ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ

varthajala
0

 "ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮಾಚರಣೆ"  ಅಂಗವಾಗಿ ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್   ಫೌಂಡೇಶನ್(ರೀ) ಸಂಸ್ಥಾಪಕಿ  ಅಂಬಿಕಾ ಸಿ  ರವರು ದಿನಾಂಕ 17 ಆಗಸ್ಟ್ 2025 ರಂದು,  ಬೆಂಗಳೂರಿನ ಎಂ ಜಿ ರಸ್ತೆ, ಮೆಟ್ರೋ ರಂಗೋಲಿ ಸಭಾಂಗಣದಲ್ಲಿ, ಕೃಷ್ಣ ಜನ್ಮಾಷ್ಟಮಿ ಸಂಭ್ರಮಾಚರಣೆಯನ್ನು ಆಯೋಜಿಸಿದ್ದರು, 





ಈ ಸಂದರ್ಭದಲ್ಲಿ  ಕಲಾಧಾಮ ಕಥಕ್ ನೃತ್ಯ ಶಾಲೆಯ ಗುರುಗಳಾದ ನೂಪುರ್ ಭಾರ್ಗವ ರವರ ಶಿಷ್ಯರಾದ ಮೌಸಂ ಮೋಹಂತಿ ಮತ್ತು ಶಬ್ನಮ್ ಛತ್ರಿ ರವರುಗಳು ಕಥಕ್ ನೃತ್ಯ ಪ್ರದರ್ಶಿಸಿದರು, ಹಾಗೂ ಫ್ಯಾಶನ್ ನೃತ್ಯ ಶಾಲೆಯ  ಲಕ್ಷ್ಮೀಶ್ರೀರವರ ಶಿಷ್ಯರು ಗಳಾದ ಶಿವಾನ್ ಶಿಖ, ಶಾರಿಕ, ಶ್ರೇಯ ರವರುಗಳು ಕೃಷ್ಣ ಲೀಲ ವಿನೋದ ಸಂಬಂಧಿತ ನೃತ್ಯ ಪ್ರದರ್ಶನ ನೀಡಿದರು, ಈ ಸಂದರ್ಭದಲ್ಲಿ ವಿಶೇಷವಾಗಿ ಪುಟ್ಟ ಮಕ್ಕಳಾದ   ಕಾಶ್ವಿ  ಮತ್ತು ಓಜಶ್ವಿ - ಕೃಷ್ಣ  ವೇಷಭೂಷಣಧಾರಿಗಳಾಗಿ ಕೃಷ್ಣಾಷ್ಟಮಿಯನ್ನು ಬಹಳ ಸಂತಸದಿಂದ ಆಚರಿಸಿದರು. ಹಾಗೂ 

 ಪೋಷಕರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದರು.

Post a Comment

0Comments

Post a Comment (0)