ರಾಜ್ಯದಲ್ಲಿ ಆದಿ ಕರ್ಮಯೋಗಿ ಅಭಿಯಾನ ಹಾಗೂ ಧರ್ತಿ ಅಭಾ ಜನ್ ಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಯಶಸ್ವಿ ಕರ್ನಾಟಕ ರಾಜ್ಯಕ್ಕೆ 6 ರಾಷ್ಟ್ರ ಮಟ್ಟದ ಪ್ರಶಸ್ತಿ : ರಂದೀಪ್ ಡಿ.

varthajala
0

 ಬೆಂಗಳೂರು, ಅಕ್ಟೋಬರ್ 18  , (ಕರ್ನಾಟಕ ವಾರ್ತೆ): ರಾಜ್ಯದಲ್ಲಿ ಆದಿ ಕರ್ಮಯೋಗಿ ಅಭಿಯಾನ ಹಾಗೂ ಧರ್ತಿ ಅಭಾ ಜನ್ ಜಾತೀಯ ಗ್ರಾಮ ಉತ್ಕರ್ಷ ಅಭಿಯಾನವನ್ನು ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯಕ್ಕೆ 6 ರಾಷ್ಟ್ರ ಮಟ್ಟದ ಪ್ರಶಸ್ತಿ ಪತ್ರಗಳನ್ನು ಗೌರವಾನ್ವಿತ ರಾಷ್ಟ್ರಪತಿ ಶ್ರೀಮತಿ ದೌಪದಿ ಮುರ್ಮು ಅವರು ಪ್ರದಾನ ಮಾಡಿದ್ದಾರೆ ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳಾದ ರಂದೀಪ್ ಡಿ. ರವರು ತಿಳಿಸಿದ್ದಾರೆ.


ನವೆದಹಲಿಯ ವಿಜ್ಞಾನ ಭವನದಲ್ಲಿ 2025 ನೇ ಅಕ್ಟೋಬರ್ 17 ರಂದು ನಡೆದ ರಾಷ್ಟ್ರೀಯ ಸಮ್ಮೇಳನ   (National Conclave) ದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಧರ್ತಿ ಅಭಾ ಜನ್ ಜಾತೀಯ ಗ್ರಾಮ ಉತ್ಕರ್ಷ ಅಭಿಯಾನ (DA JGUA)  ವನ್ನು ಅತ್ಯುತ್ತಮವಾಗಿ ಅನುμÁ್ಠನಗೊಳಿಸಿದ ಜಿಲ್ಲೆ ಎಂದು ಪ್ರಶಸ್ತಿ ನೀಡಿದ್ದಾರೆ.
 
ಚಿಕ್ಕಬಳ್ಳಾಪುರ, ಬೀದರ್, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಿಗೆ ಆದಿ ಕರ್ಮಯೋಗಿ ಅಭಿಯಾನ (ಎಕೆವೈ) ವನ್ನು ಯಶಸ್ವಿಯಾಗಿ ಅನುμÁ್ಟನಗೊಳಿಸಿದ ಜಿಲ್ಲೆಗಳೆಂದು ಪ್ರಶಸ್ತಿಯನ್ನು ಗೌರವಾನ್ವಿತ ರಾಷ್ಟ್ರಪತಿಯವರು ಪ್ರದಾನ ಮಾಡಿರುತ್ತಾರೆ.

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸಂಶೋಧನಾಧಿಕಾರಿ ರಾಜಶೇಖರ್ ಅವರಿಗೆ ರಾಜ್ಯಮಟ್ಟದ ಮಾಸ್ಟರ್ ಟ್ರೈನರ್ ಪ್ರಶಸ್ತಿಗೆ ಆಯ್ಕೆ ಮಾಡಿ ಅಭಿನಂದಿಸಲಾಗಿದೆ.

ಈ ಸಂದರ್ಭದಲ್ಲಿ ರಾಜ್ಯವನ್ನು ಪ್ರತಿನಿಧಿಸಿದ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಯೋಗೇಶ್ ಟಿ, ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ., ಮತ್ತು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ರವೀಂದ್ರ ಪಿ.ಎನ್. ರವರು ಹಾಜರಿರುತ್ತಾರೆ ಎಂದು ರಂದೀಪ್ ಡಿ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.a

Post a Comment

0Comments

Post a Comment (0)