ಬೆಂಗಳೂರು, ಅಕ್ಟೋಬರ್ 08, (ಕರ್ನಾಟಕ ವಾರ್ತೆ): ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು, ಮಧ್ಯಸ್ಥಿಕೆ ಮತ್ತು ಸಂಧಾನ ಯೋಜನಾ ಸಮಿತಿ (ಎಂ.ಸಿ.ಪಿ.ಸಿ), ಭಾರತದ ಸರ್ವೋಚ್ಚ ನ್ಯಾಯಾಲಯದೊಂದಿಗೆ, “ವಿಶೇಷ ಮಧ್ಯಸ್ಥಿಕೆ ಅಭಿಯಾನ “ರಾಷ್ಟ್ರಕ್ಕಾಗಿ 90 ದಿನಗಳ ಕಾರ್ಯಾಚರಣೆ”ಯನ್ನು ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳು, ಭಾರತದ ಸರ್ವೋಚ್ಚ ನ್ಯಾಯಾಲಯ ಹಾಗೂ ಕಾರ್ಯನಿರ್ವಾಹಕ ಅಧ್ಯಕ್ಷರು, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಅಧ್ಯಕ್ಷರು, ಎಂ.ಸಿ.ಪಿ.ಸಿ. ಯವರ ಮಾರ್ಗದರ್ಶನದಲ್ಲಿ ಪ್ರಾರಂಭಿಸಲಾಗಿತ್ತು.
"ಮಧ್ಯಸ್ಥಿಕೆ ರಾಷ್ಟ್ರಕ್ಕಾಗಿ" ಅಭಿಯಾನವನ್ನು ಭಾರತದ ಉದ್ದಗಲಕ್ಕೂ ಪ್ರಾರಂಭಿಸಲಾಗಿತ್ತು. ಇದು ಅನುಮೋದಿತ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್.ಒ.ಪಿ.)ನ್ನು ಪಾಲಿಸಿ 1ನೇ ಜುಲೈ 2025 ರಿಂದ 6ನೇ ಅಕ್ಟೋಬರ್, 2025ರವರೆಗೆ ಎಲ್ಲಾ ಉಚ್ಚ ನ್ಯಾಯಾಲಯಗಳಲ್ಲಿ, ಜಿಲ್ಲಾ ನ್ಯಾಯಾಲಯಗಳು ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮಧ್ಯಸ್ಥಿಕೆಯ ಮೂಲಕ ಇತ್ಯರ್ಥಪಡಿಸಲು 90 ದಿನಗಳ ತೀವ್ರ ಅಭಿಯಾನವಾಗಿತ್ತು.
ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು, ಮತ್ತು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಪೋಷಕರು, ಹಾಗೂ ಕಾರ್ಯ ನಿರ್ವಾಹಕ ಅಧ್ಯಕ್ಷರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನಿರ್ದೇಶನದಂತೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು, ಮಧ್ಯಸ್ಥಿಕೆ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದ್ದು, ಮಧ್ಯಸ್ಥಿಕೆ- “ರಾಷ್ಟ್ರಕ್ಕಾಗಿ 90 ದಿನಗಳ ಕಾರ್ಯಚರಣೆ” ಮೂಲಕ ಉಚ್ಚನ್ಯಾಯಾಲಯಗಳು ಎಲ್ಲಾ ಜಿಲ್ಲಾ ಮತ್ತು ತಾಲೂಕು ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ಮಧ್ಯಸ್ಥಿಕೆ ಪ್ರಕ್ರಿಯೆ 1ನೇ ಜುಲೈ 2025ರಿಂದ 6 ನೇ ಅಕ್ಟೋಬರ್, 2025 ರವರೆಗೆ ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯದಲ್ಲಿ, 01 ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ ಮತ್ತು 28 ಜಿಲ್ಲಾ ಮಧ್ಯಸ್ಥಿಕೆ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕರ್ನಾಟಕ ಮಧ್ಯಸ್ಥಿಕೆ ಕೇಂದ್ರವು, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ನಗರ ವ್ಯಾಪ್ತಿಯೊಳಗಿನ ನ್ಯಾಯಾಲಯಗಳ ಪ್ರಕರಣಗಳ ಮಧ್ಯಸ್ಥಿಕೆ ಪ್ರಕ್ರಿಯೆಯು ಮೇಲ್ವಿಚಾರಣೆ ಮಾಡುತ್ತದೆ. ಉಳಿದ 28 ಜಿಲ್ಲಾ ಮಧ್ಯಸ್ಥಿಕೆ ಕೇಂದ್ರಗಳನ್ನು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳ ಮೂಲಕ ಮೇಲ್ವಿಚಾರಣೆ ಮಾಡುತ್ತಿದೆ.
