ಕ್ರೀಡೆಗಳಲ್ಲಿ ಸೋಲು ಗೆಲುವು ಸಾಮಾನ್ಯ ಭಾಗವಹಿಸುವಿಕೆ ಮುಖ್ಯ: ವೀರಣ್ಣ ಅಭಿಮತ

varthajala
0

 ಬೆಂಗಳೂರು: ಆಟಗಳಲ್ಲಿ ಸೋಲು ಗೆಲುವು ಎರಡು ಇರುವುದರಿಂದ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಬಹಳ ಮುಖ್ಯವಾಗಿದ್ದು ಅವರ ಜೀವನಪೂರ್ತಿ ನೆನಪಿನಲ್ಲಿ ಉಳಿಯುತ್ತದೆ ಎಂದುಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳು ಪ್ರೊ. ಕೆ ಸಿ ವೀರಣ್ಣ ರವರು  ಕಿವಿ ಮಾತು ತಿಳಿಸಿದರು.

ಕರ್ನಾಟಕ ಪಶು ವೈದ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್ ಮಹಾವಿದ್ಯಾಲಯ ಕ್ರೀಡಾ ಕೂಟ 2025 ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಕ್ರೀಡಾ ಕೂಟದಲ್ಲಿ ವಿಜೇತರಾದ ಕ್ರೀಡಾಳುಗಳಿಗೆ ಬಹುಮಾನ ನೀಡಿ ಮಾತನಾಡಿ, ಮಕ್ಕಳು ಓದಿನ ಜೊತೆ ಆಟಪಾಟಗಳಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು. ದೈಹಿಕ ಶ್ರಮ ವಹಿಸಿದಾಗ ಆರೋಗ್ಯ ಸುಧಾರಿಸುತ್ತದೆ.  ಹೆಚ್ಚು ಜ್ಞಾನಾರ್ಜನೆ ಆಗುತ್ತದೆ. ಓದಿನ ಕಡೆ ಹೆಚ್ಚು ಆಸಕ್ತಿ ಉಂಟಾಗುತ್ತದೆ ಎಂದರು. 


ಕ್ರೀಡೆ ಸರ್ವ ರೋಗಕ್ಕೂ ಮದ್ದು ಎನ್ನುವಂತೆ ಆಗಿದೆ. ಇದರಿಂದ ಆರೋಗ್ಯ ವೃದ್ದಿ ಜೊತೆ ಮಾನಸಿಕ ದೈಹಿಕವಾಗಿ ಸದೃಡರಾಗಲು ಸಹಕಾರಿಯಾಗುತ್ತದೆ. ಹಾಗಾಗಿ ಪ್ರತಿ ವಿವಿಯಲ್ಲಿ ದೈಹಿಕ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಉತ್ತಮ ಸಾಧನೆ ಮಾಡಿದರೆ ಉದ್ಯೊಗದಲ್ಲಿ ಮೀಸಲಾತಿ ದೊರೆಯುತ್ತದೆ. ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಗೆ ಶ್ರಮಿಸಲಾಗುತ್ತದೆ.  ಪ್ರಸ್ತುತ ದಿನಗಳಲ್ಲಿ ಕ್ರೀಡೆ ಅವಶ್ಯಕವಾಗಿ ಬೇಕಾಗಿದೆ. ಇಲ್ಲಿ ಗೆದ್ಸಿರುವ ಮಕ್ಕಳನ್ನು ಆಯ್ಕೆ ಮಾಡಿ ರಾಷ್ರ ಮಟ್ಟದ ಮುಂಬರುವ ಅಂತರ ವಿಶ್ವವಿದ್ಯಾಲಯದ ಕ್ರೀಡಾಕೂಟದಲ್ಲಿ ಭಾಗವಹಿಸಿ ಹೆಚ್ಚಿನ ಸಂಖ್ಯೆಯಲ್ಲಿ ವಿಜೇತರಾಗಬೇಕು ಎಂದು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಶುವೈದ್ಯಕೀಯ ಮಹಾವಿದ್ಯಾಲಯ ಬೆಂಗಳೂರಿನ ಡೀನ್ ರವರಾದ ಡಾ ಎನ್. ಕೆ. ಶಿವಕುಮಾರ್ ಗೌಡರವರು ಮಾತನಾಡಿ, ಹಲವಾರು ಕಾಲೇಜುಗಳಲ್ಲಿ ಉತ್ತಮ ಕ್ರೀಡಾಂಗಣದ ವ್ಯವಸ್ಥೆ ಇಲ್ಲದಿದ್ದರೂ ಕೂಡ ನಗರದ ಕ್ರೀಡಾಂಗಣದಲ್ಲಿ ಹೋಗಿ ಹೆಚ್ಚಿನ ಪ್ರಯತ್ನಪಟ್ಟು ಅಭ್ಯಾಸ ಮಾಡಿದ್ದಾರೆ ಎಂದು ಶ್ಲಾಗಿಸಿದರು. ಅವರು ಉತ್ತಮ ವಸತಿ ಹಾಗೂ ಆಹಾರದ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಂತ ಕ್ರೀಡಾ ಸಂಯೋಜಕರಾದ ಡಾ. ಹೆಚ್ ಸಿ ಇಂದ್ರೇಶ್, ಡಾಕ್ಟರ್ ವಿಲ್ವೆಡ್ ರೂಬನ್ ಹಾಗೂ ಇತರೆ ಸಂಯೋಜನಾಧಿಕಾರಿಗಳ ಪರಿಶ್ರಮವನ್ನು ಕೊಂಡಾಡಿದರು. ಅಂತರ್ ಕಾಲೇಜು ಕ್ರೀಡಾ ಕೂಟದಲ್ಲಿ ಸುಮಾರು 500 ರಿಂದ 700 ಜನರನ್ನು ನಿರ್ವಹಿಸಿದ ಎಲ್ಲಾ ಸಂಯೋಜನಾಧಿಕಾರಿಗಳಿಗೆ ಇದೊಂದು ಕ್ರೀಡಾ ಮೇಳವನ್ನು ಕೃಷಿ ಮೇಳದಂತೆ ಆಯೋಜಿಸಿದ್ದನ್ನು ಹೊಗಳಿದರು.


