ಚ.ಹ ರಘುನಾಥ ಅವರ ‘ಇಳಿಸಲಾಗದ ಶಿಲುಬೆ’ ಅಂಕಣ ಬರಹ ಸಂಕಲನಕ್ಕೆ೨೦೨೫ನೇ ಸಾಲಿನ ‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ’

varthajala
0

 ಕನ್ನಡನಾಡು, ನುಡಿ, ಸಂಸ್ಕೃತಿಗಳ ಜಾಗೃತಿ ಕುರಿತ ಪುಸ್ತಕಕ್ಕೆ  ಕನ್ನಡ ಗೆಳೆಯರ ಬಳಗವು ಪ್ರತಿ ವರ್ಷ ‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನಕ್ಕೆ ನೀಡುತ್ತದೆ.  2025ನೆಯ ಸಾಲಿನ ‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ’ಕ್ಕೆ ಚ.ಹ ರಘುನಾಥ ಅವರ ‘ಇಳಿಸಲಾಗದ ಶಿಲುಬೆ ಅಂಕಣ ಬರಹ ಆಯ್ಕೆ ಆಗಿದೆ.

ಈ ಬಹುಮಾನವು. ರೂ 5000/- ನಗದು, ಫಲ ತಾಂಬೂಲದೊAದಿಗೆ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಸತ್ಯೇಶ್ ಎನ್. ಬೆಳ್ಳೂರ್ ಅವರ ‘ಕನ್ನಡೋತ್ಸವ ನೃತ್ಯ ನಾಟಕಕ್ಕೆ ಸಮಾಧಾನಕರ ಬಹುಮಾನ ದೊರೆತಿದೆ. ಸಮಾಧಾನಕರ ಬಹುಮಾನವು ರೂ 2000/- ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.  ಎಸ್. ವಿಜಯಗುರುರಾಜ ಅವರ ‘ಪ್ರಬಂಧ ರತ್ನಗಳು ಲೇಖನ ಸಂಕಲನಕ್ಕೆ ಮೆಚ್ಚುಗೆ ಬಹುಮಾನ ನೀಡಲಾಗುತ್ತಿದೆ. ಮೆಚ್ಚುಗೆ ಬಹುಮಾನವು ರೂ. 2000/- ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ.

09-ಡಿಸೆಂಬರ್-2025ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ಕನ್ನಡ ಗೆಳೆಯರ ಬಳಗದ ವಾರ್ಷಿಕ ಪ್ರಶಸ್ತಿಗಳ ಪ್ರದಾನ, ‘ಉತ್ತಮ  ಕನ್ನಡ ಮಾಧ್ಯಮ ಶಾಲೆ, ಬಹುಮಾನ, ಕನ್ನಡದಲ್ಲಿ ಹೆಚ್ಚು ಅಂಕ ಪಡೆದಿರುವ ಕನ್ನಡೇರ ವಿದ್ಯಾರ್ಥಿಗಳಿಗೆ ಸನ್ಮಾನ,   ಸಮಾರಂಭ ಇದೆ. ಅದೇ ಸಮಾರಂಬದಲ್ಲಿ ‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನವನ್ನೂ ಕೊಡಮಾಡಲಾಗುವುದು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಡಾ. ಎಲ್. ಹನುಮಂತಯ್ಯ ಅವರುಗಳು ಪ್ರಶಸ್ತಿ ಪ್ರದಾನ ಮಾಡಲಿದ್ದು. ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ಅದ್ಯಕ್ಷತೆವಹಿಸಲಿದ್ದಾರೆ.                                


Post a Comment

0Comments

Post a Comment (0)