ರಂಗತಪಸ್ವಿ ಪಿ.ಬಿ.ಧುತ್ತರಗಿ ಕನ್ನಡದ ಅಧ್ಯಯನಶೀಲ ನಾಟಕಕಾರ - ಎಸ್.ಜಿ.ನಂಜಯ್ಯನಮಠ

varthajala
0

 ಬೆಂಗಳೂರು, ನವೆಂಬರ್ 18: ಕರ್ನಾಟಕದ ವೃತ್ತಿ ರಂಗಭೂಮಿಗೆ ಹಲವಾರು ಅಮೂಲ್ಯ ಕೊಡುಗೆಗಳನ್ನು ನೀಡಿರುವ ಪಿ.ಬಿ.ಧುತ್ತರಗಿ ಅವರನ್ನು ನಾಡು ಸದಾ ಸ್ಮರಿಸಬೇಕು.ನಿರಂತರ ಅಧ್ಯಯನ ಮತ್ತು ತಪಸ್ಸಿನ ಮೂಲಕ ಅವರು ರಚಿಸಿದ ಅನೇಕ ನಾಟಕಗಳು ಜನಪ್ರಿಯವಾಗಿ ನೂರಾರು ಕಲಾವಿದರನ್ನು ಪೋಷಿಸುವುದರ ಜೊತೆಗೆ,ಕನ್ನಡ ಕಲಾಲೋಕವನ್ನು ಶ್ರೀಮಂತಗೊಳಿಸಿದವರು ಎಂದು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.

