ಮತದಾರ ಪಟ್ಟಿ - ವಿಶೇಷ ಸಮಗ್ರ ಪರಿಷ್ಕರಣೆ - 2025

varthajala
0


ಬೆಂಗಳೂರು,  ಸೆಪ್ಟೆಂಬರ್ 17 (ಕರ್ನಾಟಕ ವಾರ್ತೆ):
 
ಭಾರತದ ಚುನಾವಣಾ ಆಯೋಗವು ಮತದಾರರ ಪಟ್ಟಿಗಳ ವಿಶ್ವಾರ್ಹತೆಯನ್ನು ಕಾಪಾಡಲು ತನ್ನ ಸಂವಿಧಾನಾತ್ಮಕ ಆಜ್ಞಾಪನೆಯನ್ನು ಚಲಾಯಿಸುವುದಕ್ಕಾಗಿ ಇಡೀ ದೇಶದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ ಎಂದು ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರಾದ ವಿ.ಅನ್ಬುಕುಮಾರ್ ತಿಳಿಸಿದರು.

ಇಂದು ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‍ಐಆರ್) ಕುರಿತ ಮಾಧ್ಯಮ ಕಾರ್ಯಾಗಾರದಲ್ಲಿ  ಮಾತನಾಡಿದ ಅವರು, ಈ ವರ್ಷದ ಕೊನೆಯಲ್ಲಿ ಬಿಹಾರ ರಾಜ್ಯದಲ್ಲಿ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಗಳು ನಡೆಯುವ ನಿರೀಕ್ಷೆ ಇರುವುದರಿಂದ ಆಯೋಗವು ಬಿಹಾರ ರಾಜ್ಯದಲ್ಲಿ ವಿಶೇಷ ಮತದಾರರ ಸಮಗ್ರ ಪರಿಷ್ಕರಣೆಯನ್ನು ನಡೆಸಲು ನಿರ್ಧರಿಸಿದೆ. ದೇಶದ ಉಳಿದ ಭಾಗಗಳಿಗೆ ವಿಶೇಷ ಸಮಗ್ರ ವೇಳಾಪಟ್ಟಿಯನ್ನು ಪ್ರತ್ಯೇಕವಾಗಿ ಯುಕ್ತ ಕ್ರಮದಲ್ಲಿ ಹೊರಡಿಸಲಾಗುವುದು ಎಂದರು.

ಯಾವುದೇ ವ್ಯಕ್ತಿಯ ಹೆಸರು 2003ರ ಮತದಾರರ ಪಟ್ಟಿಯಲ್ಲಿ ದಾಖಲಾಗದಿದ್ದರೆ ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳುವುದಕ್ಕಾಗಿ, ಮತದಾರರಾಗಿ ಅವರ ಅರ್ಹತೆಯನ್ನು ಸುಸ್ಥಾಪಿಸುವುದಕ್ಕೆ ನಿಗದಿಪಡಿಸಲಾದ ವ್ಯಾಪಕ ಪ್ರಮಾಣದ ಅರ್ಹ ಸರ್ಕಾರಿ ದಸ್ತಾವೇಜುಗಳ ಪೈಕಿ ಯಾವುದನ್ನಾದರೂ ಸಲ್ಲಿಸಬೇಕಾಗುತ್ತದೆ.



ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯನ್ನು ವಿಶೇಷ ಸಮಗ್ರ ಪರಿಷ್ಕರಣೆ ಅಡಿಯಲ್ಲಿ 2025ರ ಜನವರಿ 6 ರಂದು ಪ್ರಕಟಿಸಲಾಗಿದ್ದು, ಆನಂತರ ಅದನ್ನು ನಿರಂತರವಾಗಿ ಅಪ್‍ಡೇಟ್ ಮಾಡುತ್ತಾ ಬರಲಾಗುತ್ತಿದೆ. ಆಯೋಗವು ಈ ಆದೇಶವನ್ನು ಹೊರಡಿಸಿದ ದಿನಾಂಕದಂದು ಇದ್ದಂತೆ ಪ್ರಸ್ತುತವಿರುವ ಪ್ರತಿಯೊಬ್ಬ ಮತದಾರರಿಗೆ ಮುಂಚಿತವಾಗಿ ಭರ್ತಿ ಮಾಡಲಾದ ಗಣತಿ ನಮೂನೆಯು ಲಭ್ಯವಿರತಕ್ಕದ್ದು, ಮತ್ತು ಕರಡು ಮತದಾರರ ಪಟ್ಟಿಯು 2025ರ ಜುಲೈ 25 ನೇ ದಿನಾಂಕಕ್ಕಿಂತ ಮುಂಚೆ ಯುಕ್ತವಾಗಿ ಭರ್ತಿ ಮಾಡಿ ಸಲ್ಲಿಸಲಾಗಿರುವಂತಹ ಎಲ್ಲಾ ಮತದಾರರ ಹೆಸರುಗಳನ್ನು ಒಳಗೊಂಡಿರತಕ್ಕದೆಂದು ನಿರ್ದೇಶಿಸಿದೆ. ಇದು ಸಮಗ್ರ ಪರಿಷ್ಕರಣೆಯಾಗಿದ್ದು, 2025 ರ ಜುಲೈ 25 ನೇ ದಿನಾಂಕಕ್ಕಿಂತ ಮುಂಚೆ ಗಣತಿ ನಮೂನೆಯನ್ನು ಸಲ್ಲಿಸದಿದ್ದಲ್ಲಿ, ಆ ಮತದಾನದ ಹೆಸರನ್ನು ಕರಡು ಮತದಾರರ ಪಟ್ಟಿಯಲ್ಲಿ ಸೇರಿಸಲಾಗುವುದಿಲ್ಲ. ಮುಖ್ಯ ಚುನಾವಣಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ, ಮತದಾರ ನೋಂದಣಾಧಿಕಾರಿ, ಮತಗಟ್ಟೆ ಮಟ್ಟದ ಅಧಿಕಾರಿಗಳು ನೈಜ ಮತದಾರರನ್ನು ಅದರಲ್ಲೂ ನಿರ್ಧಿಷ್ಟವಾಗಿ ವೃದ್ಧರು, ಅನಾರೋಗ್ಯ ಪೀಡಿತರು, ವಿಕಲಚೇತನರು, ಬಡವರು ಹಾಗೂ ಇತರೆ ದುರ್ಬಲ ವ್ಯಕ್ತ್ತಿಗಳಿಗೆ ತೊಂದರೆಯಾಗದಿರುವ ಹಾಗೆ ಕಾಳಜಿ ವಹಿಸಬೇಕು. ಸಾಧ್ಯವಾದಷ್ಟು ಮಟ್ಟಿಗೆ ಸ್ವಯಂ ಸೇವಕರ ನಿಯೋಜನೆ ಮಾಡಿಕೊಳ್ಳುವ ಮೂಲಕ ಅವರಿಗೆ ಸೌಲಭ್ಯವನ್ನು ಕಲ್ಪಿಸಿಕೊಡಲಾಗುವುದು ಎಂದು ತಿಳಿಸಿದರು.