ಕರ್ನಾಟಕ ಉಚ್ಚ ನ್ಯಾಯಾಲಯದ ಆರು ಗೌರವಾನ್ವಿತ ನ್ಯಾಯಮೂರ್ತಿಗಳನ್ನು ಒಳಗೊಂಡಿರುವ ರಾಜ್ಯ ಮಟ್ಟದ ಮಧ್ಯಸ್ಥಿಕೆ ಸಮಿತಿಯು ರಾಜ್ಯದಲ್ಲಿನ ಈ ವಿಶೇಷ ಮಧ್ಯಸ್ಥಿಕೆ ಅಭಿಯಾನದ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಿರುತ್ತದೆ.
ಸಮಯಕ್ಕೆ ಸರಿಯಾಗಿ ದತ್ತಾಂಶವನ್ನು ಕಳುಹಿಸಲು ಮತ್ತು ವಿಶೇಷ ಅಭಿಯಾನಕ್ಕಾಗಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಎಂ.ಸಿ.ಪಿ.ಸಿ., ಭಾರತದ ಸರ್ವೋಚ್ಚ ನ್ಯಾಯಾಲಯ, ನವದೆಹಲಿಯೊಂದಿಗೆ ಸಹಕರಿಸಲು, ವಿಲೇಖನಾಧಿಕಾರಿ (ಪರಿಶೀಲನೆ ಮತ್ತು ಅಂಕಿ ಅಂಶ), ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ರವರನ್ನು ಕರ್ನಾಟಕ ರಾಜ್ಯದಲ್ಲಿ ಹಮ್ಮಿಕೊಳ್ಳಲಾಗಿರುವ ಈ “ರಾಷ್ಟ್ರಕ್ಕಾಗಿ ಮಧ್ಯಸ್ಥಿಕೆ” 90 ದಿನಗಳ ಅಭಿಯಾನದ “ನೋಡಲ್ ಅಧಿಕಾರಿಯಾಗಿ” ನಾಮನಿರ್ದೇಶನ ಮಾಡಲಾಗಿತ್ತು.
ಈ ನಿಟ್ಟಿನಲ್ಲಿ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು, ಮಹಾವಿಲೇಖನಾಧಿಕಾರಿ, ಕರ್ನಾಟಕ ಉಚ್ಚನ್ಯಾಯಾಲಯ, ಬೆಂಗಳೂರು ಇವರಿಗೆ ಕರ್ನಾಟಕದ ಎಲ್ಲಾ ನ್ಯಾಯಾಲಯಗಳ ಮಧ್ಯಸ್ಥಿಕೆ ಕೇಂದ್ರಗಳಿಗೆ ವಿಶೇಷ ಅಭಿಯಾನ - ಮಧ್ಯಸ್ಥಿಕೆ “ರಾಷ್ಟ್ರಕ್ಕಾಗಿ” 90 ದಿನಗಳ ಚಾಲನೆಗೆ ಪ್ರಕರಣಗಳನ್ನು ಗುರುತಿಸಲು ಮತ್ತು ಉಲ್ಲೇಖಿಸಲು ಅಗತ್ಯ ನಿರ್ದೇಶನಗಳನ್ನು ನೀಡಲು ಕೋರಿತ್ತು. ಮುಂದುವರೆದು ‘ಪ್ರಮಾಣಿಕ ಕಾರ್ಯಚರಣಾ ವಿಧಾನವನ್ನು’ ಪಾಲಿಸಿ ಅಭಿಯಾನವನ್ನು ಆಯೋಜಿಸಲು ಮತ್ತು ಟಿವಿ ಚಾನೆಲ್‍ಗಳು / ಸ್ಥಳೀಯ ಸುದ್ದಿ ಪತ್ರಿಕೆಗಳು / ಸಾಮಾಜಿಕ ಮಾಧ್ಯಮಗಳು ಮುಂತಾದವುಗಳ ಮೂಲಕ ವಿಶೇಷ ಅಭಿಯಾನದ ಬಗ್ಗೆ ವ್ಯಾಪಕ ಪ್ರಚಾರವನ್ನು ನೀಡಲು ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ 28 ಜಿಲ್ಲೆಗಳ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕರ್ನಾಟಕ ಮಧ್ಯಸ್ಥಿಕೆ ಕೇಂದ್ರದ ನಿರ್ದೇಶಕರಿಗೆ ಕೋರಲಾಗಿತ್ತು.
