ಟ್ರೈಟಾನ್ ವಾಲ್ವ್ಸ್, ಶ್ರೀಮಾನ್ ಮೈಸೂರು ಮಹಾರಾಜರು, ಖ್ಯಾತ ಉದ್ಯಮಿಗಳಾದ ನಂದನ್ ನೀಲೇಕಣಿ, ಸ್ವಪ್ನಿಲ್ ಜೈನ್ ಮತ್ತು ವಾಹನೋದ್ಯಮದ ನಾಯಕರೊಂದಿಗೆ 50 ಭವ್ಯ ವರ್ಷಗಳ ಸಂಭ್ರಮಾಚರಣೆ

varthajala
0

 ಬೆಂಗಳೂರು, ಸೆಪ್ಟೆಂಬರ್ 12, 2025: ಭಾರತದ ಅತ್ಯಂತ ದೊಡ್ಡ ವಾಹನಗಳ ಟೈರ್ ವಾಲ್ವ್ ಗಳ ಉತ್ಪಾದಕ ಮತ್ತು ಕೈಗಾರಿಕೆಗಳಿಗೆ ಮುಂಚೂಣಿಯ ಎಂಜಿನಿಯರಿಂಗ್ ಪಾಲುದಾರರಾದ ಟ್ರೈಟಾನ್ ವಾಲ್ವ್ಸ್ ಬೆಂಗಳೂರಿನ ಐಟಿಸಿ ಗಾರ್ಡೆನಿಯಾದ ಮೈಸೂರ್ ಹಾಲ್ ನಲ್ಲಿ 50ನೇ ವರ್ಷದ ಅದ್ಧೂರಿ ಸಮಾರಂಭ ಆಯೋಜಿಸಿತ್ತು.

ಈ ಕಾರ್ಯಕ್ರಮದಲ್ಲಿ ಮೈಸೂರಿನ ಮಹಾರಾಜ ಶ್ರೀಮಾನ್ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಶ್ರೀ ನಂದನ್ ನೀಲೇಕಣಿ ಮತ್ತು ಏಥರ್ ಎನರ್ಜಿ ಸಹ-ಸಂಸ್ಥಾಪಕ ಶ್ರೀ ಸ್ವಪ್ನಿಲ್ ಜೈನ್ ಅವರೊಂದಿಗೆ ಉದ್ಯಮದ ನಾಯಕರು, ಪಾಲುದಾರರು ಮತ್ತು ಉದ್ಯೋಗಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಜೆಯು ಐದು ದಶಕಗಳ ವಾಹನೋದ್ಯಮದ ಆವಿಷ್ಕಾರದ ಅವಿಸ್ಮರಣೀಯ ಪ್ರಯಾಣಕ್ಕೆ ವೇದಿಕೆ ಒದಗಿಸುವುದರೊಂದಿಗೆ ಪ್ರಾರಂಭವಾಯಿತು.
ಕಾರ್ಯಕ್ರಮದ ಪ್ರಮುಖಾಂಶವೆಂದರೆ ಮೈಸೂರು ಮಹಾರಾಜ ಶ್ರೀಮಾನ್ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು “ಕೋರ್ ಸ್ಟ್ರೆಂಥ್” ಎಂಬ ವಿಶೇಷ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಈ ಕೃತಿಯ ಲೇಖಕಿ ರೂಪಾ ಪೈ ಕೃತಿಯ ಕೆಲ ಪ್ರಮುಖ ಅಧ್ಯಾಯಗಳನ್ನು ಆಕರ್ಷಕವಾಗಿ ನಿರೂಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮಾನ್ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, “ಟ್ರೈಟಾನ್ ವಾಲ್ವ್ಸ್ ಮೈಸೂರಿನ ಆವಿಷ್ಕಾರದ ಪರಂಪರೆ ಮತ್ತು ಭಾರತದ ಸ್ವಾವಲಂಬನೆಯ ಸ್ಫೂರ್ತಿಗೆ ಹೆಮ್ಮೆಯ ಸಾಕ್ಷಿಯಾಗಿದೆ. ಐವತ್ತು ವರ್ಷಗಳಿಂದಲೂ ಇದು ಸದೃಢತೆ, ಗುಣಮಟ್ಟ ಮತ್ತು ವೈವಿಧ್ಯೀಕರಣಕ್ಕೆ ಉದಾಹರಣೆಯಾಗಿದ್ದು ಭಾರತ ಮಾತ್ರವಲ್ಲದೆ ವಿಶ್ವದ ಮೂಲೆ ಮೂಲೆಗೆ ಸೇವೆ ಒದಗಿಸುತ್ತಿದೆ. ನಾವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತವಾಗಲು ಶ್ರಮಿಸುತ್ತಿದ್ದು ಟ್ರೈಟಾನ್ ನಮ್ಮೆಲ್ಲರಿಗೂ ಮೇಕ್ ಇನ್ ಇಂಡಿಯಾ ಶಕ್ತಿಯಲ್ಲಿ ನಂಬಿಕೆ ಇರಿಸಲು ಮತ್ತು ಬದ್ಧತೆ, ದೂರದೃಷ್ಟಿ ಮತ್ತು ಶ್ರೇಷ್ಠತೆಯಿಂದ ಉಂಟಾದ ಮಹತ್ತರ ಸಾಧನೆಗಳನ್ನು ಸಂಭ್ರಮಿಸಲು ಸ್ಫೂರ್ತಿ ತುಂಬಿದೆ” ಎಂದರು.