ಮತದಾರರ ನೋಂದಣಾಧಿಕಾರಿ, ಸಹಾಯಕ ಮತದಾರ ನೋಂದಣಾಧಿಕಾರಿಯು ಕರಡು ಮತದಾರರ ಪಟ್ಟಿಯಲ್ಲಿ ಹೆಸರಿರುವ ಸಂಬಂಧಪಟ್ಟ ವ್ಯಕ್ತಿಗಳನ್ನು ಯಾವುದೇ ವಿಚಾರಣೆ ನಡೆಸದೇ ಮತ್ತು ಅವರಿಗೆ ಅಹವಾಲು ಹೇಳಿಕೆಕೊಳ್ಳಲು ಒಂದು ಯುಕ್ತ ಹಾಗೂ ನ್ಯಾಯೋಚಿತ ಅವಕಾಶವನ್ನು ನೀಡದೇ ಕರಡು ಮತದಾರರ ಪಟ್ಟಿಯಿಂದ ಅವರ ಹೆಸರಿನ ಯಾವುದೇ ನಮೂದನ್ನು ತೆಗೆದು ಹಾಕತಕ್ಕದ್ದಲ್ಲ. ಒಂದು ವೇಳೆ ಯಾರೇ ವ್ಯಕ್ತಿಯು ಮತದಾರ ನೋಂದಾಣಾಧಿಕಾರಿಯ ನಿರ್ಣಯದಿಂದ ಬಾಧಿತನಾದರೆ, ಆತನು ನಿಗಧಿತ ಸಮಯದೊಳಗಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್‍ಗೆ ಮೇಲ್ಮನವಿ ಸಲ್ಲಿಸಬಹುದು. ಮೇಲ್ಮನವಿದಾರನು ಜಿಲ್ಲಾ ಮ್ಯಾಜಿಸ್ಟ್ರೇಟರ್ ಆದೇಶದಿಂದ ತೃಪ್ತನಾಗದಿದ್ದರೆ ಆತನು ಜಿಲ್ಲಾ ಮ್ಯಾಜಿಸ್ಟ್ರೇಟರ್ ಆದೇಶದ 30 ದಿನಗಳೊಳಗಾಗಿ ಮುಖ್ಯ ಚುನಾವಣಾಧಿಕಾರಿಯವರ ಮುಂದೆ ಎರಡನೇ ಮೇಲ್ಮನವಿಯನ್ನು ಸಲ್ಲಿಸಬಹುದು. ಅಲ್ಲದೇ ಹೊಸ ಮತದಾರನಾಗಿ ರಾಜ್ಯದ ಹೊರಗಿನಿಂದ ಸ್ಥಳಾಂತರಗೊಂಡ ಮತದಾರನಾಗಿ ನೋಂದಾಯಿಸಿಕೊಳ್ಳುವ ಅರ್ಜಿಯ ಸಂದರ್ಭದಲ್ಲಿ ಇನ್ನುಮಂದೆ ಅರ್ಜಿದಾರನು ನಮೂನೆ - 6, ನಮೂನೆ - 8 ರೊಂದಿಗೆ ಅದರಲ್ಲಿ ಮಾಡಲಾಗಿರುವ ಘೋಷಣೆಗೆ ಬೆಂಬಲವಾಗಿ ಹೆಚ್ಚುವರಿ ಘೋಷಣಾ ನಮೂನೆ (ಅನುಬಂಧ -ಡಿ)ಯನ್ನು ಸಹ ಭರ್ತಿ ಮಾಡಿ ಸಲ್ಲಿಸಬೇಕಾಗಿರುತ್ತದೆ ಎಂದು ನಿರ್ದೇಶಿಸಲಾಗಿದೆ.