ಕರ್ನಾಟಕ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಮತ್ತು ನ್ಯಾಯಮೂರ್ತಿಗಳಾದ ಅನು ಸಿವರಾಮನ್, ಕರ್ನಾಟಕ ಉಚ್ಚನ್ಯಾಯಾಲಯ ನ್ಯಾಯಮೂರ್ತಿಗಳು ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷರು, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ, ನ್ಯಾಯಮೂರ್ತಿಗಳು, ಕರ್ನಾಟಕ ಉಚ್ಚ ನ್ಯಾಯಾಲಯ ಮತ್ತು ಅಧ್ಯಕ್ಷರು, ರಾಜ್ಯ ಮಟ್ಟದ ಮಧ್ಯಸ್ಥಿಕೆ ಸಮಿತಿ ಮತ್ತು ಇದರ ಸದಸ್ಯರು, ಆಡಳಿತ ಮಂಡಳಿ, ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯ ಗೌರವಾನ್ವಿತ ಆಡಳಿತಾತ್ಮಕ ನ್ಯಾಯಮೂರ್ತಿಗಳು ತಮ್ಮ ತಮ್ಮ ಜಿಲ್ಲೆಗಳು ಮತ್ತು ಕೌಟುಂಬಿಕ ನ್ಯಾಯಾಲಯಗಳು, ಪ್ರಧಾನ ಜಿಲ್ಲಾ ಮತ್ತು ಸತ್ರನ್ಯಾಯಾಧೀಶರು / ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಮತ್ತು ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ ರವರೊಂದಿಗೆ ಈ ಬಗ್ಗೆ ನಿರಂತರ ಸಭೆಗಳನ್ನು ನಡೆಸಿರುತ್ತಾರೆ.
ಜಿಲ್ಲಾ ಮತ್ತು ತಾಲ್ಲೂಕು ವಕೀಲರ ಸಂಘಗಳ ಅಧ್ಯಕ್ಷರು / ಪದಾಧಿಕಾರಿಗಳು, ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳ ಪಟ್ಟಿಯಲ್ಲಿರುವ ಮಧ್ಯಸ್ಥಿಕೆದಾರರೆಲ್ಲರೂ ಮಧ್ಯಸ್ಥಿಕೆ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಉತ್ತೇಜಿಸಲಾಯಿತು.
ರಾಜ್ಯ ಮಟ್ಟದ ಮಧ್ಯಸ್ಥಿಕೆ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರುಗಳು, ಸದಸ್ಯ ಕಾರ್ಯದರ್ಶಿ, ಕ.ರಾ.ಕಾ.ಸೇ.ಪ್ರಾ ಮತ್ತು ನೋಡಲ್ ಅಧಿಕಾರಿ, ಕರ್ನಾಟಕ ಉಚ್ಚ ನ್ಯಾಯಾಲಯ ಮತ್ತು ನಿರ್ದೇಶಕರು, ಕರ್ನಾಟಕ ಮಧ್ಯಸ್ಥಿಕೆ ಕೇಂದ್ರದವರೊಂದಿಗೆ, ಕಾಲಕಾಲಕ್ಕೆ 7 ಸಭೆಗಳನ್ನು ನಡೆಸಿ, ಮಧ್ಯಸ್ಥಿಕೆ ಕೊಠಡಿಗಳು, ವಿ.