ಕೊಪ್ಪಳ ಜಿಲ್ಲೆಯ ಹನುಮಸಾಗರದ ನಿಸರ್ಗ ಸಂಗೀತ ವಿದ್ಯಾಲಯ ಹಾಗೂ ರಂಗ ಕಲಾವಿದರ ಸಂಘವು ಹೆಸರಾಂತ ನಾಟಕಕಾರ ದಿ.ಪಿ.ಬಿ.ಧುತ್ತರಗಿ ಹಾಗೂ ರಂಗನಟಿ ದಿ.ಸರೋಜಮ್ಮ ಧುತ್ತರಗಿ ಅವರ ಸ್ಮರಣಾರ್ಥ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಪಿ.ಬಿ.ಧುತ್ತರಗಿ ವಿರಚಿತ "ಸಂಪತ್ತಿಗೆ ಸವಾಲ್ " ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಬಾಗಲಕೋಟ ಜಿಲ್ಲೆ ಹುನಗುಂದ ತಾಲೂಕಿನ ಸೂಳಿಭಾವಿ ಗ್ರಾಮದ ಪಿ.ಬಿ.ಧುತ್ತರಗಿ ಅವರು ನಾಟಕ ರಚಿಸುವಾಗ ,ಸಂಪೂರ್ಣವಾಗಿ ಅವುಗಳನ್ನು ನಿರಂತರವಾಗಿ ಅಧ್ಯಯನ ಮಾಡುತ್ತಿದ್ದರು. ಛತ್ರಪತಿ ಶಿವಾಜಿ,ಕಿತ್ತೂರು ಚೆನ್ನಮ್ಮ,ವೀರ ಸಿಂಧೂರ ಲಕ್ಷ್ಮಣ, ಸುರಪುರದ ವೆಂಕಟಪ್ಪನಾಯಕ,ಚಿತ್ರದಯರ್ಗದ ಮದಕರಿನಾಯಕ  ಮೊದಲಾದ ಐತಿಹಾಸಿಕ ನಾಟಕಗಳು ಹಾಗೂ ಅವರ ಪ್ರಸಿದ್ಧ ಶ್ರೀದೇವಿ ಮಹಾತ್ಮೆಯಂತಹ ಪೌರಾಣಿಕ ನಾಟಕಗಳನ್ನು ಬಹಳ ಶ್ರದ್ಧೆಯಿಂದ ಅಧ್ಯಯನ ಮಾಡಿ ,ರಂಗಸಜ್ಜಿಕೆಯಲ್ಲಿ ಹರಿದ ಹಾಸಿಗೆಯಲ್ಲಿ ಬೀಡಿ ಸೇದುತ್ತ ತಪಸ್ಸಿನಂತೆ ಧ್ಯಾನಸ್ಥ ಸ್ಥಿತಿ ಸಾಧಿಸಿ ಬರೆಯುತ್ತಿದ್ದುದನ್ನು ಸ್ವತಃ ಕಂಡಿದ್ದೇನೆ.ನೂರಾರು ನಾಟಕಗಳನ್ನು ಅವರು ರಂಗಭೂಮಿಗೆ ಕೊಟ್ಟಿದ್ದರೂ ಕೂಡ ಅವರಿಗೆ ಬಡತನ ತಪ್ಪಲಿಲ್ಲ.ಇಂದು ಪ್ರದರ್ಶಿಸಲ್ಪಡುತ್ತಿರುವ ಸಂಪತ್ತಿಗೆ ಸವಾಲ್ ಕತೆಯು ಸಿನೆಮಾ ಆಗಿ ಅಂದಿನ ಕಾಲದಲ್ಲಿ ದೊಡ್ಡ ಲಾಭ ಗಳಿಸಿತು. ಆದರೆ ಕತೆಯ ಸಿನೆಮಾ ಹಕ್ಕುಗಳನ್ನು ಕಡಿಮೆ ದರಕ್ಕೆ ಪಿ.ಬಿ.ಧುತ್ತರಗಿ ಅವರು ಅದಾಗಲೇ ಮಾರಾಟ ಮಾಡಿದ್ದರಿಂದ ಅದರ ಲಾಭವೂ ಕೂಡ ಅವರಿಗೆ ಸಿಗಲಿಲ್ಲ ಎಂಬುದನ್ನು ನಂಜಯ್ಯನಮಠ ಅವರು ಸ್ಮರಿಸಿದರು.
ನಾಟಕ ಅಕಾಡೆಮಿ ಮಾಜಿ ಅಧ್ಯಕ್ಷ ಶ್ರೀನಿವಾಸ ಜಿ.ಕಪ್ಪಣ್ಣ ಮಾತನಾಡಿ,ಪಿ.ಬಿ.ಧುತ್ತರಗಿ ,ಕಂದಗಲ್ ಹನುಮಂತರಾಯ ಅವರಂತಹ ಕನ್ನಡದ ಹೆಸರಾಂತ ನಾಟಕಕಾರರು ತಮ್ಮ ಕೃತಿಗಳಿಂದಲೇ ಜನಮಾನಸದಲ್ಲಿ ಇಂದಿಗೂ ಉಳಿದಿದ್ದಾರೆ ಎಂದರು. 
ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಹಲವು ನಾಟಕ ಕಂಪನಿಗಳು ನಷ್ಟದಲ್ಲಿದ್ದಾಗ ಪಿ.ಬಿ.ಧುತ್ತರಗಿ ಅವರು ರಚಿಸಿದ ನಾಟಕಗಳನ್ನು ಪ್ರದರ್ಶನಕ್ಕೆ ಆಯ್ದುಕೊಂಡು ಪುನರುಜ್ಜೀವನ ಕಂಡುಕೊಳ್ಳುತ್ತಿದ್ದವು, ಆದರೆ ಧುತ್ತರಗಿ ಅವರಿಗೆ ಸಿಗಬೇಕಾದಷ್ಟು  ಮನ್ನಣೆ ಸಿಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.ಮುಂಬರುವ ವರ್ಷ ನಾಟಕ ಅಕಾಡೆಮಿ ಮೂಲಕ ಮೂರು ದಿನಗಳ ಕಾಲ ಪಿ.ಬಿ.ಧುತ್ತರಗಿ ನಾಟಕೋತ್ಸವ ಆಯೋಜಿಸಲಾಗುವುದು ಎಂದರು. 
ಅ.ಭಾ.ಶಸಾಪ ಅಧ್ಯಕ್ಷ ಡಾ.ಸಿ.ಸೋಮಶೇಖರ್,ವಿಭಾಗೀಯ ಕಾನೂನು ಅಧಿಕಾರಿ ಬಿ.ಎಸ್.ಪಾಟೀಲ,ಕುಷ್ಟಗಿ ತಾಲ್ಲೂಕು ಬಿಜೆಪಿ ಅಧ್ಯಕ್ಷ ಬಸವರಾಜ ಹಳ್ಳೂರ ಮಾತನಾಡಿದರು.
ಮಾಜಿಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಪಾಟೀಲ ಬಯ್ಯಾಪುರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹೇಂದ್ರ ಮನೋಜ್ ಜೈನ್,ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ,ಝೀ ನ್ಯೂಸ್ ಸಂಪಾದಕ ರವಿ ಗೌಡರ್,ಯುನಿವರ್ಸಲ್ಉಪೇಂದ್ರ ಶೆಟ್ಟಿ,ಸಂಗಯ್ಯ ವಸ್ತ್ರದ,ಹಿರಿಯ ಪತ್ರಕರ್ತರಾದ ಬಿ.ವಿ.ಮಲ್ಲಿಕಾರ್ಜುನಯ್ಯ, ಸೋಮರಡ್ಡಿ ಅಳವಂಡಿ,ಬಸವರಾಜ ಬಿನ್ನಾಳ,ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಪಸಭಾಪತಿ ಡಾ.ಶ್ರೀನಿವಾಸ ಹ್ಯಾಟಿ,ಕೊಪ್ಪಳ ಜಿಲ್ಲಾ ಎಸ್‌ ಸಿ ,ಎಸ್‌ಟಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಹನುಮೇಶ್ ಕಡೇಮನಿ,ಹನುಮಸಾಗರ ಗ್ರಾ.ಪಂ.ಅಧ್ಯಕ್ಷ ರುದ್ರಗೌಡ ಗೌಡಪ್ಪನವರ್,ವಿಶ್ವನಾಥ ಕುನ್ನೂರ,ಸೂಚಪ್ಪ ದೇವರಮನಿ, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಲ್ಲಯ್ಯ ಕೋಮಾರಿ ಪ್ರಾಸ್ತಾವಿಕ ನುಡಿಗನ್ನಾಡಿದರು.,ನಿಸರ್ಗ ಎಂ‌.ಕೋಮಾರಿ ಭರತನಾಟ್ಯ ಪ್ರದರ್ಶಿಸಿದರು.

