ಬೆಂಗಳೂರಿನ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಮತ್ತು ಇಂಗ್ಲಂಡ್‌ನ ಜಿಟೆಕ್ (GTEC) ನಡುವೆ ಒಪ್ಪಂದಕ್ಕೆ ಸಹಿ ಆರೋಗ್ಯ, ಶಿಕ್ಷಣ ಮತ್ತು ವೃತ್ತಿಪರ ಅಭಿವೃದ್ಧಿಗೆ ಜಾಗತಿಕ ವೇದಿಕೆ ನಿರ್ಮಿಸಲು ಸಹಭಾಗಿತ್ವ

varthajala
0

 ಬೆಂಗಳೂರು, 16 ಅಕ್ಟೋಬರ್ 2025: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು (RGUHS) ಇಂಗ್ಲೆಂಡ್‌ನ ರೈಟಿಂಗ್ಟನ್, ವಿಗಾನ್ ಮತ್ತು ಲೀ ಟೀಚಿಂಗ್ ಹಾಸ್ಪಿಟಲ್ಸ್ (WWL) ಜಾಗತಿಕ ತರಬೇತಿ ಮತ್ತು ಶಿಕ್ಷಣ ಕೇಂದ್ರ (GTEC) ಜೊತೆಗೆ ಗುರುವಾರ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿತು.

 ಒಪ್ಪಂದವು ಅಂತರಾಷ್ಟ್ರೀಯ ಶೈಕ್ಷಣಿಕ ಸಹಯೋಗದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದ್ದುಆರೋಗ್ಯ ಶಿಕ್ಷಣತರಬೇತಿಸಂಶೋಧನೆ ಮತ್ತು ವೃತ್ತಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಜಾಗತಿಕ ವೇದಿಕೆಯನ್ನು ನಿರ್ಮಿಸುವ ಉದ್ದೇಶವನ್ನು ಹೊಂದಿದೆ ಯೋಜನೆ ಆರ್ಜಿಯುಎಚ್ಎಸ್ ಇಂಗ್ಲೆಂಡ್ ಅಧ್ಯಯನ ಪ್ರವಾಸದ ಸಂದರ್ಭದಲ್ಲಿ ಚರ್ಚಿಸಿ ರೂಪಿತಗೊಂಡಿದ್ದುಮಾನ್ಯ ಕುಲಪತಿಗಳಾದ ಡಾ. ಭಗವಾನ್ ಬಿ.ಸಿ. ಅವರ ನಾಯಕತ್ವದಲ್ಲಿ ಅಲ್ಪಾವಧಿಯಲ್ಲಿಯೇ ಯಶಸ್ವಿಯಾಗಿ ಕಾರ್ಯರೂಪಕ್ಕೆ ಬಂದಿದೆ.



ಈ ಒಪ್ಪಂದದ ಅಡಿಯಲ್ಲಿ ಎರಡೂ ಸಂಸ್ಥೆಗಳು ಈ ಕೆಳಗಿನ ಕಾರ್ಯಕ್ರಮಗಳನ್ನು ನಡೆಸಲಿವೆ:

 ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ವೈದ್ಯರು ಮತ್ತು ಆರೋಗ್ಯ ವೃತ್ತಿಪರರಿಗೆ ಅನುಕೂಲವಾಗುವಂತೆ ಇಂಗ್ಲೆಂಡ್‌ನ ರೈಟಿಂಗ್ಟನ್, ವಿಗಾನ್ ಮತ್ತು ಲೀ ಟೀಚಿಂಗ್ ಹಾಸ್ಪಿಟಲ್ಸ್  ಜಾಗತಿಕ ತರಬೇತಿ ಮತ್ತು ಶಿಕ್ಷಣ ಕೇಂದ್ರ (GTEC) ಸಹಯೋಗದಲ್ಲಿ ರಚನಾತ್ಮಕ ವೃತ್ತಿಪರ ಅನುಭವ ಪಡೆಯಲು ಮತ್ತು ನಂತರ ಭಾರತದ ಆರೋಗ್ಯ ವ್ಯವಸ್ಥೆಗೆ ಕೊಡುಗೆ ನೀಡಲು “EarnLearnReturn and Excel” ಕಾರ್ಯಕ್ರಮ ಸ್ಥಾಪಿಸುವುದು.

 ವೈದ್ಯಕೀಯ, ನರ್ಸಿಂಗ್ ಮತ್ತು ಸಮಗ್ರ ಆರೋಗ್ಯ ವಿಜ್ಞಾನಗಳು ಸೇರಿದಂತೆ ವಿವಿಧ ಕ್ಷೇತ್ರಗಳ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಮತ್ತು ಆರೋಗ್ಯ ವೃತ್ತಿಪರರ ವಿನಿಮಯ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವುದು.
• ಎರಡು ದೇಶಗಳ ನಡುವಿನ ಕ್ಷಮತೆ ಅಭಿವೃದ್ಧಿ, ಸಂಶೋಧನಾ ಸಹಕಾರ ಮತ್ತು ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ಬಲಪಡಿಸುವುದು.

• ನಿರಂತರ ವೈದ್ಯಕೀಯ ಶಿಕ್ಷಣ (CME) ಮತ್ತು ಜೀವನ-ಬೆಂಬಲ ತರಬೇತಿ ಕಾರ್ಯಕ್ರಮಗಳನ್ನು ಇಂಗ್ಲಂಡ್ ಪ್ರಾಧ್ಯಾಪಕರೊಂದಿಗೆ  ಅಭಿವೃದ್ಧಿಗೊಳಿಸುವುದು.