ಸಿ. ಸೌಲಭ್ಯ, ಮಧ್ಯಸ್ಥಿಕೆಗೆ ಪ್ರಕರಣಗಳನ್ನು ಉಲ್ಲೇಖಿಸುವುದು, ಈ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಲು ಮಧ್ಯಸ್ಥಿಕೆದಾರರನ್ನು ಮೇಲ್ವಿಚಾರಣೆ ಮಾಡುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ನಿರ್ಣಯಗಳನ್ನು / ನಡವಳಿಗಳನ್ನು ಹೊರಡಿಸಲಾಗಿತ್ತು. ಅದರಂತೆ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಮಧ್ಯಸ್ಥಿಕೆ ವಿಶೇಷ ಅಭಿಯಾನ “ರಾಷ್ಟ್ರಕ್ಕಾಗಿ 90 ದಿನಗ¼ Àಕಾರ್ಯಚರಣೆ”ಯ ಯಶಸ್ಸಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು / ತಾಲೂಕು ಕಾನೂನು ಸೇವೆಗಳ ಸಮಿತಿಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿತ್ತು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅವರು, ಎಲ್ಲಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೊಂದಿಗೆ 12 ಸಭೆಗಳನ್ನು ನಡೆಸಿದ್ದು, ಜಿಲ್ಲಾ ಮತ್ತು ತಾಲ್ಲೂಕು ಸ್ಥಳಗಳಲ್ಲಿ ಅವರು ಎದುರಿಸುತ್ತಿರುವ ತೊಂದರೆಗಳನ್ನು / ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದ್ದಾರೆ ಮತ್ತು ಮಧ್ಯಸ್ಥಿಕೆ ಪ್ರಕ್ರಿಯೆಗೆ ಉತ್ತಮ ಸಂಖ್ಯೆಯ ಪ್ರಕರಣಗಳನ್ನು ಗುರುತಿಸುವಲ್ಲಿ, ಉಲ್ಲೇಖಿಸುವಲ್ಲಿ ಮತ್ತು ಇತ್ಯರ್ಥಗೊಳಿಸುವಲ್ಲಿ ಅವರಿಗೆ ಸಂಪೂರ್ಣವಾದ ಮಾರ್ಗದರ್ಶನ ನೀಡಿದ್ದಾರೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅವರು ದೂರದರ್ಶನ ಕಾರ್ಯಕ್ರಮ “ಹೆಲೋ ಗೆಳೆಯರೇ” ಮತ್ತು “ಅಖಿಲ ಭಾರತ ಬಾನುಲಿ” ಕಾರ್ಯಕ್ರಮದ ಮೂಲಕ ಮಧ್ಯಸ್ಥಿಕೆ ವಿಶೇಷ ಅಭಿಯಾನದ ಬಗ್ಗೆ ವ್ಯಾಪಕ ಪ್ರಚಾರ ನೀಡಿದ್ದಾರೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ರಾಜ್ಯದ ಎಲ್ಲಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಮಧ್ಯಸ್ಥಿಕೆ ಕೇಂದ್ರಗಳ ಸಹ-ಸಂಯೋಜಕರಾಗಿದ್ದು, ಈ ವಿಶೇಷ ಅಭಿಯಾನದ ಯಶಸ್ಸಿಗಾಗಿ ಆಯಾ ನ್ಯಾಯಾಂಗ ಅಧಿಕಾರಿಗಳು, ಮಧ್ಯಸ್ಥಿಕೆಗಾರರು ಮತ್ತು ಇತರ ಪಾಲುದಾರರರನ್ನು ಪ್ರೇರೇಪಿಸಲು ಒಟ್ಟು 686 ಸಭೆಗಳನ್ನು ನಡೆಸಿದ್ದಾರೆ.
ಅದರಂತೆ, 1,300 ಮಧ್ಯಸ್ಥಿಕೆದಾರರ ಭಾಗವಹಿಸುವಿಕೆಯು, ಮಧ್ಯಸ್ಥಿಕೆಯ ಮೂಲಕ ಉತ್ತಮ ಸಂಖ್ಯೆಯ ಪ್ರಕರಣಗಳ ಇತ್ಯರ್ಥವು, ಸದರಿ ವಿಶೇಷ ಅಭಿಯಾನವನ್ನು ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿತ್ತು.
