ವಿಶ್ವ ಮಾನ್ಯತೆಯ ಶಕ್ತಿಯಾಗಿ ಪರಿವರ್ತಿತವಾಗುತ್ತಿರುವುದು ಭಾರತ ವಿಕಾಸದ ಹೆಮ್ಮೆಯ ವಿಷಯ

varthajala
0

 ಚಾಮರಾಜನಗರ : ಭಾರತದ ಶಕ್ತಿ ವಿಶ್ವ ಮಾನ್ಯತೆಯ ಶಕ್ತಿಯಾಗಿ ಪರಿವರ್ತಿತವಾಗುತ್ತಿರುವುದು ಭಾರತ ವಿಕಾಸದ  ಹೆಮ್ಮೆಯ ವಿಷಯವಾಗಿದೆ.   ವಿಶ್ವದ ನಾಲ್ಕನೇ ಆರ್ಥಿಕ ಶಕ್ತಿಯಾಗಿ, ವೈದ್ಯಕೀಯ, ವಿಜ್ಞಾನ, ಡಿಜಿಟಲ್ ಕ್ರಾಂತಿಯ ಮೂಲಕ ಅಭಿವೃದ್ಧಿ ಸಾಧಿಸುತ್ತಿರುವುದು ವಿಕಸಿತ ಭಾರತದ ಪ್ರಮುಖ ಹೆಜ್ಜೆಯಾಗಿದೆ ಎಂದು ರಾಷ್ಟ್ರೀಯ  ಯುವ ಪ್ರಶಸ್ತಿ ಪುರಸ್ಕೃತ, ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್  ಎನ್ ಋಗ್ವೇದಿ ತಿಳಿಸಿದರು.



ಅವರು ನಗರದ ಜೈ  ಹಿಂದ್ ಕಟ್ಟೆಯಲ್ಲಿ ಋಗ್ವೇದಿ ಯೂತ್ ಕ್ಲಬ್ ಮತ್ತು ಜೈ ಹಿಂದ್ ಪ್ರತಿಷ್ಠಾನ ಹಮ್ಮಿಕೊಂಡಿದ್ದ ವಿಕಾಸ್ ದಿವಸ್ 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಭಾರತವು ಇಂದು ಶಿಕ್ಷಣ ಜಾಗೃತಿಯಾಗಿ ,ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಮೂಲಕ ಸದೃಢವಾದ ಆರೋಗ್ಯ ,ಪರಿಸರ, ಸಂರಕ್ಷಣೆ ,ಮಾನವ ಹಕ್ಕುಗಳ ಸಂರಕ್ಷಣೆಯ ಮೂಲಕ ಇಡೀ ಜಗತ್ತಿಗೆ ಮಾದರಿಯಾಗಿದೆ .ಇದಕ್ಕೆ ಕಾರಣ ರಾಜಕೀಯ ಸ್ಥಿರತೆ. ಯಾವ ದೇಶದಲ್ಲಿ ರಾಜಕೀಯ ಸ್ಥಿರತೆ, ಉತ್ತಮ ನಾಯಕತ್ವದ ಗುಣಗಳು ಆಡಳಿತ ವ್ಯವಸ್ಥೆ ದೇಶವನ್ನು ಪ್ರಗತಿಯ ಪರಿವರ್ತನೆಯ ಮೂಲಕ ರಾಷ್ಟ್ರ ಮುನ್ನಡೆ ಸಾಧ್ಯವಾಗುತ್ತದೆ. ವಿಶ್ವದಲ್ಲಿ ರಾಜಕೀಯ ಕೇಂದ್ರ ಬಿಂದುವಾಗಿರುವ ಭಾರತ ವಿಶ್ವ ನಾಯಕತ್ವವನ್ನು ವಹಿಸಿಕೊಳ್ಳುತ್ತಿರುವುದೇ ಸಾಕ್ಷಿಯಾಗಿದೆ. ವಿಕಾಸ್ ದಿವಸ್ ಮೂಲಕ ಭಾರತೀಯರಲ್ಲಿ ಆತ್ಮವಿಶ್ವಾಸವನ್ನು ,ಆತ್ಮ ನಿರ್ಭರತೆಯನ್ನು ಸ್ವಾವಲಂಬನೆ, ಸ್ವದೇಶಿ ವಸ್ತುಗಳ ಬಳಕೆಯ ನೈತಿಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಯುವಶಕ್ತಿ ರಾಷ್ಟ್ರಕವಿ ದುಡಿಯುವ ಮೂಲಕ ತಮ್ಮ ಸರ್ವಸ್ವವನ್ನು ಅರ್ಪಿಸಿಕೊಳ್ಳುವ ಮಾನಸಿಕತೆಯನ್ನು ಹಿರಿಯರು ಬೆಳೆಸುತ್ತಿರುವುದು ಮಾದರಿಯಾಗಿದೆ. ವಿಕಾಸ್ ದಿವಸ್ ಸೆಪ್ಟೆಂಬರ್ 17 ಆಚರಿಸಲಾಗುತ್ತಿದೆ. ದೇಶದಲ್ಲಿ ಇಂದು ಆಂತರಿಕ ಭದ್ರತೆ, ಬಲಿಷ್ಠ ಆರ್ಥಿಕತೆ, ಉತ್ತಮ ಸಾಮರ್ಥ್ಯ, ಕ್ರೀಡೆ ,ಸ್ವಯಂ ಉದ್ದಿಮೆ, ಬಾಹ್ಯಾಕಾಶ,ಕೈಗಾರಿಕೆ, ಕೃಷಿ ,ನೀರಾವರಿ ,ಸಂಸ್ಕೃತಿ ,ಕಲೆ ವಾಸ್ತುಶಿಲ್ಪ ,ನೃತ್ಯ ,ಸಂಗೀತ ,ಪರಿಸರ, ಸಂರಕ್ಷಣೆ ,ತಂತ್ರಜ್ಞಾನ, ಸಾಮಾಜಿಕ ಕಲ್ಯಾಣ ಮೂಲಕ ಅಭಿವೃದ್ಧಿಯ ಪಥದಲ್ಲಿ ಉನ್ನತಿಯನ್ನು ಸಾಧಿಸುತ್ತಿರುವುದು ಭಾರತದ ಉಜ್ವಲ,ಸದೃಢ ವಿಕಾಸ ತುಂಬಾ ಹತ್ತಿರದಲ್ಲಿದೆ ಎಂದು ಋಗ್ವೇದಿ ತಿಳಿಸಿದರು.