ಹೊಸ ಮತದಾರರಾಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗಾಗಿ ಸಲ್ಲಿಸುವ ಪ್ರತಿಯೊಂದು ಕ್ಲೇಮು ಹೊಸ ಘೋಷಣೆ ನಮೂನೆಯೊಂದಿಗೆ ನಮೂನೆ 6 ರಲ್ಲಿರತಕ್ಕದ್ದು, ಇನ್ನು ಮುಂದೆ ಎಲ್ಲಾ ಇಆರ್‍ಗಳು ಎಲ್ಲಾ ಬಾಕಿ ಇರುವ ನಮೂನೆ 6 ಮತ್ತು ನಮೂನೆ 6 ರಲ್ಲಿ ಸ್ವೀಕರಿಸಿದ ಮುಂಗಡ ಕ್ಲೇಮುಗಳಿಗೆ ಸಂಬಂಧಿಸಿದಂತೆ ನಿಗದಿತ ಘೋಷಣೆ ನಮೂನೆಯನ್ನು ಸಂಗ್ರಹಿಸುವುದಕ್ಕೆ 2025ರ ಅಕ್ಟೋಬರ್ 01 ಅರ್ಹತಾ ದಿನಾಂಕವಾಗಿದೆ.
ಚುನಾವಣಾ ಕ್ಷೇತ್ರದ ಪರಿಮಿತಿಯಲ್ಲಿ ಅಥವಾ ಚುನಾವಣಾ ಕ್ಷೇತ್ರದ ಹೊರಗೆ ನಿವಾಸವನ್ನು ಸ್ಥಳಾಂತರಿಸುವುದಕ್ಕಾಗಿ, ನಮೂದುಗಳನ್ನು ಸರಿಪಡಿಸುವುದಕ್ಕಾಗಿ ಅಥವಾ ನವೀಕರಿಸುವುದಕ್ಕಾಗಿ, ಮತದಾನ ಗುರುತಿನ ಚೀಟಿ (ಎಪಿಕ್) ಯನ್ನು ಬದಲಾಯಿಸುವುದಕ್ಕಾಗಿ ಮತ್ತು ವಿಕಲಚೇತನ ವ್ಯಕ್ತಿ (ಪಿಡಬ್ಲ್ಯೂಡಿ) ಯನ್ನು ಗುರುತು ಮಾಡುವುದಕ್ಕಾಗಿ ಸಲ್ಲಿಸುವ ಅರ್ಜಿಯು ನಮೂನೆ-8 ರಲ್ಲಿರತಕ್ಕದ್ದು ಮತ್ತು ಅದನ್ನು ಆ ವ್ಯಕ್ತಿಯು ಆ ನಮೂದು ಯಾರಿಗೆ ಸಂಬಂಧಪಡುತ್ತದೆಯೋ ಅವರಿಗೆ ಸಲ್ಲಿಸತಕ್ಕದ್ದು, ರಾಜ್ಯದ ಹೊರಗಿನಿಂದ ಇಲ್ಲಿಗೆ ನಿವಾಸವನ್ನು ಸ್ಥಳಾಂತರಿಸುವುದಕ್ಕಾಗಿ ಹೊಸ ಘೋಷಣೆ ನಮೂನೆಯನ್ನು ನಮೂನೆ- 8 ರೊಂದಿಗೆ ಸಲ್ಲಿಸತಕ್ಕದ್ದು.

ಕ್ಲೇಮುಗಳು ಮತ್ತು ಆಕ್ಷೇಪಣೆಗಳ ಪಟ್ಟಿಯನ್ನು ಪ್ರದರ್ಶಿಸುವುದು:

ಇಆರ್‍ಒ ಅವರು ನಮೂನೆ 9, 10, 11 ಮತ್ತು 11ಎ ಹಾಗೂ 11ಬಿ ಗಳಲ್ಲಿರುವ ಕ್ಲೇಮುಗಳು ಮತ್ತು ಆಕ್ಷೇಪಣೆಗಳ ಪಟ್ಟಿಗಳನ್ನು ಸಿದ್ಧಪಡಿಸತಕ್ಕದ್ದು ಮತ್ತು ಅಂತಹ ಪಟ್ಟಿಗಳ ಒಂದು ಪ್ರತಿಯನ್ನು ಪ್ರತಿಯೊಂದು ಕೆಲಸದ ದಿನದಂದು ತಮ್ಮ ಕಚೇರಿಯ ಸೂಚನಾ ಫಲಕದಲ್ಲಿ ಪ್ರದರ್ಶಿಸತಕ್ಕದ್ದು.

