ಬೆಂಗಳೂರು : ನೃತ್ಯ ದಿಶಾ ಟ್ರಸ್ಟ್ ವತಿಯಿಂದ ಅಕ್ಟೋಬರ್ 5, ಭಾನುವಾರ ಬೆಳಗ್ಗೆ 10-30ಕ್ಕೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಭರತನಾಟ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.
ಗುರು. ಡಾ|| ದರ್ಶಿನಿ ಮಂಜುನಾಥ್ ಅವರ ಶಿಷ್ಯೆಯರಾದ ಕು|| ಅದಿತಿ ಸುರೇಶ್, ಕು|| ಬಿ. ಸಮೀಕ್ಷಾ, ಕು|| ಆರ್. ಅಂಕಿತಾ ಮತ್ತು ಕು|| ತನ್ವಿ ಶೆಟ್ಟಿ ಭರತನಾಟ್ಯ ಕಾರ್ಯಕ್ರಮ ನೀಡಲಿದ್ದಾರೆ.
ಈ ಕಾರ್ಯಕ್ರಮದ ಅತಿಥಿಗಳಾಗಿ ಶ್ರೀ ನರಹಳ್ಳಿ ಬಾಲಸುಬ್ರಹ್ಮಣ್ಯ ಶರ್ಮಾ
(ಖ್ಯಾತ ಕನ್ನಡ ಸಾಹಿತಿಗಳು ಹಾಗೂ ವಿಮರ್ಶಕರು), ಶ್ರೀ ಪ್ರಶಾಂತ್ ಮಾರ್ಟಿನ್ ಆಗೇರ (ನಿರ್ದೇಶಕರು,
ಇಮ್ಯಾನ್ಯುಯಲ್ ಸ್ಕೂಲ್ ಆಫ್ ಮ್ಯೂಸಿಕ್) ಹಾಗೂ ಅಭಿಷೇಕ್ ಟಿ.(ಯೋಗ ಗುರುಗಳು, ಅಚ್ಯುತ ಯೋಗ ಸ್ಟುಡಿಯೋ) ಭಾಗವಹಿಸಲಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕಿ ಡಾ|| ದರ್ಶಿನಿ ಮಂಜುನಾಥ್ ತಿಳಿಸಿದ್ದಾರೆ.