ಚಾಮರಾಜನಗರ: ಕಿತ್ತೂರು ರಾಣಿ ಚೆನ್ನಮ್ಮ ಭಾರತದ ಇತಿಹಾಸದಲ್ಲಿ ಕನ್ನಡಿಗರ ವೀರತ್ವದ ಸಂಕೇತ. ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಮಹಾನ್ ಮಹಿಳೆ ಎಂದು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ, ಸಂಸ್ಕೃತಿ ಚಿಂತಕ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂತ್ ಕ್ಲಬ್, ಜೈ ಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜನ್ಮದಿನ ಹಾಗೂ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತ ಭಾರತೀಯ ಇತಿಹಾಸದಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿದೆ ಮಹಿಳೆಯರು ಭಾರತೀಯರ ಆತ್ಮ ಶಕ್ತಿ. ಧೈರ್ಯ, ಸ್ವಾಭಿಮಾನ,ವಿಶ್ವಾಸದ ಸ್ಪೂರ್ತಿಯ ಸಂಕೇತವಾಗಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮ ಇಡೀ ವಿಶ್ವಕ್ಕೆ ಮಾದರಿಯಾದ ಮಹಿಳೆ. ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ತನ್ನ ಸಂಸ್ಥಾನವನ್ನು ಕಾಪಾಡುವ ದಿಕ್ಕಿನಲ್ಲಿ ತ್ಯಾಗ, ಬಲಿದಾನ ಮಾಡಿ ಪ್ರಾಣ ಅರ್ಪಿಸಿಕೊಂಡ ಕಿತ್ತೂರು ರಾಣಿ ಚೆನ್ನಮ್ಮ ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ಸದಾ ಕಾಲ ನೆಲೆಸಿದ್ದಾರೆ .ಕಿತ್ತೂರಿನ ರಾಣಿ ಮಕ್ಕಳಿಗೆ ಹಾಗು ಯುವಕರಿಗೆ ಆದರ್ಶ . ದೇಶಭಕ್ತಿ, ರಾಷ್ಟ್ರ ನಿಷ್ಠೆ, ಸಂಸ್ಕೃತಿ ,ಪರಂಪರೆ ಹಾಗೂ ನನ್ನ ಜನರನ್ನು ಹೇಗೆ ಸಂರಕ್ಷಿಸಬೇಕು ಎಂಬುದಕ್ಕೆ ಕಿತ್ತೂರು ರಾಣಿ ಇತಿಹಾಸದಲ್ಲಿ ಸಾಕ್ಷಿಯಾಗಿದ್ದಾರೆ. ಕಿತ್ತೂರು ರಾಣಿ ಚೆನ್ನಮರ ವಿಜಯೋತ್ಸವದ ಮೂಲಕ ಇತಿಹಾಸ ತಿಳಿಸುವ ಕಾರ್ಯ ನಡೆಯಬೇಕು ಎಂದರು.
ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷರಾದ ಶರಣ್ಯ ಎಸ್ ಋಗ್ವೇದಿ ಕಿತ್ತೂರು ರಾಣಿಯ ಶೌರ್ಯ, ಸಾಹಸ , ದೂರ ದೃಷ್ಟಿ ಸರ್ವರಿಗೂ ಮಾದರಿ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ತೊಂಬತ್ತು ವರ್ಷದ ಹಿರಿಯ ನಾಗರಿಕರಾದ ಸರೋಜಮ್ಮನವರು ಉದ್ಘಾಟಿಸಿ .ಪ್ರತಿ ವರ್ಷ ಜೈಹಿಂದ್ ಕಟ್ಟೆಯಲ್ಲಿ ಕಿತ್ತೂರು ರಾಣಿ ಚೆನ್ನಮರ ಬಗ್ಗೆ ಕಾರ್ಯಕ್ರಮ ಮಾಡುತ್ತಿರುವುದು ಬಹಳ ಸಂತೋಷ. ದೇಶಭಕ್ತರ ಇತಿಹಾಸ ತಿಳಿಸಿ , ಉತ್ತಮ ಸಮಾಜ ನಿರ್ಮಿಸೋಣ. ಸದಾ ಒಳ್ಳೆಯ ಕೆಲಸ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ಕುಸುಮ , ಸಾನಿಕ, ರವಿ, ಶ್ರಾವ್ಯ ಋಗ್ವೇದಿ, ಸ್ಪೂರ್ತಿ, ವರ್ಷಿಣಿ, ಸುಹಾಸ್, ಕುಮಾರ್, ಭಾಗ್ಯ, ಶಾಂತಿ ಇತರರು ಇದ್ದರು.