ಸ್ವೀಕರಿಸಿದ ಎಲ್ಲಾ ಕ್ಲೇಮುಗಳು ಮತ್ತು ಆಕ್ಷೇಪಣೆಗಳ ಪಟ್ಟಿಯನ್ನು ಹಾಗೂ ಸಂಬಂಧಪಟ್ಟ ಇಆರ್‍ಒ ಬಗ್ಗೆ ಯಾವುದಾದರೂ ಆಕ್ಷೇಪಣೆಗಳು ದಾಖಲಾಗಿದ್ದರೆ, ಆ ಆಕ್ಷೇಪಣೆಗಳನ್ನು ನಾಗರಿಕರು ನೋಡಲು ಸಾಧ್ಯವಾಗುವ ಹಾಗೆ ಆ ಎಲ್ಲಾ ಕ್ಲೇಮುಗಳು ಮತ್ತು ಆಕ್ಷೇಪಣೆಗಳ ಪಟ್ಟಿಯನ್ನು ಸಿಇಒ ಅವರ ವೆಬ್‍ಸೈಟ್‍ನಲ್ಲಿಯೂ ಸಹ ಪ್ರಕಟಿಸಬೇಕು.

ಸಿಇಒ ಅವರು, ಸಿಇಒ ವೆಬ್ ಸೈಟ್‍ನಲ್ಲಿ ಕ್ಲೇಮುಗಳು ಮತ್ತು ಆಕ್ಷೇಪಣೆಗಳ ಪಟ್ಟಿಯು ಲಭ್ಯವಿದೆ ಎಂಬ ವಾಸ್ತವ ಸಂಗತಿಗೆ ಸಾಕಷ್ಟು ಪ್ರಚಾರ ನೀಡಬೇಕು. ಮತ್ತು ಪಟ್ಟಿಯಲ್ಲಿರುವ ಯಾವುದೇ ಕ್ಲೇಮಿಗೆ ಸಂಬಂಧಿಸಿದಂತೆ ಯಾರಾದರೂ ಆಕ್ಷೇಪಣೆಗಳನ್ನು ಎತ್ತಲು ಬಯಸಿದರೆ, ಅಂತಹವರು ಇಆರ್‍ಗಳ ಮುಂದೆ ಅದನ್ನು ಸಲ್ಲಿಸಬಹುದು. ಈ ಮಾಹಿತಿಯನ್ನು ರಾಜಕೀಯ ಪಕ್ಷಗಳೊಂದಿಗೆ ಸಭೆಗಳನ್ನು ನಡೆಸುವ ಮೂಲಕ ಮತ್ತು ಅವರಿಗೆ ಲಿಖಿತ ಪತ್ರವನ್ನು ಕಳುಹಿಸುವ ಮೂಲಕವು ಸಹ ಹಂಚಿಕೊಳ್ಳಬೇಕು.

ಇಆರ್‍ಒ ಅವರು, ಸಾಪ್ತಾಹಿಕ ಆಧಾರದಲ್ಲಿ ರಾಜಕೀಯ ಪಕ್ಷಗಳೊಂದಿಗೆ ಕ್ಷೇಮುಗಳು ಮತ್ತು ಆಕ್ಷೇಪಣೆಗಳ ಪಟ್ಟಿಯನ್ನು ಹಂಚಿಕೊಳ್ಳಬೇಕು. ಆ ಪಟ್ಟಿಯು ಸಂಚಿತವಾಗಿರುವುದರ ಬದಲು ಸುಧಾರಿತವಾಗಿರಬೇಕು. ಈ ಉದ್ದೇಶಕ್ಕಾಗಿ, ಇಆರ್‍ಒ ಅವರು ನಿಯತ ಮಧ್ಯಂತರ ಅವಧಿಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಸಭೆಯನ್ನು ಕರೆದು, ಅವರಿಗೆ ಕ್ಲೇಮುಗಳು ಮತ್ತು ಆಕ್ಷೇಪಣೆಗಳ ಪಟ್ಟಿಯನ್ನು ಹಸ್ತಾಂತರಿಸಿ ಸ್ವೀಕೃತಿಯನ್ನು ಪಡೆದುಕೊಳ್ಳಬೇಕು.

