ಬೆಂಗಳೂರು, ಸೆಪ್ಟೆಂಬರ್ 08 (ಕರ್ನಾಟಕ ವಾರ್ತೆ) : ಬೆಂಗಳೂರು ಪಶ್ಚಿಮ ವಿಭಾಗ ಮಟ್ಟದ ಅಂಚೆ ಅದಾಲತ್ ಅನ್ನು ಸೆಪ್ಟೆಂಬರ್ 11 ರಂದು ಬೆಳಿಗ್ಗೆ 11 ಗಂಟೆಗೆ ಹಿರಿಯ ಅಂಚೆ ಕಛೇರಿ, ಬೆಂಗಳೂರು ಪಶ್ಚಿಮ ವಿಭಾಗ, ವಿದ್ಯಾ ಭಾರತಿ ಶಾಲೆಯ ಎದುರು, ವೆಸ್ಟ್ ಆಫ್ ಕಾರ್ಡ್ ರಸ್ತೆ, ಎರಡನೇ ಹಂತ, ಅಂಚೆ ಕಚೇರಿ ಕಟ್ಟಡ, ಬೆಂಗಳೂರು- 560086 ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಅಂಚೆ ಸೇವೆಗಳಿಗೆ ಸಂಬಂಧಿಸಿದ ಕುಂದು-ಕೊರತೆಗಳು ಅಥವಾ ದೂರುಗಳಾದ ಮೇಲ್‍ಗಳ ವಿತರಣೆ, ಸ್ಪೀಡ್ ಪೆÇೀಸ್ಟ್ ಲೇಖನಗಳು, ಪಾರ್ಸೆಲ್‍ಗಳು, ಮನಿ ಆರ್ಡರ್‍ಗಳು, ಉಳಿತಾಯ ಬ್ಯಾಂಕ್, ನಗದು ಪ್ರಮಾಣ ಪತ್ರಗಳು ಮತ್ತು ಕೌಂಟರ್ ಸೇವೆಗಳು ಬೆಂಗಳೂರು ಪಶ್ಚಿಮ ವಿಭಾಗಕ್ಕೆ ಸಂಬಂಧಿಸಿದ ಯಾವುದಾದರೂ ಇದ್ದರೆ ಕಳುಹಿಸಬಹುದು ಅಥವಾ ಹಿರಿಯ ಅಧೀಕ್ಷಕರನ್ನು ಭೇಟಿ ಮಾಡಿ ದೂರುಗಳನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-23493264, 080-23493267 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.