ಲಿಡ್‍ಕರ್ - ಗೌರಿ-ಗಣೇಶ ಹಬ್ಬದ ಪ್ರಯುಕ್ತ ರಿಯಾಯಿತಿ ಮಾರಾಟ

varthajala
0

 ಬೆಂಗಳೂರು, ಆಗಸ್ಟ್ 19, (ಕರ್ನಾಟಕ ವಾರ್ತೆ) : ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತವು ಲಿಡ್‍ಕರ್‍ನ ರಾಜಾಜಿನಗರ (ಇಎಸ್‍ಐ ಆಸ್ಪತ್ರೆ ಹತ್ತಿರ, ವಿಶಾಲ್ ಮಾರ್ಟ್ ಎದುರು) ಮಾರಾಟ ಮಳಿಗೆಯಲ್ಲಿ ಗೌರಿ -ಗಣೇಶ ಹಬ್ಬದ ಪ್ರಯುಕ್ತ ಆಗಸ್ಟ್ 19 ರಿಂದ ಆಗಸ್ಟ್ 26ರ ವರೆಗೆ ಶೇ.15 ರಷ್ಟು ರಿಯಾಯಿತಿ ದರದಲ್ಲಿ  ಚರ್ಮದ ಉತ್ಪನ್ನಗಳನ್ನು ಮಾರಾಟ ಮಾಡಲಾಗುವುದು.

ಮಾರಾಟ ಮಳಿಗೆಯಲ್ಲಿರುವ ಚರ್ಮದ ಶೂಗಳು, ಚಪ್ಪಲಿಗಳು, ಮಹಿಳೆಯರ ವ್ಯಾನಿಟಿ ಬ್ಯಾಗ್‍ಗಳು, ಇತರೆ ಅಪ್ಪಟ ಚರ್ಮ ವಸ್ತುಗಳ ಮೇಲೆ ಶೇ. 15 ರಿಯಾಯಿತಿಯಂತೆ ಮಾರಾಟ ಮಾಡಲಾಗುವುದು. ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಸದುಪಯೋಗ ಪಡೆದುಕೊಳ್ಳಬೇಕೆಂದು ರಾಜಾಜಿನಗರದ ಮಾರಾಟ ಮಳಿಗೆಯ ವ್ಯವಸ್ಥಾಪಕರಾದ ಟಿ. ಲೋಕೇಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)