ವಿಕಾಸ್ ದಿವಸದ ಅಂಗವಾಗಿ ಪ್ರಗತಿಯ ಪ್ರತೀಕವಾದ ಹಾಗೂ ಸರ್ವ ರೋಗ ನಿವಾರಕ ಭಾರತದ ಕಲ್ಪವೃಕ್ಷವೆಂದೆ ಪ್ರಸಿದ್ಧವಾಗಿರುವ ತೆಂಗಿನಕಾಯಿಯನ್ನು ನೀಡಿ ವಿಶೇಷವಾಗಿ ಆಚರಿಸಲಾಯಿತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈ ಹಿಂದ್ ಪ್ರತಿಷ್ಠಾನದ ಮಾರ್ಗದರ್ಶಕರಾದ ನಾಗಸುಂದರ ವಹಿಸಿಕೊಂಡಿದ್ದರು. ಸಪ್ಟಂಬರ್ 17 ಭಾರತದ ವಿಕಾಸದ ದಿವಸವಾಗಿ ಆಚರಿಸುವ  ಮೂಲಕ ಯುವಕರಿಗೆ ಉತ್ಸಾಹ ಮತ್ತು ಸ್ಫೂರ್ತಿಯನ್ನು ತುಂಬುವ ದಿನವಾಗಿ ರೂಪಿಸಿರುವುದು ಮಹತ್ವವಾದದ್ದು. ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ಸ್ವಾಭಿಮಾನದ ಧೈರ್ಯವನ್ನು ,ಶಕ್ತಿಯನ್ನು ತುಂಬುವ ಕೆಲಸವಾಗಬೇಕು ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ರವಿ ಗೌಡ, ಶ್ರಾವ್ಯ ಋಗ್ವೇದಿ ,ಮನುಕುಮಾರ್, ಅಶೋಕ್, ಸುರೇಶ್ ,ಮಂಜುನಾಥ್, ಆನಂದ ಮುಂತಾದವರು ಇದ್ದರು.

Post a Comment

0Comments

Post a Comment (0)