· ಕರ್ನಾಟಕದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಫೆಲೋಶಿಪ್ ಪ್ರೋಗ್ರಾಂನಲ್ಲಿ ಸಂದರ್ಶನ ಅವಕಾಶಗಳನ್ನು ಖಚಿತಪಡಿಸುವುದು

·  ಜಾಗತಿಕ ಕ್ಲಿನಿಕಲ್ ಅನುಭವ ಮತ್ತು ವೃತ್ತಿ ಅಭಿವೃದ್ಧಿಗೆ ಹೊಸ ದಾರಿ ಕಂಡುಕೊಳ್ಳುವುದು

ಈ ಒಪ್ಪಂದವನ್ನು ಎರಡೂ ಸಂಸ್ಥೆಗಳ ಹಿರಿಯ ಪ್ರತಿನಿಧಿಗಳು ಸಹಿ ಮಾಡಿದರು.

 ಸಂದರ್ಭದಲ್ಲಿ ಮಾತನಾಡಿದ ಆರ್ಜಿಯುಎಚ್ಎಸ್ ಮಾನ್ಯ ಕುಲಪತಿ ಡಾಭಗವಾನ್ ಬಿ.ಸಿ.ಜಾಗತಿಕ ಮಟ್ಟದ ಆರೋಗ್ಯ ವೃತ್ತಿಪರರನ್ನು ಬೆಳೆಸುವ ನಮ್ಮ ದೃಷ್ಟಿಕೋನದತ್ತ ಇದೊಂದು ಮಹತ್ವದ ಹೆಜ್ಜೆಯಾಗಿದೆಇಂತಹ ಅಂತರರಾಷ್ಟ್ರೀಯ ಸಹಭಾಗಿತ್ವಗಳು ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವುದರ ಜೊತೆಗೆವಿಶ್ವದಾದ್ಯಂತ ಆರೋಗ್ಯ ಸೇವೆಯ ಗುಣಮಟ್ಟವನ್ನು ಸಹ ಸುಧಾರಿಸಲು ಸಹಕಾರಿಯಾಗುತ್ತವೆ ಎಂದರು.

 

ಇಂತಹ ಒಪ್ಪಂದಗಳು ಕೇವಲ ದಾಖಲೆಗಳಲ್ಲಿಯೇ ಉಳಿಯಬಾರದು. ಆದಷ್ಟು ಬೇಗ ಇವುಗಳನ್ನು ಕಾರ್ಯರೂಪಕ್ಕೆ ತರುವ ಮೂಲಕ ನಮ್ಮ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ಪ್ರಾಯೋಗಿಕ ಜ್ಞಾನ ಮತ್ತು ಶೈಕ್ಷಣಿಕ ಅನುಭವ ದೊರಕುವಂತೆ ಮಾಡಲು ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಉತ್ಸುಕವಾಗಿದೆ ಎಂದರು.

 

ಇಂಗ್ಲಂಡ್ ನ GTEC-WWL ಟೀಚಿಂಗ್ ಹಾಸ್ಪಿಟಲ್ಸ್ NHS ಫೌಂಡೇಶನ್ ಸಂಸ್ಥೆಯ ಜಾಗತಿಕ ಕಾರ್ಯಕ್ರಮಗಳ ಮುಖ್ಯಸ್ಥ ಪ್ರೊ. ಮಾದಾಪುರ ಶಶಿಧರ ಮಾತನಾಡಿ, ಇದು ಎರಡೂ ದೇಶಗಳ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಬಹಳ ಮಹತ್ವದ ಘಟ್ಟ ಎಂದರು. ಎರಡು ದೇಶಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು, ಎರಡೂ ದೇಶಗಳ ವೈದ್ಯಕೀಯ ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಹಾಗೂ ಅಧ್ಯಾಪಕರಿಗೆ ಜಾಗತಿಕ ಕಲಿಕಾ ಅವಕಾಶಗಳನ್ನು, ಜಾಗತಿಕ ಉದ್ಯೋಗ ಹಾಗೂ ಸಂಶೋಧನಾ ಅವಕಾಶಗಳನ್ನು ಒದಗಿಸುವುದು ಬಹಳ ಪ್ರಮುಖ ಹೆಜ್ಜೆ. ಅದಕ್ಕೆ ಇಂದು ಇಲ್ಲಿ ಮುನ್ನುಡಿ ಬರೆಯಲಾಗಿದೆ ಎಂದರು.

 

ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಡಾ. ರಿಯಾಜ್ ಬಾಷಾ ಎಸ್. ಒಪ್ಪಂದ ಪತ್ರವನ್ನು ಓದಿದರು.


GTEC-WWL ಟೀಚಿಂಗ್ ಹಾಸ್ಪಿಟಲ್ಸ್ NHS ಫೌಂಡೇಶನ್ ಟ್ರಸ್ಟ್ ಕ್ಲಿನಿಕಲ್ ನಿರ್ದೇಶಕ ಪ್ರೊ. ರಾಜ್ ಮುರಳಿ, ವೈದ್ಯಕೀಯ ಉಪ ನಿರ್ದೇಶಕ ಬಿ. ನಿರ್ಮಲ್ ಕುಮಾರ್,  ಮ್ಯಾನೇಜರ್ ರಿಚೇಲ್ ಲೀದರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.


Post a Comment

0Comments

Post a Comment (0)