ಈ 90 ದಿನಗಳ ಮಧ್ಯಸ್ಥಿಕೆ "ರಾಷ್ಟ್ರಕ್ಕಾಗಿ" ಅಭಿಯಾನದ ಬಗ್ಗೆ ವ್ಯಾಪಕ ಪ್ರಚಾರ ಮಾಡುವಂತೆ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದೊಂದಿಗೆ ಪತ್ರಿಕಾ ಪ್ರಕಟಣೆಯನ್ನು ಹಂಚಿಕೊಳ್ಳಲಾಗಿತ್ತು. ಜಿಲ್ಲಾ ಮಟ್ಟದಲ್ಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳು ಕೂಡ ಸಾಮಾಜಿಕ ಮಾಧ್ಯಮ ಸೇರಿದಂತೆ ಸ್ಥಳೀಯ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದೊಂದಿಗೆ ಪ್ರತ್ಯೇಕ ಪತ್ರಿಕಾಗೋಷ್ಠಿಯನ್ನು ನಡೆಸಿದ್ದಲ್ಲದೇ ಸ್ಥಳೀಯ ರೇಡಿಯೋ, ಟಿವಿ ಮತ್ತು ಯೂಟ್ಯೂಬ್, ಟೆಲಿಗ್ರಾಮ್ ಚಾನೆಲ್‍ಗಳನ್ನು ಬಳಸಿಕೊಂಡು ವಿಶೇಷ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದವರ ವ್ಯಾಪಕ ಪ್ರಚಾರದಿಂದ ಮಧ್ಯಸ್ಥಿಕೆ ವಿಶೇಷ ಅಭಿಯಾನಕ್ಕೆ ಅಪಾರ ಜನಸ್ಪಂದನೆ ದೊರೆಕಿರುತ್ತದೆ ಮತ್ತು ಹೆಚ್ಚಿನ ಪ್ರಕರಣಗಳು ಇತ್ಯರ್ಥಗೊಂಡಿರುತ್ತದೆ.
ಈ ವಿಶೇಷ ಮಧ್ಯಸ್ಥಿಕೆ “ರಾಷ್ಟ್ರÀಕ್ಕಾಗಿ 90 ದಿನಗಳ ಅಭಿಯಾನ”ವನ್ನು ಜುಲೈ 01, 2025 ರಿಂದ ಅಕ್ಟೋಬರ್ 06,2025 ರವರೆಗೆ ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ (ಕರ್ನಾಟಕ ಉಚ್ಚ ನ್ಯಾಯಾಲಯದ ಪ್ರಧಾನಪೀಠ, ಬೆಂಗಳೂರು ನಗರ ಮತ್ತು ಗ್ರಾಮೀಣ ನಗರ ನ್ಯಾಯಾಲಯಗಳ ಮಿತಿಯೊಳಗೆ), ಕರ್ನಾಟಕ ಉಚ್ಚ ನ್ಯಾಯಾಲಯದ ಪೀಠಗಳು, ಧಾರವಾಡ ಮತ್ತು ಕಲಬುರಗಿ ಮತ್ತು ರಾಜ್ಯದ ಎಲ್ಲಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಗಳು (ಜಿ.ಕಾ.ಸೇ.ಪ್ರಾ) ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿ (ತಾ.ಕಾ.ಸೇ.ಸಮಿತಿ) ಗಳಲ್ಲಿ ನಡೆಸಲಾಗಿದೆ.
ಜುಲೈ 01, 2025 ರಂತೆ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು (ಎಂಸಿಪಿಸಿಯಎಸ್.ಓ.ಪಿ ಯಲ್ಲಿ ನಿರ್ದಿಷ್ಟಪಡಿಸಿದ ಪ್ರಕರಣಗಳ ವರ್ಗಕ್ಕೆ ಸಂಬಂಧಿಸಿದಂತೆ) ಕರ್ನಾಟಕದ ಗೌರವಾನ್ವಿತ ಉಚ್ಚ ನ್ಯಾಯಾಲಯ ಮತ್ತು ಜಿಲ್ಲಾ ನ್ಯಾಯಾಲಯಗಳ ಮುಂದೆ 13,86,837 ಪ್ರಕರಣಗಳು ಇದ್ದವು. ಆ ಪ್ರಕರಣಗಳಲ್ಲಿ 76,197 ಪ್ರಕರಣಗಳನ್ನು ಗುರುತಿಸಿ ಮಧ್ಯಸ್ಥಿಕೆ ಕೇಂದ್ರಗಳಿಗೆ ಕಳುಹಿಸಲಾಯಿತು, ಅದರಲ್ಲಿ 46,676 ಪ್ರಕರಣಗಳನ್ನು ಮಧ್ಯಸ್ಥಿಕೆಗೆ ತೆಗೆದುಕೊಂಡಿದ್ದು, 5,524 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು ಮತ್ತು 25,696 ಪ್ರಕರಣಗಳು ಇತ್ಯರ್ಥಗೊಂಡಿರುವುದಿಲ್ಲ. ಉಳಿದ 15,456 ಪ್ರಕರಣಗಳು ಇನ್ನೂ ಮಧ್ಯಸ್ಥಿಕೆ ವಹಿಸಬೇಕಾಗಿದ್ದು, ರಾಜ್ಯ ಎಲ್ಲಾ ಮಧ್ಯಸ್ಥಿಕೆ ಕೇಂದ್ರಗಳಲ್ಲಿ ಈ ಪ್ರಕ್ರಿಯೆಯು ಮುಂದುವರಿಯುತ್ತದೆ.
