ಬೆಂ ಗ್ರಾ ಜಿಲ್ಲೆಯಲ್ಲಿ ಶೀತಗಾಳಿ:ಮಾರ್ಗಸೂಚಿ ಬಿಡುಗಡೆ

varthajala
0

 ಬೆಂ ಗ್ರಾ ಜಿಲ್ಲೆ, ಡಿಸೆಂಬರ್ 24(ಕರ್ನಾಟಕ ವಾರ್ತೆ):  ರಾಜ್ಯಾದ್ಯ0ತ ಪ್ರಸ್ತುತ ಹೆಚ್ಚಾಗಿರುವ ತೀವ್ರ ಶೀತಗಾಳಿ ಹಿನ್ನೆಲೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಶೀತಗಾಳಿಯಿಂದಾಗುವ ಆರೋಗ್ಯ ಸಮಸ್ಯೆಗಳು ಮತ್ತು ಅದನ್ನು ತಡೆಯುವ ಉದ್ದೇಶದಿಂದ ಅಗತ್ಯ ಮಾರ್ಗಸೂಚಿಗಳನ್ನು ಹೊರಡಿಸಿದ್ದು, ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಲು ಸೂಚಿಸಿದೆ.



ಶೀತ ಅಲೆ/ಗಾಳಿಯಿಂದ ಸುರಕ್ಷತೆ ಪಡೆಯಲು ದಪ್ಪನಾದ ಒಂದೇ ಬಟ್ಟೆಯ ಬದಲಿಗೆ, ಹಲವು ಪದರಗಳ ಸಡಿಲವಾದ, ಹಗುರವಾದ,    ಉಣ್ಣೆಯ ಬಟ್ಟೆಗಳನ್ನು ಧರಿಸಿ.ಕೈ ಕಾಲುಗಳನ್ನು ಸಂಪೂರ್ಣವಾಗಿ ಮುಚ್ಚಿ, ತಲೆಗೆ ಟೋಪಿ/ಮಫ್ಲರ್ ಗಳನ್ನು ಹಾಕಿಕೊಳ್ಳಿ, ಬೆಚ್ಚಗಿನ ಕಾಲುಚೀಲಗಳು ಮತ್ತು ಜಲನಿರೋಧಕ (waterproof) ಶೂಗಳನ್ನು ಬಳಸಿ.

ಬಟ್ಟೆ ಒಣಗಿರಬೇಕು. ಬಟ್ಟೆ ಒದ್ದೆಯಾದರೆ (ಬೆವರಿನಿಂದ ಮಳೆಯಿಂದ ಇತ್ಯಾದಿ) ತಕ್ಷಣ ಬದಲಾಯಿಸಿ, ದೇಹವನ್ನು ಹೈಡ್ರೆಟ್ ಆಗಿಡಲು ಬೆಚ್ಚಗಿನ ದ್ರವಗಳನ್ನು (ನೀರು, ಗಿಡಮೂಲಿಕೆ ಚಹಾ ಮತ್ತು ಸೂಪ್ ಇತ್ಯಾದಿ) ನಿಯಮಿತವಾಗಿ ಕುಡಿಯಿರಿ. 

ರೋಗ ನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಮತ್ತು ದೇಹದ ಶಾಖವನ್ನು ಹೆಚ್ಚಿಸಲು ವಿಟಿಮಿನ್-ಸಿ ಸಮೃದ್ಧ ಹಣ್ಣುಗಳು ಮತ್ತು ತರಕಾರಿಗಳಂತಹ ಆರೋಗ್ಯಕರ ಆಹಾರಗಳನ್ನು ಸೇವಿಸಿ.

ಸಾಧ್ಯವಾದಷ್ಟು ಮನೆಯೊಳಗ ಇರಿ, ವಿಶೇಷವಾಗಿ ಹೆಚ್ಚು ಚಳಿಯಿರುವ ಸಮಯದಲ್ಲಿ (ಬೆಳಗಿನ ಜಾವ ಮತ್ತು ತಡರಾತ್ರಿ).

ದುರ್ಬಲರ ಬಗ್ಗೆ, ಗಮನ ಕೊಡಿ: ವೈದ್ಯರು, ಮಕ್ಕಳು ಮತ್ತು, ಶಿಶುಗಳು ಸಾಕಷ್ಟು ಬೆಚ್ಚಗಿರಲು ವಿಯಮಿತವಾಗಿ ಅವರನ್ನು ಪರಿಶೀಲಿಸಿ.

ಹೈಪೋಥರ್ಮಿಯಾ (ನಡುಕ, ಗೊಂದಲ, ತೊದಲುವ ಮಾತು) ಮತ್ತು ಫ್ರಾಸ್ಟ್ ಬೈಟ್ (ನಿಶ್ಲೇಷತೆ, ಬಿಳಿ ಅಥವಾ ಮೇಣದಂತಹ ಚರ್ಮ) ನಂತಹ ಚಳಿ-ಸಂಬಂಧಿತ ಕಾಯಿಲೆಗಳ ಲಕ್ಷಣಗಳನ್ನು ತಿಳಿದುಕೊಳ್ಳಿ.