ಮತಗಟ್ಟೆ ಮಟ್ಟದ ಅಧಿಕಾರಿಯು ಮನೆಮನೆಯ ಗಣತಿಗೂ ಮೊದಲು, ಮತಗಟ್ಟೆ ಮಟ್ಟದ ಏಜಂಟ್ (ಬಿಎಲ್‍ಎ) ರೊಂದಿಗೆ ಸಭೆ ನಡೆಸಿ, ಅವರಿಗೆ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‍ಐಆರ್)ಯ ವೇಳಾಪಟ್ಟಿ ಮತ್ತು ಕಾರ್ಯವಿಧಾನದ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸತಕ್ಕದ್ದು.

ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್‍ಒ) ಅವರು, ರಾಜ್ಯದ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಮತಗಟ್ಟೆ ಮಟ್ಟದ ಏಜಂಟ್ (ಬಿಎಲ್‍ಎ) ರೊಂದಿಗೆ ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಿ, ಮಾಡಬೇಕಾದ ತಿದ್ದುಪಡಿ ಇತ್ಯಾದಿಗಳನ್ನು ಗುರುತಿಸಬೇಕು. ಮಾನ್ಯತೆ ಪಡೆದ ರಾಜಕೀಯ ಪಕ್ಷದಿಂದ ಒಮ್ಮೆ ನೇಮಕಗೊಂಡ ಮತಗಟ್ಟೆ ಮಟ್ಟದ ವಿಜಂಟ್ (ಬಿಎಲ್‍ಎ), ಸಂಬಂಧಪಟ್ಟ ರಾಜಕೀಯ ಪಕ್ಷವು ಅವರ ನೇಮಕಾತಿಯನ್ನು ರದ್ದುಗೊಳಿಸದ/ಹಿಂತೆಗೆದುಕೊಳ್ಳದ ಹೊರತು ಮತಗಟ್ಟೆ ಮಟ್ಟದ ಏಜಂಟ್ (ಬಿಎಲ್‍ಎ) ರಾಗಿಯೇ ಮುಂದುವರಿಯುತ್ತಾರೆ ಎಂದು ಹೇಳಿದರು.

ರಾಜಕೀಯ ಪಕ್ಷಗಳ ಹೆಚ್ಚು ಹೆಚ್ಚು ಭಾಗವಹಿಸುವಿಕೆಯನ್ನು ಖಾತರಿಪಡಿಸಿಕೊಳ್ಳುವ ದೃಷ್ಟಿಯಿಂದ, ಆಯೋಗವು, ಒಬ್ಬ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಮತಗಟ್ಟೆ ಮಟ್ಟದ ಏಜೆಂಟ್ (ಬಿಎಲ್‍ಎ) ಕರಡು ಪ್ರಕಟಣೆಯ ಮೊದಲು ಮತಗಟ್ಟೆ ಮಟ್ಟದ ಅಧಿಕಾರಿ(ಬಿಎಲ್‍ಒ)ಗೆ ದಿನಕ್ಕೆ 50 ನಮೂನೆಗಳಿಗಿಂತ ಹೆಚ್ಚಿಗೆ ಮತ್ತು ತದನಂತರದ ದಿನಕ್ಕೆ 10 ನಮೂನೆಗಳಿಗಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಬಾರದೆಂಬ ಷರತ್ತಿಗೆ ಒಳಪಟ್ಟು, ಒಟ್ಟಾಗಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಿರುತ್ತದೆ.

ಮತಗಟ್ಟೆ ಮಟ್ಟದ ಏಜಂಟ್ (ಬಿಎಲ್‍ಎ)ನು ಅರ್ಜಿ ನಮೂನೆಗಳ ವಿವರಗಳನ್ನು ಖುದ್ದಾಗಿ ಪರಿಶೀಲಿಸಿ, ಅವು ಸರಿಯಾಗಿವೆ ಎಂಬುದನ್ನು ಮನವರಿಕೆ ಮಾಡಿಕೊಂಡಿದ್ದೇನೆ ಎಂಬ ಒಂದು ಮುಚ್ಚಳಿಕೆಯೊಂದಿಗೆ ಅರ್ಜಿ ನಮೂನೆಗಳ ಪಟ್ಟಿಯನ್ನು ಸಲ್ಲಿಸುವುದು.