«ªÀgÀ | PÀ.ªÀÄ.PÉÃAzÀæ (¥ÀæzsÁ£À ¦ÃoÀ ¨ÉAUÀ¼ÀÆgÀÄ, (¨ÉAUÀ¼ÀÆgÀÄ £ÀUÀgÀ ªÀÄvÀÄÛUÁæªÀiÁAvÀgÀ) | zsÁgÀªÁqÀ ¦ÃoÀ | PÀ®§ÄgÀV ¦ÃoÀ | 28 f¯Áè ªÀÄzsÀå¹ÜPÉ PÉÃAzÀæUÀ¼ÀÄ | MlÄÖ |
¢£ÁAPÀ 01.07.2025 gÀ CAvÀåPÉÌ MlÄÖ £ÁåAiÀiÁ®AiÀÄUÀ¼À°è ¨ÁQ ¥ÀæPÀgÀtUÀ¼ÀÄ (JA.¹.¦.¹. J¸ï.N.¦.AiÀÄ°è ¤¢ðµÀ×¥Àr¸À¯ÁzÀ ¥ÀæPÀgÀUÀ¼ÀÄ ªÀiÁvÀæ) | 3,98,996 | 31,663 | 12,527 | 9,43,651 | 13,86,837 |
ªÀÄzsÀå¹ÜPÉUÁV UÀÄgÀÄw¹zÀ ªÀÄvÀÄÛ G¯ÉèÃT¹zÀ MlÄÖ ¥ÀæPÀgÀtUÀ¼ÀÄ | 11,729 | 2,463 | 721 | 61,317 | 76,230 |
ªÀÄzsÀå¹ÜPÉ £ÀqÉzÀMlÄÖ ¥ÀæPÀgÀtUÀ¼ÀÄ | 4,885 | 2,463 | 465 | 39,267 | 47,080 |
ªÀÄzsÀå¹ÜPÉAiÀİè EvÀåxÀð¥Àr¸À¯ÁzÀMlÄÖ ¥ÀæPÀgÀtUÀ¼ÀÄ | 1,923 | 189 | 8 | 3,455 | 5,575 |
ªÀÄzsÀå¹ÜPÉAiÀİè EvÀåxÀðªÁUÀzÀ MlÄÖ ¥ÀæPÀgÀtUÀ¼ÀÄ | 1,376 | 1,652 | 353 | 22,763 | 26,144 |
ªÀUÀðªÁgÀÄ ¥ÀæPÀgÀtUÀ¼À «¯ÉêÁj F PɼÀV£ÀAvÉ vÉÆÃj¸À¯ÁVzÉ:
PÀæ. ¸ÀA. | ªÀUÀð | 01.07.2025gÀ CAvÀåPÉÌ MlÄÖ ¨ÁQ ¥ÀæPÀgÀtUÀ¼ÀÄ | ªÀÄzsÀå¹ÜPÉAiÀİè EvÀåxÀðªÁzÀMlÄÖ ¥ÀæPÀgÀtUÀ¼ÀÄ |
| ªÉʪÁ»PÀ «ªÁzÀUÀ¼ÀÄ | 43,345 | 2,862 |
| C¥ÀWÁvÀzÀ ºÀPÀÄÌUÀ¼À ¥ÀæPÀgÀtUÀ¼ÀÄ | 1,27,202 | 104 |
| PËlÄA©PÀ zËdð£Àå ¥ÀæPÀgÀtUÀ¼ÀÄ | 23,137 | 176 |
| ZÉPï ¨Ë£ïì ¥ÀæPÀgÀtUÀ¼ÀÄ | 3,43,324 | 668 |
| ªÁtÂdå «ªÁzÀUÀ¼À ¥ÀæPÀgÀtUÀ¼ÀÄ | 16,446 | 21 |
| ¸ÉêÁ «μÀAiÀÄUÀ¼À ¥ÀæPÀgÀtUÀ¼ÀÄ | 15,111 | 0 |
| ¸ÀAeÉÕAiÀÄ C¥ÀgÁ¢üPÁgÀ ¥ÀæPÀgÀtUÀ¼ÀÄ | 75,194 | 188 |
| UÁæºÀPÀgÀ «ªÁzÀUÀ¼À ¥ÀæPÀgÀtUÀ¼ÀÄ | 10,231 | 8 |
| ¸Á® ªÀ¸ÀƯÁw ¥ÀæPÀgÀtUÀ¼ÀÄ | 12,534 | 40 |
| «¨sÁUÀ ¥ÀæPÀgÀtUÀ¼ÀÄ | 2,06,511 | 649 |
