ಬೆಂಗಳೂರು, ಸೆಪ್ಟೆಂಬರ್ 01 (ಕರ್ನಾಟಕ ವಾರ್ತೆ) :
ಭದ್ರಾವತಿ ಆಕಾಶವಾಣಿ ಕೇಂದ್ರದಿಂದ ಸೆಪ್ಟೆಂಬರ್ 02 ರಂದು ಸಂಜೆ 6.51 ರಿಂದ 7.30ರವರೆಗೆ ‘ಹಲೋ ಆಕಾಶವಾಣಿ” ನೇರ ಫೋನ್ ಇನ್ ಕಾರ್ಯಕ್ರಮ ಪ್ರಸಾರವಾಗಲಿದೆ.
ಅಡಕೆ ಬೆಳೆಯಲ್ಲಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕುರಿತು ಸಂಪನ್ಮೂಲ ವ್ಯಕ್ತಿ ನರಸಿಂಹರಾಜಪುರ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ರೋಹಿತ್ ಎಮ್. ಜಿ ಅವರು ಫೋನ್ ಇನ್ ನೇರ ಪ್ರಸಾರದಲ್ಲಿ ಮಾಹಿತಿ ನೀಡಲಿದ್ದಾರೆ.
ಕರೆ ಮಾಡಲು ದೂರವಾಣಿ ಸಂಖ್ಯೆ: 08282-270282, 270283 ಹಾಗೂ ವಾಟ್ಸಪ್ ಮೆಸೆಜ್ ಮಾಡಲು ದೂರವಾಣಿ ಸಂಖ್ಯೆ: 9481572600 ಗೆ ಸಂಪರ್ಕಿಸಬಹುದು.