ದೇಶದ ಶಿಕ್ಷಣ ವ್ಯವಸ್ಥೆಗೆ ಭದ್ರ ಅಡಿಪಾಯ ಹಾಕಿಕೊಟ್ಟವರು ಮೌಲಾನಾ ಅಬುಲ್ ಕಲಾಂ

varthajala
0

 ಬೆಂಗಳೂರು, ನವೆಂಬರ್ 11 (ಕರ್ನಾಟಕ ವಾರ್ತೆ): ಸ್ವಾತಂತ್ರ್ಯಾ ನಂತರ ದೇಶದಲ್ಲಿ ಶಿಕ್ಷಣ ಪರಿಸ್ಥಿತಿ ಧಾರುಣವಾಗಿದ್ದ ಸಮಯದಲ್ಲಿ ಮೊದಲ ಹತ್ತು ವರ್ಷ ಶಿಕ್ಷಣ ಖಾತೆ ಸಚಿವರಾಗಿ ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ದೇಶದ ಶಿಕ್ಷಣ ವ್ಯವಸ್ಥೆಗೆ ಭದ್ರ ಅಡಿಪಾಯನ್ನು ಹಾಕಿಕೊಡುವ ಮೂಲಕ ಬಹುದೊಡ್ಡ ಸಾಧನೆ ಮಾಡಿದ್ದಾರೆ ಎಂದು ಅಂಕಣಕಾರರು ಮತ್ತು ಅಜೀಂ ಪ್ರೇಮ್ ಜಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ. ಎ. ನಾರಾಯಣ ಅವರು ಅಭಿಪ್ರಾಯಪಟ್ಟರು.


ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಇಂದು ದೇವರಾಜು ಅರಸು ಭವನದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಮತ್ತು ಮೌಲಾನಾ ಅಬುಲ್ ಕಲಾಂ ಆಜಾದ್ ಅವರ 137 ನೇ ಜನ್ಮ ದಿನಾಚರಣೆಯ ಸಮಾರಂಭದಲ್ಲಿ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಕುರಿತು ಮಾತನಾಡಿದ ಅವರು, ಗಾಂಧೀಜಿ ಅವರಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ಹೆಗಲು ಕೊಟ್ಟವರಲ್ಲಿ ನೆಹರು, ಪಟೇಲ್ ಮತ್ತು ಅಬುಲ್ ಕಲಾಂ. ಈ ನಾಲ್ಕು ಜನರು ಸ್ವಾತಂತ್ರ್ಯ ಹೋರಟವೆಂಬ ರಥಕ್ಕೆ ನಾಲ್ಕು ಚಕ್ರದಂತೆ ಕೆಲಸ ಮಾಡಿದ್ದಾರೆ.

