸ್ಥೆಗಳ ಒಳಗೆ ಮತ್ತು ಹೊರಗೆ ಪರಿಸರವನ್ನು ಸಂಪೂರ್ಣವಾಗಿ ಸ್ವಚ್ಚವಾಗಿಡಲು ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಸ್ವಚ್ಚ ಮಂದಿರ ಅಭಿಯಾನ ಯೋಜನೆಯನ್ನು ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ರಾಜ್ದಯ ಸಮೂಹ ಎ, ಬಿ ಮತ್ತು ಸಿ ವರ್ಗದ ದೇವಾಲಯಗಳಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ದಿನಾಂಕ: 29-08-2015ರಂದು ಸುತ್ತೋಲೆ ಹೊರಡಿಸಲಾಗಿದೆ.
 
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲಾ ಅಧಿಸೂಚಿತ ಸಂಸ್ಥೆಗಳಲ್ಲಿ ಸ್ವಚ್ಚ ಮಂದಿರ ಅಭಿಯಾನ ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಧಾರ್ಮಿಕ ದತ್ತಿ ಆಯುಕ್ತರ ಕಚೇರಿಯಿಂದ ದಿನಾಂಕ: 10-04-2019 ರಂದು ಸೂತ್ತೋಲೆ ಹೊರಡಿಸಲಾಗಿದೆ.

ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಾಲಯಗಳಿಂದ ಛತ್ರಗಳಿಂದ ಉತ್ಪತಿಯಾಗುವ ಘನ ತ್ಯಾಜ್ಯಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡುವ ಸಂಬಂಧ ಧಾರ್ಮಿಕ ದತ್ತಿ ಆಯುಕ್ತರ ಕಚೇರಿಯಲ್ಲಿ ಪ್ರಾಜೆಕ್ಟ್ ಮ್ಯಾನೇಜ್‍ಮೆಂಟ್ ಘಟಕಚವೊಂದನ್ನು ಸ್ಥಾಪಿಸಿ ತಜ್ಞರನ್ನು ಒಳಗೊಂಡ ತಂಡದಿಂದ ಪ್ರಥಮ ಹಂತದಲ್ಲಿ ಇಲಾಖೆಗೆ ಸೇರಿದ ಪ್ರಮುಖ 25 ದೇವಾಲಯಗಳನ್ನು ಆಯ್ಕೆ ಮಾಡಿಕೊಂಡು ಘನ ತ್ಯಾಜ್ಯ ಘಟಕಗಳನ್ನು ಸ್ಥಾಪಿಸಲು ಸ್ಥಳ ಗುರುತಿಸಿಕೊಂಡು ತ್ಯಾಜ್ಯ ವಿಲೇವಾರಿಯನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಕ್ರಮ ವಹಿಸಲಾಗುತ್ತಿದೆ.

ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ದೇವಸ್ಥಾನಗಳಲ್ಲಿ ಆಗಸ್ಟ್ 15 ರಿಂದ ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತಗೊಳಿಸಿ ಸ್ವಚ್ಛತೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.

Post a Comment

0Comments

Post a Comment (0)