ಮಹಾರಾಷ್ಟ್ರದ ನಾಗಪುರದಲ್ಲಿನ ದೀಕ್ಷಾ ಭೂಮಿ ಯಾತ್ರೆಗೆ ಅರ್ಜಿ ಆಹ್ವಾನ

varthajala
0

 ಬೆಂಗಳೂರು, ಆಗಸ್ಟ್ 26 (ಕರ್ನಾಟಕ ವಾರ್ತೆ):

ಸಮಾಜ ಕಲ್ಯಾಣ ಇಲಾಖೆ ವತಿಯಿಂದ 2025-26ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇತರೆ ಸಮುದಾಯದ ಡಾ.ಬಿ.ಆರ್.ಅಂಬೇಡ್ಕರ್ ಅನುಯಾಯಿಗಳನ್ನು ಮಹಾರಾಷ್ಟ್ರದ ನಾಗಪುರದಲ್ಲಿನ ದೀಕ್ಷಾ ಭೂಮಿ ಯಾತ್ರೆಗೆ ಕರೆದುಕೊಂಡು ಹೋಗಿ ಬರುವ ಸಲುವಾಗಿ ಬಸ್ಸು ಮತ್ತು ರೈಲಿನ ಮೂಲಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಯಾತ್ರಾರ್ಥಿಗಳು ದೀಕ್ಷಾ ಭೂಮಿ ಯಾತ್ರೆ ಕೈಗೊಳ್ಳುವ ಸಲುವಾಗಿ ಆನ್ ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದ್ದು, ಸಮಾಜ ಕಲ್ಯಾಣ ಇಲಾಖಾ ವೆಬ್ ಸೈಟ್ https://swd.karnataka.gov.in ನಲ್ಲಿ ಸೆಪ್ಟೆಂಬರ್ 09,2025ರೊಳಗಾಗಿ ಅರ್ಜಿಯನ್ನು ಸಲ್ಲಿಸುವುದು.
ಆಸಕ್ತ ಯಾತ್ರಾರ್ಥಿಗಳು ಅರ್ಜಿ ಸಲ್ಲಿಸಲು ಕಡ್ಡಾಯವಾಗಿ ಬಿ.ಪಿ.ಎಲ್ ಕಾರ್ಡ್ ಹೊಂದಿರಬೇಕು. ಕನಿಷ್ಠ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು. ಮೊದಲ ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಒಂದು ಕುಟುಂಬದಲ್ಲಿ ಇಬ್ಬರು ಮಾತ್ರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ.
ಅರ್ಜಿದಾರರು ಆಧಾರ್ ಕಾರ್ಡ್ / ಬಿ.ಪಿ.ಎಲ್ ರೇಷನ್ ಕಾರ್ಡ್‍ಗಳ ಪ್ರತಿಗಳನ್ನು ಅರ್ಜಿಯೊಂದಿಗೆ ಆನ್‍ಲೈನ್‍ನಲ್ಲಿ ಅಪ್ ಲೋಡ್ ಮಾಡಬೇಕು. ತಮ್ಮ ಹೆಸರಿನಲ್ಲಿರುವ ಉಳಿತಾಯ ಖಾತೆಯ ಸಂಖ್ಯೆ ಬ್ಯಾಂಕಿನ ಹೆಸರು, ವಿಳಾಸ ಮತ್ತು ಐ.ಎಫ್.ಎಸ್.ಸಿ ಕೋಡ್‍ನ್ನು ಕಡ್ಡಾಯವಾಗಿ ಭರ್ತಿ ಮಾಡಬೇಕು. ಈಗಾಗಲೇ ಸರ್ಕಾರದ ವೆಚ್ಚದಲ್ಲಿ ಒಮ್ಮೆ ನಾಗಪುರದ ದೀಕ್ಷಾ ಭೂಮಿಗೆ ಪ್ರವಾಸ ಮಾಡಿದವರಿಗೆ 2ನೇ ಬಾರಿ ಅವಕಾಶವಿರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು (ಗ್ರೇಡ್-1), ಸಮಾಜ ಕಲ್ಯಾಣ ಇಲಾಖೆ, ಆನೇಕಲ್ ತಾಲ್ಲೂಕು, ಟಿ.ಎ.ಪಿ.ಎಂ.ಎಸ್ ಬಿಲ್ಡಿಂಗ್, ಬಸ್ಟಾಂಡ್ ಹಿಂಭಾಗ, ಆನೇಕಲ್, ಬೆಂಗಳೂರು -562 106 ಅಥವಾ ದೂರವಾಣಿ ಸಂಖ್ಯೆ : 080-27859557 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)