ಸಂಪತ್ತಿಗೆ ಸವಾಲ್ ನಾಟಕ:
ಸಿನೆಮಾ ಆಗಿ ಜನಪ್ರಿಯಗೊಂಡು ಯಶಸ್ವಿಯಾದ ಸಂಪತ್ತಿಗೆ ಸವಾಲ್ ಮೂಲ ನಾಟಕ ಕೃತಿಯ‌ನ್ನು , ವಿರೂಪಾಕ್ಷಪ್ಪ ಧುತ್ತರಗಿ ಹಾಗೂ ಬಸವರಾಜ ಬಿನ್ನಾಳ ನಿರ್ದೇಶನದಲ್ಲಿ ರಂಗಭೂಮಿಯ ಮೇಲೆ ಕೊಪ್ಪಳದ ಪತ್ರಕರ್ತರು ಅಭಿನಯಿಸಿದರು.

ಪಾತ್ರವರ್ಗ:
ಭದ್ರಿ- ಜಗದೀಶ್ ಚೆಟ್ಟಿ,ಮರಿಯಪ್ಪ - ಶರಣಪ್ಪ ಬಾಚಲಾಪುರ,ವೆಂಕಪ್ಪ- ಬಸವರಾಜ ಬಿನ್ನಾಳ,ಕೆಂಚಪ್ಪ- ಮಹೇಶಗೌಡ ಭಾನಾಪುರ,ಸಂಗವ್ವ- ಸುನಂದಾ ಗೋಕಾಕ,ಲಕ್ಚ್ಮೀ- ರೋಜಾ ವಿ.ಚಿಮ್ಮಲ್,ಪಾರ್ವತಿ-ಹೇಮಾ ಗದಗ,ಸಿದ್ಧ-ಪರಮೇಶರಡ್ಡಿ ಹ್ಯಾಟಿ,ಭೈರ-ನಾಭಿರಾಜ ದಸ್ತೇನವರ್,ಫೌಜದಾರ್-ಬಸವರಡ್ಡಿ ಬೋಳರಡ್ಡಿ,ಗುಂಡ-ವೀರಣ್ಣ ಹಡಪದ ಸೇರಿದಂತೆ ಹಲವು ಕಲಾವಿದರು ಮನೋಜ್ಞ ಅಭಿನಯ ನೀಡಿದರು.
ಕೇದಾರನಾಥ,ಕ್ಷೀರಲಿಂಗ ಪುಲಾರಿ,ಶಂಕರ್ ಬಸೂದೆ ,ವಿರೇಶ್ ಚಿಮ್ಮಲ್ ಕಲ್ಲಗೋನಾಳ ಅವರು ವಾದ್ಯವೃಂದ ನಿರ್ವಹಿಸಿದರು.

Post a Comment

0Comments

Post a Comment (0)