ಅಂತರ್ ಕಾಲೇಜು ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಪಶು ವೈದ್ಯಕೀಯ ಮಹಾವಿದ್ಯಾಲಯ ಹಾಸನ ತಂಡ ಹಾಗು ರನ್ನರ್ ಅಪ್‌ಗಳು ಶಿವಮೊಗ್ಗ ಪಶು ವೈದ್ಯಕೀಯ ತಂಡವು ಗೆದ್ದುಕೊಂಡಿತ್ತು. ವಿವಿಧ ಆಟಗಳ ಚಾಂಪಿಯನ್ ತಂಡದ ಪ್ರಶಸ್ತಿಯನ್ನು ಪಶು ವೈದ್ಯಕೀಯ ಮಹಾವಿದ್ಯಾಲಯ ಹೆಬ್ಬಾಳ ಗೆದ್ದುಕೊಂಡಿದೆ ಹಾಗೂ ದ್ವಿತೀಯ ಸ್ಥಾನದಲ್ಲಿ ಪಶು ವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗ ತೃಪ್ತಿಪಟ್ಟುಕೊಂಡಿದೆ.


ಸ್ನಾತಕತರ ಶಿಕ್ಷಣ ನಿರ್ದೇಶಕರಾದ ಡಾ ಡಿ ದಿಲೀಪ್ ಕುಮಾರ್ ರವರು ಪಶು ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗದ ಡೀನ್ ಆದ ಡಾ. ಪ್ರಕಾಶ್ ನೆಡೂರು, ಹೈನುಗಾರಿಕೆ ಮಹಾವಿದ್ಯಾಲಯದ ಡೀನ್ ಆದ ಡಾ. ಹೆಚ್ ಅರುಣ್ ಕುಮಾರ್, ಹೈನುಗಾರಿಕೆ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಎ ಸಚಿಂದ್ರ ಬಾಬು.



 ಈ ಕಾರ್ಯಕ್ರಮದ ಸಂಘಟನಾ ಕಾರ್ಯದರ್ಶಿಗಳಾದ ಡಾ. ಹೆಚ್‌ಸಿ ಅಂದ್ರೆ ಸಹ ಸಂಘಟನಾ ಕಾರ್ಯದರ್ಶಿಗಳಾದ ಡಾ. ವಿವೇಕ್ ಎಂ. ಪಾಟೀಲ್, ಡಾ. ವಿಲೈಡ್ ರೂಬನ್, ವೈದ್ಯರು, ದೈಹಿಕ ಶಿಕ್ಷಕರುಗಳಾದ ಡಾ. ಸುಬ್ರಾಯ ಪ್ರಭು, ಡಾ. ಚಂದ್ರ ಚೂಡಾ, ಮನೋಜ್ ಕುಮಾ‌ರ್,ಇಲಾಖೆಯ ವ್ಯವಸ್ಥಾಪಕ ಮಂಡಳಿ ಸದಸ್ಯರುಗಳಾದ ಡಾ ವಿ ಎಸ್ ವೆಂಕಟಚಲ,ವ್ಯವಸ್ಥಾಪಕ ಮಂಡಳಿ ಸದಸ್ಯರುಗಳಾದ ಶ್ರೀ ಸಂಗಮೇಶ್ ಡಿ,ಕುಲಸಚಿವರಾದ ಡಾ.ಪೀಟಿ ರಮೇಶ್,

 ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಹಾಗು ವಿದ್ಯಾರ್ಥಿ ವೃಂದದವರು ಉಪಸ್ಥಿತರಿದ್ದರು.


Post a Comment

0Comments

Post a Comment (0)