ಡೆಲ್ಲಿ ಪಬ್ಲಿಕ್ ಶಾಲೆ, ಉತ್ತರದಲ್ಲಿ ಕ್ರೀಡೋತ್ಸವವನ್ನು ಭವ್ಯವಾಗಿ ಆಚರಿಸಲಾಯಿತು. ಈ ಕ್ರೀಡಾ ದಿನಾಚರಣೆಯು ಉತ್ತರಾಖಂಡದಲ್ಲಿ ನಡೆದ ಅಂತರರಾಷ್ಟ್ರೀಯ ಕ್ರೀಡಾಕೂಟದಿಂದ ಪ್ರೇರಣೆ ಪಡೆದು “ಸಂಕಲ್ಪದಿಂದ ಶಿಖರದವರೆಗೆ” ಎಂಬ ಘೋಷವಾಕ್ಯದೊಂದಿಗೆ ಯಶಸ್ವಿಯಾಗಿ ಪ್ರಾರಂಭವಾಗಿ ವಿದ್ಯಾರ್ಥಿಗಳು ಶಿಸ್ತಿನ ಸಿಪಾಯಿಗಳಂತೆ ಪಥಸಂಚಲನವನ್ನು ನಡೆಸಿದರು.
ಶಾಲೆಯ ಪ್ರಾಂಶುಪಾಲರು ವಿದ್ಯಾರ್ಥಿಗಳಿಗೆ ಕ್ರೀಡಾ ಪ್ರತಿಜ್ಞೆಯನ್ನು ಬೋಧಿಸಿದರು. ಕ್ರೀಡಾ ಜ್ಯೋತಿಯನ್ನು ಹೊತ್ತ ವಿದ್ಯಾರ್ಥಿಗಳು ಕ್ರೀಡಾಜ್ಯೋತಿಯನ್ನು ಬೆಳಗಿಸುವ ಮೂಲಕ ಕ್ರೀಡೋತ್ಸವವನ್ನು ಅಧಿಕೃತವಾಗಿ ಉದ್ಘಾಟಿಸಿ ಕ್ರೀಡೆಯ ಮಹತ್ವವನ್ನು ಉಲ್ಲೇಖಿಸಿ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ಸಂದೇಶ ನೀಡಿದರು. ವಿಭಿನ್ನ ಕ್ರೀಡೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಅಂತರರಾಷ್ಟ್ರೀಯ ಕ್ರೀಡಾಪಟು ಹಾಗೂ ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ಅಭಿಷೇಕ್ ಎನ್. ಶೆಟ್ಟಿ ಮತ್ತು ಶ್ರೀಮತಿ ರೇಣುಕಾ ಕೆ. ಸುಕುಮಾರ್ (IPS ಅಧಿಕಾರಿ)ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕ್ರೀಡೆಯ ಕುರಿತಾಗಿ ಪ್ರೇರಣಾದಾಯಕ ಭಾಷಣ ವಿದ್ಯಾರ್ಥಿಗಳಲ್ಲಿ ಶ್ರಮ ಮತ್ತು ಸಂಕಲ್ಪದ ಮಹತ್ವವನ್ನು ವಿವರಿಸಿ, ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡದ್ದು ಹೊಸ ಉತ್ಸಾಹವನ್ನು ಮೂಡಿಸಿತು.
ಕ್ರೀಡೋತ್ಸವದ ಅಂಗವಾಗಿ ಸುಮಾರು 120ಕ್ಕೂ ಹೆಚ್ಚು ಸ್ಪರ್ಧೆಗಳು ಆಯೋಜಿಸಲ್ಪಟ್ಟಿದ್ದವು. ಜೊತೆಗೆ ವಿವಿಧ ನೃತ್ಯ ಪ್ರದರ್ಶನಗಳು, ಯೋಗ ಪ್ರದರ್ಶನ ಹಾಗೂ ದೇಸಿ ಕ್ರೀಡೆಯಾದ ಮಲ್ಲಕಂಬ ಪ್ರದರ್ಶನವು ಪ್ರೇಕ್ಷಕರ ಮನಸ್ಸನ್ನು ಸೆಳೆಯಿತು. ಒಟ್ಟಾರೆ ಚಾಂಪಿಯನ್‌ಶಿಪ್ ಪ್ರಶಸ್ತಿಯನ್ನು ಜೇಲಂ ತಂಡಕ್ಕೆ ನೀಡಲಾಯಿತು.