ಆಜಾದ್ ಅವರು ಎಲ್ಲಾ ಜಾತಿ, ಧರ್ಮದವರು ಸಹಬಾಳ್ವೆಯಿಂದ ಒಂದೇ ದೇಶದಲ್ಲಿ ಇರಬೇಕು ಎಂದು ಬಯಸಿದರೆ, ಜಿನ್ನಾ ಅವರು ಧರ್ಮದ ಆಧಾರದ ಮೇಲೆ ಮುಸ್ಲಿಂರಿಗೆ ಪ್ರತ್ಯೇಕ ದೇಶ ಬೇಕು ಎಂದು ಪಟ್ಟು ಹಿಡಿಯುತ್ತಾರೆ. ಇದನ್ನು ವಿರೋಧಿಸುವ ಆಜಾದ್ ಅವರು ದೇಶ ವಿಭಜನೆಯಾದರೆ, ಎರಡೂ ದೇಶಗಳು ಶಾಶ್ವತವಾಗಿ ಮೂರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳುತ್ತಾರೆ. ಮೊದಲನೆ ಸಮಸ್ಯೆ ಎರಡೂ ದೇಶದ ಜನರೂ ಅಸುರಕ್ಷಿತ ಭಾವನ್ನು ಅನುಭವಿಸುತ್ತಾರೆ, ಎರಡನೆಯದಾಗಿ ಪರಸ್ಪರವಾಗಿ ವೈರತ್ವವನ್ನು ಶಾಶ್ವತವಾಗಿ ಬೆಳೆಸಿಕೊಳ್ಳುತ್ತಾರೆ ಹಾಗೂ ಮೂರನೆಯದಾಗಿ ಏμÁ್ಯ ಖಂಡದಲ್ಲಿ ಕಪ್ಪು ಚುಕ್ಕೆಯಾಗಿ ಯಾವಾಗಲೂ ಎರಡೂ ದೇಶಗಳ ನಡುಬೆ ಸಂಘರ್ಷ ಏರ್ಪಾಡಾಗುತ್ತಿರುತ್ತದೆ ಎಂದು ಸಲಹೆ ನೀಡಿದ್ದರು ಎಂಬುದನ್ನು ನಾರಾಯಣ ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಅಬುಲ್ ಕಲಾಂ ಅವರು ಕೇವಲ 17 ನೇ ವಯಸ್ಸಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡರು. ಬ್ರಿಟಿμï ಸರ್ಕಾರ ಭಾರತದಿಂದ ಬಂಗಾಳ ದೇಶವನ್ನು ವಿಭಜನೆ ಮಾಡಲು ಹೊರಟಾಗ ಎಲ್ಲಾ ಜನಾಂಗದವರು ಒಂದಾಗಿ ಅಣ್ಣ ತಮ್ಮಂದಿರಂತೆ ಇದೇ ದೇಶದಲ್ಲಿ ಒಟ್ಟಾಗಿ ಬದುಕುತ್ತೇವೆ ಎಂದು ಹೋರಾಟ ನಡೆಸಿದವರು. ಬ್ರಿಟಿಷರ ವಿರುದ್ಧ ಹೋರಾಡಲು ಅಲ್ ಇಲಾಲ್ ಎಂಬ ಪತ್ರಿಕೆಯನ್ನು ಪ್ರಾರಂಭಿಸಿ, ಅದರಲ್ಲಿ ಬ್ರಿಟಿμï ಸಾಮ್ರಾಜ್ಯದ ವಿರುದ್ಧ ಬರೆಯಲಾರಂಭಿಸುತ್ತಾರೆ. ಅವರ ತೀಕ್ಷ್ಣ ಬರವಣೆಗೆಗೆ ಹೆದರಿದ ಅಂದಿನ ವೈಸ್ ರಾಯ್ ಅವರು ಪತ್ರಿಕೆಯನ್ನು ಮುಚ್ಚಿಸುತ್ತಾರೆ. ಆದರೂ ಎದೆಗುಂದದ ಆಜಾದ್ ಅವರು ಮತ್ತೊಂದು ಪತ್ರಿಕೆಯನ್ನು ಪ್ರಾರಂಭಿಸಿ, ಬ್ರಿಟಿಷರ ವಿರುದ್ದ ಮತ್ತೆ ಬರೆಯಲಾರಂಭಿಸುತ್ತಾರೆ. ಆಗ ಬ್ರಿಟಿಷರು ಅವರನ್ನು ಸೆರೆ ವಾಸದಲ್ಲಿಡುತ್ತಾರೆ. ಆದರೆ ಸೆರೆ ಮನೆಯಲ್ಲಿಯೂ ಕೂಡ ಆಜಾದ್ ಅವರು ದೇಶದ ಕುರಿತೇ ಯೋಚಿಸುತ್ತಿದ್ದರು ಎಂದರು.