ಟ್ರೈಟಾನ್ ಹಿಂದಿನ ಮಾರ್ಗದರ್ಶಕ ಶಕ್ತಿಯಾಗಿರುವ ಶ್ರೀಮತಿ ಅನುರಾಧಾ ಎಂ. ಗೋಕರ್ಣ್ ಅವರು ಗ್ರಾಹಕರು, ಷೇರುದಾರರು, ಲೆಕ್ಕ ಪರಿಶೋಧಕರು, ಪಾಲುದಾರರು ಮತ್ತು ಅತಿಥಿಗಳಿಗೆ ತಮ್ಮ ಹೃದಯಪೂರ್ವಕ ಕೃತಜ್ಞತೆ ವ್ಯಕ್ತಪಡಿಸಿ ಕಂಪನಿಯ 50 ವರ್ಷದ ಪ್ರಯಾಣವನ್ನು ಹಾಗೂ ತಮ್ಮದೇ ಆದ ಸ್ಫೂರ್ತಿಯುತ ಕಥೆಯನ್ನು ಹಂಚಿಕೊಂಡರು. “50 ವರ್ಷಗಳ ಟ್ರೈಟಾನ್  ಪ್ರಯಾಣವು ಬರೀ ಕಾರ್ಪೊರೇಟ್ ಮೈಲಿಗಲ್ಲಲ್ಲ, ಇದು ಸದೃಢತೆ ಮತ್ತು ದೂರದೃಷ್ಟಿಯಿಂದ ಕನಸುಗಳು ವಾಸ್ತವವಾಗಿ ಬದಲಾದ ಕಥೆಯಾಗಿದೆ. 1975ರಲ್ಲಿ ಸಂಸ್ಥಾಪಕರ ಕನಸಿನಿಂದ ಸವಾಲುಗಳನ್ನು ಎದುರಿಸಿ ಹೊರಬರುವವರೆಗೆ `ಮೇಡ್ ಇನ್ ಇಂಡಿಯಾ’ ಎಂಬ ಹೆಮ್ಮೆಯ ಸಂಕೇತವಾಗಿರುವ ಇಂದಿನ ಕಂಪನಿಯನ್ನು ನಿರ್ಮಿಸುವವರೆಗೆ ಇದು ಉದ್ಯೋಗಿಗಳು, ಪಾಲುದಾರರು ಮತ್ತು ಹಿತೈಷಿಗಳ ಒಗ್ಗಟ್ಟಿನ ಪ್ರಯತ್ನವಾಗಿದೆ. ಈ ಪ್ರಯಾಣದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ನಾನು ಆಭಾರಿಯಾಗಿದ್ದೇನೆ. ಟ್ರೈಟಾನ್ ಬರೀ ಕಂಪನಿಯಲ್ಲ; ಇದು ದೇಶದ ಪ್ರಗತಿಗೆ ಅರ್ಥಪೂರ್ಣವಾಗಿ ಕೊಡುಗೆ ನೀಡಬಲ್ಲ ನಂಬಿಕೆ, ಪರಿಶ್ರಮ ಮತ್ತು ಬದ್ಧತೆಯ ಆಧಾರದಲ್ಲಿ ನಿರ್ಮಿಸಿದ ಕುಟುಂಬವಾಗಿದೆ” ಎಂದರು. 

Post a Comment

0Comments

Post a Comment (0)