| ºÉÆgÀºÁPÀÄ«PÉ ¥ÀæPÀgÀtUÀ¼ÀÄ | 1,573 | 4 |
| ¨sÀƸÁé¢üãÀ ¥ÀæPÀgÀtUÀ¼ÀÄ | 50,952 | 129 |
| PÁ«ÄðPÀ ¥ÀæPÀgÀtUÀ¼ÀÄ | 3,722 | 150 |
| ¸ÀÆPÀÛ ªÀÄzsÀå¹ÜPÉ ¥ÀæPÀgÀtUÀ¼ÀÄ | 1,539 | 0 |
| EvÀgÀ ¸ÀÆPÀÛ ¹«¯ï ¥ÀæPÀgÀtUÀ¼ÀÄ | 4,56,016 | 576 |
| MlÄÖ | 13,86,837 | 5,575 |
ಪಾಲು ವಿಭಾಗ ದಾವೆಗಳು: ಒಟ್ಟು 649 ಪಾಲು ವಿಭಾಗ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
ಅಪಘಾತ ಪರಿಹಾರ ಪ್ರಕರಣಗಳು: ವಿಶೇಷ ಅಭಿಯಾನದಲ್ಲಿ ಒಟ್ಟು 104 ಎಂ.ವಿ.ಸಿ. ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ.
ಚೆಕ್ ಬೌನ್ಸ್ ಪ್ರಕರಣಗಳು : ಒಟ್ಟು 668 ಎನ್.ಐ. ಕಾಯ್ದೆ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ.
ವಾಣಿಜ್ಯ ವಿವಾದಗಳ ಪ್ರಕರಣಗಳು: ಒಟ್ಟು, 21ವಾಣಿಜ್ಯ ವಿವಾದಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ.
ಕ್ರಿಮಿನಲ್ ಕಾಂಪೌಂಡಬಲ್ ಪ್ರಕರಣಗಳು: ಒಟ್ಟು, 188 ಕ್ರಿಮಿನಲ್ ಕಾಂಪೌಂಡಬಲ್ ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ.
ಡಿ.ಆರ್.ಟಿ. ಪ್ರಕರಣಗಳು: ಒಟ್ಟು, 40 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ.
ಗ್ರಾಹಕ ಪ್ರಕರಣಗಳು: ಒಟ್ಟು 8 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ.
ಮಧ್ಯಸ್ಥಿಕೆ 90 ದಿನಗಳ ಕಾರ್ಯಾಚರಣೆ ರಾಷ್ಟ್ರಕ್ಕಾಗಿ ವಿಶೇಷ ಅಭಿಯಾನದ
ಯಶಸ್ಸಿನ ಕಥೆಗಳು:
ವಿಶೇಷ ಅಭಿಯಾನದ ಮಧ್ಯಸ್ಥಿಕೆ ಕಾರ್ಯಾಚರಣೆ ಹಳೆಯ ಪ್ರಕರಣಗಳ ಇತ್ಯರ್ಥ
5 ವರ್ಷಗಳು ಮತ್ತು ಮೇಲ್ಪಟ್ಟು 177, 10 ವರ್ಷಗಳು ಮತ್ತು ಮೇಲ್ಪಟ್ಟು 23, 15 ವರ್ಷಗಳು ಮತ್ತು ಮೇಲ್ಪಟ್ಟು 6 ಸೇರಿ ಒಟ್ಟು 206 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ.
163 ಪ್ರಕರಣಗಳಲ್ಲಿ, ಹಿರಿಯ ನಾಗರಿಕರು ಈ ವಿಶೇಷ ಅಭಿಯಾನದ ಮಧ್ಯಸ್ಥಿಕೆ ಕಾರ್ಯಾಚರಣೆಯಿಂದ ಪ್ರಯೋಜನ ಪಡೆದಿದ್ದಾರೆ.
