ಸಂಚಿತ ವೇತನ/ಸಂಭಾವನೆಯ ಅಡಿಯಲ್ಲಿ ತಾತ್ಕಾಲಿಕವಾಗಿ ನಿಯೋಜನೆ/ಹೊರಗುತ್ತಿಗೆ ಆಧಾರದ ಮೇಲೆ ಸಂಶೋಧನಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ

varthajala
0

 ಬೆಂಗಳೂರು, ಆಗಸ್ಟ್ 29 (ಕರ್ನಾಟಕ ವಾರ್ತೆ) : ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ/ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಕಛೇರಿಯಲ್ಲಿ ಕಾರ್ಯನಿರ್ವಹಿಸುವ ಉದ್ದೇಶಕ್ಕಾಗಿ ಸಂಶೋಧನಾಧಿಕಾರಿ ಎರಡು ಹುದ್ದೆಗಳನ್ನು ಸಂಚಿತ ವೇತನ/ಸಂಭಾವನೆಯ ಅಡಿಯಲ್ಲಿ ತಾತ್ಕಾಲಿಕವಾಗಿ ನಿಯೋಜನೆ/ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಸಂಶೋಧನಾಧಿಕಾರಿ ಹುದ್ದೆಗೆ ಅರ್ಜಿಸಲ್ಲಿಸುವ ಅಭ್ಯರ್ಥಿಗಳ ಅಂಗೀಕೃತ ವಿಶ್ವವಿದ್ಯಾಲಯದಿಂದ ಎಂ.ಎ/ಎಂ.ಎಸ್‍ಸಿ/ಎಂ.ಕಾಂ ಪದವಿಯನ್ನು ಪಡೆದಿರಬೇಕು.
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ/ಯೋಜನಾ ಇಲಾಖೆಯಲ್ಲಿ ನಿರ್ದೇಶಕರು/ಹೆಚ್ಚುವರಿ ನಿರ್ದೇಶಕರು/ಜಂಟಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ನಿವೃತ್ತ ಅಧಿಕಾರಿಗಳು ಅಥವಾ ಜಿಲ್ಲಾ ಪಂಚಾಯತಿಯಲ್ಲಿ ಸಿ.ಪಿ.ಓ. ಆಗಿ ಅಥವಾ ಸಚಿವಾಲಯದ ಯೊಜನಾ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಕನಿಷ್ಠ ಮೂರು ವರ್ಷಗಳ ಅನುಭವವುಳ್ಳ ನಿವೃತ್ತ ಅಧಿಕಾರಿಗಳು ಅಥವಾ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸಲು ಇಚ್ಚಿಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಅಭ್ಯರ್ಥಿಗಳು 18 ವರ್ಷ ಮೇಲ್ಪಟ್ಟವರಾಗಿದ್ದು, ಸ್ವಂತ ವೇತನದಡಿಯಲ್ಲಿ ನಿಯೋಜನೆ ಮೇಲೆ ಬರುವವರಿಗೆ (ಕೆ.ಸಿ.ಎಸ್.ಆರ್. ನಿಯಮದನ್ವಯ), ಹೊರಗುತ್ತಿಗೆ ನೇಮಕವಾದವರಿಗೆ ಆರ್ಥಿಕ ಇಲಾಖೆಯು ನಿಗದಿಪಡಿಸುವ ಸಂಭಾವನೆ ನೀಡಲಾಗುವುದು. ಅರ್ಥಶಾಸ್ತ್ರ/ಆರ್ಥಿಕ/ಸಂಶೋಧನಾ ಕ್ಷೇತ್ರದಲ್ಲಿ ಕನಿಷ್ಠ ಮೂರು ವರ್ಷಗಳ ಅನುಭವ ಹೊಂದಿರಬೇಕು.

ಸಂಶೋಧನಾಧಿಕಾರಿ ಹುದ್ದೆಗೆ ಆಯ್ಕೆಯಾದವರ ಜವಾಬ್ದಾರಿ ಹಾಗೂ ಕರ್ತವ್ಯಗಳು:
ಸರ್ಕಾರದ ಕಾರ್ಯಕ್ರಮಗಳು, ನೀತಿ ಹಾಗೂ ದತ್ತಾಂಶಗಳ ವಿಶ್ಲೇಷಣೆ ಮಾಡಿ ಟಿಪ್ಪಣಿ ನೀಡುವುದು. ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸಭೆ ಕಾರ್ಯಸೂಚಿ ಹಾಗೂ ವಿಷಯಗಳ ಕುರಿತಾಗಿ ಪ್ರಾತ್ಯಕ್ಷಿಕೆ (ಪಿಪಿಟಿ) ತಯಾರಿಸುವುದು ಹಾಗೂ ಉಳಿದ ತಾಂತ್ರಿಕ ವ್ಯವಸ್ಥೆಗಳನ್ನು ನೋಡಿಕೊಳ್ಳುವುದು. ಸರ್ಕಾರದಿಂದ ಆಗಾಗ  ಬರುವ ಕೋರಿಕೆಯ ಪ್ರಕಾರ ವಿವಿಧ ಕ್ಷೇತ್ರಗಳಾದ ಕೃಷಿ, ಉದ್ದಿಮೆ, ಸೇವೆಗಳು, ಶಿಕ್ಷಣ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಪ್ರಸ್ತುತ ಸ್ಥಿತಿಗಳ ವಿಶ್ಲೇಷಣೆ, ಬೇರೆ ರಾಜ್ಯಗಳೊಂದಿಗೆ ಹೋಲಿಕೆ ಹಾಗೂ ನೀತಿ ನಿರೂಪಣೆಗಾಗಿ ಅಂಶಗಳನ್ನು ಸಿದ್ದಪಡಿಸುವುದು.
ನೀತಿ ಆಯೋಗದ ಡಿಎಂಇಓ (ಡೆವಲಪ್‍ಮೆಂಟ್ ಮಾನಿಟರಿಂಗ್ ಎವಾಲ್ಯೂಷನ್ ಆಫೀಸ್) ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು, ರಾಜ್ಯದ ಯೋಜನಾ ಮೌಲ್ಯಮಾಪನ, ಅನುಷ್ಠಾನ ಕುರಿತ ಮಾಹಿತಿ ನೀಡುವುದು ಹಾಗೂ ಚರ್ಚೆಯಲ್ಲಿ ಪಾಲ್ಗೊಳ್ಳುವುದು.
ಈ ಎಲ್ಲಾ ಅರ್ಹತಾ ಮಾನದಂಡಗಳನ್ನು ಹೊಂದಿದ  ಅರ್ಹ ಅಭ್ಯರ್ಥಿಗಳು 2025ನೇ ಸೆಪ್ಟಂಬರ್ 4, ಒಳಗಾಗಿ ಸ್ವವಿರದೊಂದಿಗೆ ವೈಯಕ್ತಿಕ ಪರಿಚಯದ ವಿವರದ ಅರ್ಜಿಯನ್ನು ಇಮೇಲ್ ವಿಳಾಸ planningboard115@gmail.com ಗೆ ಅಥವಾ ಉಪ ಕಾರ್ಯದರ್ಶಿಗಳು (ಲೆಕ್ಕಪತ್ರ), ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಗೆ ಸಲ್ಲಿಸಲು ಅಧಿಕೃತ ಪ್ರಕಟಣೆ ತಿಳಿಸಿದೆ.

Post a Comment

0Comments

Post a Comment (0)