ಉನ್ನತ ಶಿಕ್ಷಣ ಇಲಾಖೆ (Higher Education) ಹಾಗೂ ಅಜೀಂ ಪ್ರೇಂಜಿ ಫೌಂಡೇಶನ್ (Azim Premji Foundation) ಸಹಭಾಗಿತ್ವದಲ್ಲಿ ರೂಪಿಸಲಾಗಿರುವ “ದೀಪಿಕಾ” (Deepika Scholarship) ವಿದ್ಯಾರ್ಥಿ ವೇತನ ಮಹತ್ವದ ಕಾರ್ಯಕ್ರಮವನ್ನು ಸೆಪ್ಟೆಂಬರ್ 19 ರಂದು ಸಂಜೆ 4.00 ಗಂಟೆಗೆ ಜಿ.ಕೆ.ವಿ.ಕೆಯ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಭವನದಲ್ಲಿ ಆಯೋಜಿಸಲಾಗಿದ್ದು, ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಹಾಗೂ ಕೇಂದ್ರ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ಹಾಗೂ ಕಾರ್ಮಿಕ ಉದ್ಯೋಗ ರಾಜ್ಯ ಸಚಿವರಾದ ಕು. ಶೋಭಾ ಕರಂದ್ಲಾಜೆ ಅವರು ಭಾಗವಹಿಸಲಿದ್ದು, ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್, ವಿಧಾನಪರಿಷತ್ತಿನ ಮಾನ್ಯ ಸಭಾಪತಿಗಳಾದ ಬಸವರಾಜ ಎಸ್ ಹೊರಟ್ಟಿ ಹಾಗೂ ಕರ್ನಾಟಕ ವಿಧಾನಸಭೆಯ ಮಾನ್ಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್ ಅವರು ಘನ ಉಪಸ್ಥಿತರಿರಲಿದ್ದಾರೆ.ಉನ್ನತ ಶಿಕ್ಷಣ ಸಚಿವರಾದ ಡಾ. ಎಂ ಸಿ ಸುಧಾಕರ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು, ಅಜೀಮ್ ಪ್ರೇಂಜಿ ಫೌಂಡೇಶನ್‍ನ ಅಧ್ಯಕ್ಷರಾದ ಅಜೀಂ ಪ್ರೇಂಜಿ ಅವರು ಪ್ರೇರಣಾತ್ಮಕ ನುಡುಗಳನ್ನಾಡಲಿರುವರು. ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದು, ಗಣ್ಯರು, ಉನ್ನತಶಿಕ್ಷಣ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿರುವರು.
ದೀಪಿಕಾ – ಉನ್ನತ ಶಿಕ್ಷಣ ವಿದ್ಯಾರ್ಥಿ ವೇತನ:
ಪಿಯುಸಿ ತರಗತಿಗಳನ್ನು ಸರ್ಕಾರಿ ಕಾಲೇಜ್ ನಲ್ಲಿ ಕಲಿತು, ಯಾವುದಾದರೂ ಕಾಲೇಜಿಗೆ ಸಾಮಾನ್ಯ ಪದವಿ/ ವೃತ್ತಿಪರ ಪದವಿ ಅಥವಾ ಡಿಪ್ಲೋಮೋ ತರಗತಿಗಳಿಗೆ ದಾಖಲಾದ ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷ 30000 ರೂ. ವಿದ್ಯಾರ್ಥಿವೇತನ ವನ್ನು 37 ಸಾವಿರ ವಿದ್ಯಾರ್ಥಿನಿಗಳಿಗೆ ನೀಡಲಾಗುತ್ತದೆ. 2025-26 ನೇ ಸಾಲಿನಿಂದ ಈ ವಿದ್ಯಾರ್ಥಿ ವೇತನ ಅನುರ್ಷನಗೊಳ್ಳಲಿದೆ.
37000 ಸಾವಿರಕ್ಕೂ ಹೆಚ್ಚು ವಿದಾರ್ಥಿನಿಯರು ದಾಖಲಾದಲ್ಲಿ ಸರ್ಕಾರದ ವತಿಯಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಈ ಯೋಜನೆಯಡಿ ಸುಮಾರು 2 ಸಾವಿರ ವಿದ್ಯಾರ್ಥಿನಿಯರು “ದೀಪಿಕಾ ವಿದಾರ್ಥಿ ವೇತನ” ಪಡೆಯಲಿರುವರು ಎಂದು ಪ್ರಕಟಣೆ ತಿಳಿಸಿದೆ.