ಆಜಾದ್ ಅವರಿಗೆ ಇರುವ ದೇಶಾಭಿಮಾನವನ್ನು ಗಮನದಲ್ಲಿ ಇಟ್ಟುಕೊಂಡೇ ಗಾಂಧೀಜಿ ಅವರು ಅತಿ ಕಿರಿಯ ವಯಸ್ಸಿನಲ್ಲಿಯೇ ಅವರಿಗೆ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಗೆ ಅಧ್ಯಕ್ಷರನ್ನಾಗಿ ಮಾಡುತ್ತಾರೆ. ಸ್ವಾತಂತ್ರ್ಯ ಹೋರಾಟವು ತೀಕ್ಷ್ಣವಾಗಿದ್ದ ಸಮಯದಲ್ಲಿ ನಾಯಕತ್ವವನ್ನು ಅತ್ಯಂತ ದÀಕ್ಷತೆಯಿಂದ ನಿಭಾಯಿಸುವ ಮೂಲಕ ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಅಲ್ಲದೆ ದೇಶದ ಶಿಕ್ಷಣ ಪರಿಸ್ಥಿತಿ ಧಾರುಣವಾಗಿದ್ದ ಸಮಯದಲ್ಲಿ ಸಾಕ್ಷರತೆಯನ್ನು ಶೇಕಡ 10 ರಷ್ಟಿದ್ದ ಸಾಕ್ಷರತೆಯನ್ನು ಶೇಕಡ 28 ಕ್ಕೆ ಏರಿಸಿದ್ದು ದೊಡ್ಡ ಸಾಧನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ರಿಜ್ವಾನ್ ಅರ್ಷದ್ ಅವರು ಮಾತನಾಡಿ, ನಮ್ಮ ಹಿರಿಯರು ಹಾಕಿಕೊಟ್ಟ ದಾರಿ ನಮಗೆ ದಾರಿದೀಪವಾಗಬೇಕು. ಹಿರಿಯರನ್ನು ಮರೆತರೆ ನಾವು ಎತ್ತರದ ಸ್ಥಾನಕ್ಕೆ ಬೆಳೆಯಲು ಸಾಧ್ಯವಿಲ್ಲ ಎಂದು ಮಕ್ಕಳಿಗೆ ಸಲಹೆ ನೀಡಿದರಲ್ಲದೆ, ಆಜಾದ್ ಅವರನ್ನು ನಿಂದಿಸುವವರೆಲ್ಲರೂ ಅವರು ಹಾಕಿಕೊಟ್ಟಿರುವ ಬುನಾದಿಯಲ್ಲಿಯೇ ಶಿಕ್ಷಣವನ್ನು ಪಡೆದಿದ್ದೇವೆ ಎಂಬುದನ್ನು ಮರೆಯಬಾರದು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲಾ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರು ಮಾತನಾಡಿ ಆಜಾದ್ ಅವರಿಗೆ ಯಾರ್ಯಾರು ಅಗೌರವನ್ನು ಕೊಟ್ಟಿದ್ದಾರೆ ಅವರೆಲ್ಲರೂ ಒಂದು ಜಾತಿ, ಧರ್ಮ ಎಂದು ಒಂದು ಬೌಂಡರಿ ಹಾಕಿಕೊಂಡಿದ್ದಾರೆ. ಬೌಂಡರಿ ಲೆಸ್ ಎಂಬ ವಿಷಯವಿದ್ದರೆ ಅದು ಶಿಕ್ಷಣ ಮಾತ್ರ ಎಂದರು. ಬಿಜೆಪಿ ಸರ್ಕಾರ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನು ನಿಲ್ಲಿಸಿತ್ತು. ಇನ್ನು ಮುಂದೆ ಎಲ್ಲಾ ಶಾಲಾ ಕಾಲೇಜುಗಳಲ್ಲೂ ಈ ದಿನದಂದು ಆಜಾದ್ ಅವರ ಸ್ಮರಣೆ ಮಾಡುವ ಜೊತೆಗೆ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯನ್ನು ತಪ್ಪದೇ ಆಚರಿಸಬೇಕೆಂದು ಸುತ್ತೋಲೆ ಹೊರಡಿಸಲಾಗಿದೆ. ಇನ್ನು ಮುಂದೆ ಈ ದಿನಾಚರಣೆ ಪ್ರತಿ ವರ್ಷ ಜರುಗಲಿದೆ ಎಂದರು.