ವಿಶೇಷ ಸಮಗ್ರ ಪರಿಷ್ಕರಣೆ ವೇಳಾಪಟ್ಟಿ ಪ್ರಕಟಣೆ:

ಮುಖ್ಯ ಚುನಾವಣಾಧಿಕಾರಿ (ಸಿಇಒ) ಅವರು, ರಾಜಕೀಯ ಪಕ್ಷಗಳೊಂದಿಗೆ ನಿರೀಕ್ಷಿತ ಸಭೆಗಳನ್ನು ನಡೆಸುವುದರ ಜೊತೆಗೆ, ಮನೆ ಮನೆಗೂ ಭೇಟಿ ನೀಡುವಿಕೆ, ಸುವ್ಯವಸ್ಥಿತಗೊಳಿಸುವಿಕೆ ಮತ್ತು ವೇಳಾಪಟ್ಟಿಗಳಂತಹ ಪೂರ್ವ ಪರಿಷ್ಕರಣಾ ಕಾರ್ಯಚಟುವಟಿಕೆಗಳನ್ನು ವಿವರಿಸುವ ಪತ್ರಿಕಾ ಪ್ರಕಟಣೆಯನ್ನು ಹೊರಡಿಸುವುದು. ಜಿಲ್ಲಾ ಚುನಾವಣಾಧಿಕಾರಿ (ಡಿಇಒ) ಅವರು ಮುಖ್ಯ ಚುನಾವಣಾಧಿಕಾರಿ (ಸಿಇಒ) ಅವರ ಪತ್ರಿಕಾ ಪ್ರಕಟಣೆಯನ್ನು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರÀಸಾರ ಮಾಡುವುದು.

ಮುಖ್ಯ ಚುನಾವಣಾಧಿಕಾರಿ (ಸಿಇಒ) ಅವರು, ಕ್ಲೇಮುಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಸಾರ್ವಜನಿಕರಿಗೆ ಮನವಿಯನ್ನು ಮಾಡಿಕೊಳ್ಳುವುದರ ಜೊತೆಗೆ, ವಿಶೇಷ ಸಮಗ್ರ ಪರಿಷ್ಕರಣೆ (ಎಸ್‍ಐಆರ್)ಯ ವೇಳಾಪಟ್ಟಿಯನ್ನು ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟಿಸುವುದು.

ಮುಖ್ಯ ಚುನಾವಣಾಧಿಕಾರಿ (ಸಿಇಒ) / ಜಿಲ್ಲಾ ಚುನಾವಣಾಧಿಕಾರಿ (ಡಿಇಒ) / ಮತದಾರರ ನೋಂದಣಾಧಿಕಾರಿ (ಇಆರ್‍ಒ) ಅವರು ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ವಿಶೇಷ ಸಮಗ್ರ ಪರಿಷ್ಕರಣೆಯ ವೇಳಾಪಟ್ಟಿ ಮತ್ತು ಮಾರ್ಗಸೂಚಿಗಳನ್ನು ಹಂಚಿಕೊಳ್ಳಲು ಪತ್ರವನ್ನು ಬರೆಯುವುದು.

ಘೋಷಣೆಗೆ ಪೂರಕವಾಗಿ ಸಲ್ಲಿಸಬೇಕಾದ ದಾಖಲೆಗಳ ಪಟ್ಟಿ:

ಯಾವುದೇ ಕೇಂದ್ರ ಸರ್ಕಾರ / ರಾಜ್ಯ ಸರ್ಕಾರ/ ಸಾರ್ವಜನಿಕ ವಲಯ ಉದ್ಯಮದ ಖಾಯಂ ಉದ್ಯೋಗಿ/ ಪಿಂಚಣಿದಾರರಿಗೆ ನೀಡಿರುವ ಯಾವುದೇ ಗುರುತಿನ ಚೀಟಿ/ ಪಿಂಚಣಿ ಸಂದಾಯ ಆದೇಶ.