ಚಳಿ ಮತ್ತು ಒಣಗಾಳಿಯಿಂದ ಚರ್ಮಬಿರುಕು ಬಿಡುವುದನ್ನು ತಡೆಯಲು ಎಣ್ಣೆ, ಪೆಟ್ರೋಲಿಯಂ, ಜೆಲ್ಲಿ ಅಥವಾ ಕ್ರೀಮ್‌ನಿಂದ ನಿಯಮಿತವಾಗಿ ಚರ್ಮವನ್ನು ತೇವಗೊಳಿಸಿ.

ದೂರದರ್ಶನ, ರೇಡಿಯೋ ಅಥವಾ ಪತ್ರಿಕೆಗಳ ಮೂಲಕ ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ದೈನಂದಿನ ಹವಾಮಾನ ಮಾಹಿತಿಯನ್ನು ನೋಡುತ್ತೀರಿ.

ಶೀತ ಅಲೆ/ಗಾಳಿ ಸಂದರ್ಭದಲ್ಲಿ ಮಾಡಬಾರದ ಕೆಲಸಗಳು

ಮದ್ಯಪಾನ ಮಾಡಬೇಡಿ. ಇದು ಬೆಚ್ಚಗಿನ ಭಾವನೆಯನ್ನು ನೀಡುತ್ತದೆ ಎಂಬುದು ಸುಳ್ಳು. ಆದರೆ ವಾಸ್ತವವಾಗಿ ನಿಮ್ಮ ದೇಹದ ಮುಖ್ಯ ತಾಪಮಾನವನ್ನು ಕಡಿಮೆ ಮಾಡುತ್ತದೆ, ಹೈಪೋಥರ್ಮಿಯಾದ ಅಪಾಯವನ್ನು ಹೆಚ್ಚಿಸುತ್ತದೆ.

ನಡುಕವನ್ನು ನಿರ್ಲಕ್ಷಿಸಬೇಡಿ. ಇದು ನಿಮ್ಮ ದೇಹವು ಶಾಖವನ್ನು ಕಳೆದುಕೊಳ್ಳುತ್ತಿದೆ ಎಂಬುದರ ಮೊದಲ ಚಿಹ್ನೆ. ತಕ್ಷಣ ಮನೆಯೊಳಗೆ ಹೋಗಿ.

ಫ್ರಾಸ್ಟ್ ಬೈಟ್ ಅಥವಾ ಚಳಿಯಿಂದ ಮರಗಟ್ಟಿದ ಚರ್ಮದ ಪ್ರದೇಶವನ್ನು ಉಜ್ಜಬೇಡಿ ಅಥವಾ ಮಸಾಜ್ ಮಾಡಬೇಡಿ. ಇದು ತೀವ್ರವಾದ ಅಂಗಾಂಶ ಹಾನಿಯನ್ನು ಉಂಟುಮಾಡಬಹುದು.

ಫ್ರಾಸ್ಟ್ ಬೈಟ್ ಆದ ಚರ್ಮವನ್ನು ಬೆಚ್ಚಗಾಗಿಸಲು ನೇರವಾದ, ತೀವ್ರವಾದ ಶಾಖವನ್ನು (ಹೀಟಿಂಗ್ರಾಡ್, ಬೆಂಕಿ ಅಥವಾ ಬಿಸಿನೀರು) ಬಳಸಬೇಡಿ, ಏಕೆಂದರೆ ನಿಶ್ಲೇಷಗೊಂಡ ಪ್ರದೇಶವು ಸುಲಭವಾಗಿ ಸುಟ್ಟು ಹೋಗಬಹುದು.

ಗಾಳಿಯಿಲ್ಲದ ಮುಚ್ಚಿದ ಕೋಣೆಯಲ್ಲಿ ಕಲ್ಲಿದ್ದಲು, ಕಟ್ಟಿಗೆ ಅಥವಾ ಕ್ಯಾಂಡಲ್‌ಗಳನ್ನು ಉರಿಸಬೇಡಿ. ಇದು ಮಾರಣಾಂತಿಕ ಕಾರ್ಬನ್ ಅಂಶಕ್ಕೆ ಕಾರಣವಾಗಬಹುದು.

ಬೆಂಕಿ ಅಥವಾ ತಾಪನ ಸಾಧನವನ್ನು ಹಾಗಾಗ ಗಮನಿಸುತ್ತಿರಿ.

ಹೆಚ್ಚು ದೈಹಿಕ ಶ್ರಮ ಮಾಡಬೇಡಿ (ಉದಾಹರಣೆಗೆ, ತೀವ್ರವಾದ ಹೊರಾಂಗಣ ಕೆಲಸ) ಹೆಚ್ಚು ಬೆವರುವಿಕೆಯು ನಿಮ್ಮ ಬಟ್ಟೆಗಳನ್ನು ಒದ್ದೆ ಮಾಡಿ ವೇಗವಾಗಿ ತಣ್ಣಗಾಗಲು ಕಾರಣವಾಗಬಹುದು.

Post a Comment

0Comments

Post a Comment (0)