ನಮ್ಮ ಸರ್ಕಾರ ರಚನೆಗೊಂಡ ತಕ್ಷಣವೇ ಪ್ರಾಣಾಳಿಕೆಯಲ್ಲಿ ತಿಳಿಸಿದಂತೆ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಲಾಯಿತು. ಮಕ್ಕಳಿಗೆ ದಾರಿ ತಪ್ಪಿಸುವಂತಹ ವಿಷಯಗಳು ಪಠ್ಯದಲ್ಲಿ ಇರಬಾರದೆಂಬುದು ಸರ್ಕಾರದ ಉದ್ದೇಶವಾಗಿತ್ತು. ದೇಶ ಉದ್ಧಾರವಾಗಬೇಕು ಎಂದರೆ ದೇವಸ್ಥಾನದಲ್ಲಿ, ಮಸೀದಿಯಲ್ಲಿ ಅಥವಾ ಚರ್ಚ್ ನಲ್ಲಿ ಗಂಟೆ ಹೊಡೆದಾಗಲ್ಲ, ನಮ್ಮ ಸರ್ಕಾರಿ ಶಾಲೆಗಳಲ್ಲಿ 9.30 ಕ್ಕೆ ಗಂಟೆ ಹೊಡೆದಾಗ ಮಾತ್ರ ಎಂದು ಅಭಿಪ್ರಾಯಪಟ್ಟರು. ಬಡ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ರಾಜ್ಯದಾದ್ಯಂತ ತೆರೆಯಲಾಗುತ್ತಿರುವ ಕರ್ನಾಟಕ ಪಬ್ಲಿಕ್ ಶಾಲೆಯಗಳಲ್ಲಿ ಎಲ್.ಕೆ.ಜಿ ಯಿಂದ ಪಿಯುಸಿ ವರೆಗೆ ನಿರಂತರವಾಗಿ ಓದಲು ಅನುಕೂಲ ಮಾಡಿಕೊಡುತ್ತಿರುವ ಜೊತೆಗೆ 1 ಮೇ ತರಗತಿ ಮಕ್ಕಳಿಗೆ ಕಂಪ್ಯೂಟರ್ ತರಬೇತಿ ಮತ್ತು 6 ನೇ ತರಗತಿ ಮಕ್ಕಳಿಗೆ ಓದಿನೊಂದಿಗೆ ಕೌಶಲ್ಯ ತರಬೇತಿಯನ್ನು ಕೂಡ ನೀಡಲಾಗುತ್ತಿದೆ ಎಂದು ತಿಳಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಸಚಿವರಾದ ಬಿ.ಝಡ್. ಜಮೀರ್ ಅಹಮದ್ ಖಾನ್ ಅವರು ಮಾತನಾಡಿ ಮೌಲಾನಾ ಅಬುಲ್ ಕಲಾಂ ಆಜಾದ್ ಅವರು ಶಿಕ್ಷಣಕ್ಕೆ ಪಿತಾಮಹರಿದ್ದಂತೆ. ವಿದ್ಯಾಭ್ಯಾಸವಿಲ್ಲದಿದ್ದರೆ ಯಾರೂ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ ಎಂಬುದು ಆಜಾದ್ ಅವರಿಗೆ ಗೊತ್ತಿತ್ತು. ಹಾಗಾಗಿ ಅವರು ಎಲ್ಲರಿಗೂ ಶಿಕ್ಷಣ ಸಿಗಬೇಕೆಂಬ ಕಾಳಜಿಯನ್ನು ಹೊಂದಿದ್ದರು. ಹಿಂದಿನ ಕಾಲದಲ್ಲಿ ಅಲ್ಪಸಂಖ್ಯಾತರು ಶಿಕ್ಷಣಕ್ಕೆ ಆಸಕ್ತಿ ತೋರಿಸುತ್ತಿರಲಿಲ್ಲ. ಆದರೆ ಈಗ ಸ್ವಲ್ಪ ಮಟ್ಟಿಗೆ ಬದಲಾಗಿದ್ದಾರೆ. ಒಂದು ಹೊತ್ತು ಊಟ ಬಿಟ್ಟಾದರೂ ಸರಿ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಿದ್ದಾರೆ. ನಮ್ಮ ಸರ್ಕಾರ ಶಿಕ್ಷಣಕ್ಕೆ ಶೇಕಡ 10 ರಷ್ಟನ್ನು ಮೀಸಲಿಟ್ಟಿದೆ. 4 ಲಕ್ಷ ಕೋಟಿ ಆಯವ್ಯಯದಲ್ಲಿ 45 ಸಾವಿ ಕೋಟಿಯನ್ನು ಶಿಕ್ಷಣಕ್ಕೆ ಖರ್ಚು ಮಾಡಲಾಗುತ್ತಿದೆ.