ಭಾರತದಲ್ಲಿ 01.07.1987 ಕ್ಕೂ ಮುಂಚೆ ಸರ್ಕಾರ/ ಸ್ಥಳೀಯ ಪ್ರಾಧಿಕಾರಗಳು/ ಬ್ಯಾಂಕುಗಳು/ ಅಂಚೆ ಕಚೇರಿ/ ಜೀವ ವಿಮಾ ನಿಗಮ/ ಸಾರ್ವಜನಿಕ ವಲಯ ಉದ್ಯಮಗಳು ನೀಡಿರುವ ಯಾವುದೇ ಗುರುತಿನ ಚೀಟಿ/ ಪ್ರಮಾಣಪತ್ರ / ದಸ್ತಾವೇಜು.

ಸಕ್ಷಮ ಪ್ರಾಧಿಕಾರವು ನೀಡಿರುವ ಜನನ ಪ್ರಮಾಣಪತ್ರ, ಪಾಸ್‍ಪೆÇೀರ್ಟ್, ಮಾನ್ಯತೆ ಪಡೆದ ಮಂಡಳಿಗಳು/ ವಿಶ್ವವಿದ್ಯಾಲಯಗಳು ನೀಡಿರುವ ಮೆಟ್ರಿಕ್ಯೂಲೇಷನ್/ ಶೈಕ್ಷಣಿಕ ಪ್ರಮಾಣಪತ್ರ, ರಾಜ್ಯದ ಸಕ್ಷಮ ಪ್ರಾಧಿಕಾರವು ನೀಡಿರುವ ಖಾಯಂ ನಿವಾಸ ಪ್ರಮಾಣಪತ್ರ, ಅರಣ್ಯ ಹಕ್ಕು ಪ್ರಮಾಣಪತ್ರ, ಸಕ್ಷಮ ಪ್ರಾಧಿಕಾರವು ನೀಡಿರುವ ಒಬಿಸಿ/ ಪ.ಜಾ/ಪ.ಪಂ ಅಥವಾ ಯಾವುದೇ ಜಾತಿ ಪ್ರಮಾಣಪತ್ರ, ರಾಷ್ಟ್ರೀಯ ಪೌರತ್ವ ರಿಜಿಸ್ಟರ್ (ಅದು ಎಲ್ಲಾದರೂ ಅಸ್ತಿತ್ವದಲ್ಲಿರಲಿ), ರಾಜ್ಯ / ಸ್ಥಳೀಯ ಪ್ರಾಧಿಕಾರಗಳು ಸಿದ್ದಪಡಿಸಿದ ಕುಟುಂಬ ರಿಜಿಸ್ಟರ್, ಸರ್ಕಾರವು ನೀಡಿದ ಯಾವುದೇ ಜಮೀನು / ಮನೆ ಹಂಚಿಕೆ ಪ್ರಮಾಣಪತ್ರ ಸಲ್ಲಿಸಬೇಕು.

ಗೌರವಾನ್ವಿತ ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದಂತೆ ಹಾಗೂ ಆದೇಶದ ಅನುಸಾರವಾಗಿ ಚುನಾವಣಾ ಆಯೋಗವು 2025 ನೇ ಅಕ್ಟೋಬರ್ 09 ರ ಮೂಲಕ ನೀಡಿರುವ ಸೂಚನೆಗಳ ಪ್ರಕಾರ, ಆಧಾರ್ ಅನ್ನು ನಾಗರಿಕತೆಯ ಪ್ರಮಾಣವಾಗಿ ಅಲ್ಲದೆ ಗುರುತನ್ನು ಸಾಬೀತುಪಡಿಸುವ ದಾಖಲೆಯಾಗಿ ಮಾತ್ರ ಪರಿಗಣಿಸಲಾಗುವುದು ಎಂದು ತಿಳಿಸಿದರು.

Post a Comment

0Comments

Post a Comment (0)