ಪುನರ್ಮಿಲನ ಪ್ರಕರಣಗಳು: ರಾಜ್ಯದ ವಿವಿಧ ಸ್ಥಳಗಳಿಂದ ಒಟ್ಟು 159 ದಂಪತಿಗಳು ವಿಶೇಷ ಅಭಿಯಾನದ ಮಧ್ಯಸ್ಥಿಕೆ ಕಾರ್ಯಾಚರಣೆಯಲ್ಲಿ ಸಂಧಾನದ ಕಾರಣದಿಂದ ಪುನರ್ಮಿಲನಗೊಂಡರು.
90 ದಿನಗಳ ಕಾರ್ಯಾಚರಣೆ ರಾಷ್ಟ್ರಕ್ಕಾಗಿ ವಿಶೇಷ ಅಭಿಯಾನದ ಮಧ್ಯಸ್ಥಿಕೆ ಕಾರ್ಯಾಚರಣೆಯ ಬಗ್ಗೆ ವ್ಯಾಪಕ ಪ್ರಚಾರ ನೀಡುವಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮವು ಪ್ರಮುಖ ಪಾತ್ರ ವಹಿಸಿದೆ. ಆದ್ದರಿಂದ, ಈ ನಿಟ್ಟಿನಲ್ಲಿ ವ್ಯಾಪಕ ಪ್ರಚಾರ ನೀಡಿದ್ದಕ್ಕಾಗಿ ನಾವು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದ ಸ್ನೇಹಿತರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ.
ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ವಿಭು ಬಖ್ರು, ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ, ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಅನು ಶಿವರಾಮನ್, ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಗೌರವಾನ್ವಿತ ನ್ಯಾಯಮೂರ್ತಿ ಜಯಂತ್ ಬ್ಯಾನರ್ಜಿ, ನ್ಯಾಯಮೂರ್ತಿಗಳು ಕರ್ನಾಟಕ ಉಚ್ಚ ನ್ಯಾಯಾಲಯ ಮತ್ತು ಅಧ್ಯಕ್ಷರು, ರಾಜ್ಯ ಮಟ್ಟದ ಮಧ್ಯಸ್ಥಿಕೆ ಸಮಿತಿ, ನ್ಯಾಯಮೂರ್ತಿ ಎಸ್. ಜಿ. ಪಂಡಿತ್, ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ, ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್, ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ, ನ್ಯಾಯಮೂರ್ತಿ ಎಂ.ಐ. ಅರುಣ್, ನ್ಯಾಯಮೂರ್ತಿಗಳು, ಸದಸ್ಯರು ರಾಜ್ಯ ಮಟ್ಟದ ಮಧ್ಯಸ್ಥಿಕೆ ಸಮಿತಿ, ಈ ವಿಶೇಷ ಅಭಿಯಾನದ ಯಶಸ್ಸಿಗಾಗಿ ಕೈಜೋಡಿಸಿದ ಎಲ್ಲಾ ಪಾಲುದಾರರು ಮಾಡಿದ ಪ್ರಯತ್ನಗಳನ್ನು ಶ್ಲಾಘಿಸಿದ್ದಾರೆ.
ವಿಶೇಷ ಮಧ್ಯಸ್ಥಿಕೆ ಅಭಿಯಾನದಲ್ಲಿ ದಾಖಲೆಯ ಸಂಖ್ಯೆಯ ಪ್ರಕರಣಗಳನ್ನು ವಿಲೇವಾರಿ ಮಾಡಿದ್ದಕ್ಕಾಗಿ ಗೌರವಾನ್ವಿತ ನ್ಯಾಯಮೂರ್ತಿಗಳು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ನ್ಯಾಯಾಂಗ ಅಧಿಕಾರಿಗಳು, ಮಧ್ಯಸ್ಥಿಕೆದಾರರು ಮತ್ತು ಇತರ ಪಾಲುದಾರರು, ದಾವೆದಾರ, ಸಾರ್ವಜನಿಕರು ಮತ್ತು ಪತ್ರಿಕಾ ಮತ್ತು ಮಾಧ್ಯಮಗಳು ನೀಡಿದ ಸಹಕಾರಕ್ಕಾಗಿ ಗೌರವಾನ್ವಿತ ನ್ಯಾಯಮೂರ್ತಿಗಳು ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.