ನನಗೆ ದೇವರು ಎಲ್ಲವನ್ನೂ ನೀಡಿದ್ದಾನೆ. ನಾನು ಐದು ಬಾರಿ ಎಂ.ಎಲ್.ಎ ಆಗಿದ್ದೆ. ಮೂರು ಬಾರಿ ಸಚಿವನಾಗಿದ್ದೇನೆ. ನನ್ನ ಪೆÇೀಷಕರು ನನ್ನನ್ನು ಒಳ್ಳೆಯ ಶಾಲೆಗೆ ಸೇರಿಸಿದ್ದರು. ಆದರೆ ನನಗೆ ಓದಲು ಆಸಕ್ತಿ ಇರಲಿಲ್ಲ. ಹಾಗಾಗಿ ನಾನು ಹತ್ತನೇ ತರಗತಿ ಅμÉ್ಟೀ ಓದಿದ್ದು. ಚನ್ನಾಗಿ ಓದಿದ್ದರೆ ನಾನು ಇನ್ನೂ ಎತ್ತರದ ಸ್ಥಾನದಲ್ಲಿ ಇರಬಹುದಿತ್ತು ಎಂದು ಈಗಲೂ ಒಂದೊಂದು ಬಾರಿ ಕಣ್ಣೀರು ಹಾಕಿದ್ದೇನೆ. ಹಾಗಾಗಿ ಮಕ್ಕಳೇ ನೀವು ನಾನು ಅನುಭವಿಸಿದನ್ನು ಅನುಭವಿಸಬಾರದು. ಶಿಕ್ಷಕರು ಮಕ್ಕಳಿಗೆ ದೇವರಿದ್ದಂತೆ, ಅವರು ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೆ ಹೋದಾಗ ನಿಮ್ಮನ್ನು ನೆನಪಿಸಿಕೊಳ್ಳುತ್ತಾರೆ. ಮಕ್ಕಳಿಗೆ ಓದಿವ ಆಸಕ್ತಿ ಹೆಚ್ಚಿಸುವ ಸಲುವಾಗಿ ಎಸ್.ಎಲ್.ಸಿ ಮತ್ತು ಪಿ.ಯು.ಸಿ. ಯಲ್ಲಿ ಶೇಕಡ 90 ರಷ್ಟು ಅಂಕ ಗಳಿಸಿದ ಅಲ್ಪಸಂಖ್ಯಾತ ಮಕ್ಕಳಿಗೆ ನನ್ನ ಖರ್ಚಿನಲ್ಲಿ ಲ್ಯಾಪ್ ಟಾಪ್ ಅನ್ನು ನೀಡುತ್ತೇನೆ. ವರ್ಷ ದಲ್ಲಿ ಕೇವಲ ಒಂದು ತಿಂಗಳು ಮಾತ್ರ ಉಪಯೋಗಕ್ಕೆ ಬರುತ್ತಿದ್ದ ಹಜ್ ಭವನಗಳನ್ನು ಅಲ್ಪಸಂಖ್ಯಾತ ಮಕ್ಕಳಿಗೆ ಸರ್ಕಾರಿ ಹುದ್ದೆಗಳಿಗೆ ಸೇರಲು ಸ್ಪರ್ಧಾತ್ಮ ಪರೀಕ್ಷೆಗೆ ತಯಾರಿ ನಡೆಸಲು ಬಳಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ನಸೀರ್ ಅಹ್ಮದ್, ಶಾಸಕರಾದ ಎಫ್.ಹೆಚ್. ಜಕ್ಕಪ್ಪನವರ್, ಮಾಜಿ ಸಚಿವರಾದ ಎ.ಎಂ.ಹಿಂಡಸಗೇರಿ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾದ ಯು.ನಿಸಾರ್ ಅಹ್ಮದ್, ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷರಾದ ಮೆಹರೋಜ್ ಖಾನ್, ಕರ್ನಾಟಕ ಅಲ್ಪಸಂಖ್ಯಾರತ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷರಾದ ಬಿ.ಕೆ. ಅಲ್ತಾಪ್ ಖಾನ, ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷÀರಾದ ಪೆÇ್ರ.ಎಸ್.ಜಾಫೆಟ್, ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ಮೊಹಸಿನ್, ಅಲ್ಪಸಂಖ್ಯಾತರ ನಿರ್ದೇಶನಾಲಯದ ನಿರ್ದೇಶಕರಾದ ಜೀಲಾನಿ ಮೊಕಾಶಿ, ವಿವಿಧ ಶಾಲಾ ಕಾಲೇಜಿನ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Post a Comment

0Comments

Post a Comment (0)