ಬೆಂಗಳೂರು : ಆಡಳಿತ ಸುಧಾರಣಾ ಆಯೋಗ-2 ಹತ್ತನೇ ವರದಿಯನ್ನು ಇಂದು ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಮೌಲ್ಯಮಾಪನಕ್ಕಾಗಿ ಇಲಾಖೆಯನ್ನು ಬಲಪಡಿಸುವ ದೃಷ್ಟಿಯಿಂದ ಆಡಳಿತ ಸುಧಾರಣಾ ಆಯೋಗದ ಅವಧಿ ಮುಗಿದ ನಂತರವೂ ಸುಧಾರಣಾ ಪ್ರಕ್ರಿಯೆಗಳು ಮುಂದುವರೆಯುವುದನ್ನು ಖಚಿತಪಡಿಸಿಕೊಳ್ಳಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ಮೀಸಲಾದ ಸುಧಾರಣಾ ಮೇಲ್ವಿಚಾರಣಾ ಘಟಕವನ್ನು ಸ್ಥಾಪಸಬೇಕು. ಮುಖ್ಯಕಾರ್ಯದರ್ಶಿಗಳ ನೇತೃತ್ವದಲ್ಲಿ ತ್ರೈಮಾಸಿಕ ಪರಾಮರ್ಶೆ ಮತ್ತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ವಾರ್ಷಿಕ ಉನ್ನತ ಮಟ್ಟದ ಹೊಣೆಗಾರಿಕೆಯನ್ನು ನಿಗದಿಪಡಿಸಲಾಗಿದೆ, ಇದರಿಂದ ಇಲಾಖೆಗಳು ಗುರು ತಲುಪಲು ಬದ್ಧವಾಗುತ್ತವೆ ಎಂದು ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ರ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಅವರು ತಿಳಿಸಿದರು.
ಇಂದು ಆಡಳಿತ ಸುಧಾರಣಾ ಆಯೋಗದ ಹತ್ತನೇ ವರದಿಯನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ನಂತರ ವಿಕಾಸೌಧದಲ್ಲಿ ಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದ ಅಧ್ಯಕ್ಷರು, ನಾನು 2024 ನೇ ಮೇ ಮಾಹೆಯಲ್ಲಿ 8 ನೇ ವರದಿಯನ್ನು 2025 ನೇ ಅಕ್ಟೋಬರ್ ಮಾಹೆಯಲ್ಲಿ 9 ನೇ ವರದಿಯನ್ನು ಮತ್ತು ಡಿಸೆಂಬರ್ 2025 ರಲ್ಲಿ 10 ನೇ ವರದಿಯನ್ನು ಒಟ್ಟಾರೆ 3 ವರದಿಗಳನ್ನು ಸಲ್ಲಿಸಿರುತ್ತೇನೆ. ಈ ಮೂರು ವರದಿಗಳು ಒಟ್ಟು 992 ಶಿಫಾರಸುಗಳನ್ನು ಒಳಗೊಂಡಿವೆ ಎಂದು ತಿಳಿಸಿದರು.8 ನೇ ವರದಿಯಲ್ಲಿ ಶಿಫಾರಸುಗಳ ಅನುಷ್ಠಾನದ ಮೇಲೆ ಹೆಚ್ಚಿನ ಗಮನ ಹರಿಸಲಾಗಿತ್ತು. ಜನವರಿ 2024 ರಲ್ಲಿ ವರದಿ ಮಾಡಿದಾಗ ಒಟ್ಟು 5039 ಶಿಫಾರಸುಗಳ ಪೈಕಿ ಕೇವಲ 199 ಶಿಫಾರಸುಗಳು ಮಾತ್ರ ಅನುಷ್ಠಾನಗೊಂಡಿದ್ದವು. 2024 ನೇ ಸಾಲಿನಲ್ಲಿ ಕೈಗೊಳ್ಳಲಾದ ತೀವ್ರ ಪ್ರಯತ್ನಗಳ ಫಲವಾಗಿ 1500 ಶಿಫಾರಸುಗಳನ್ನು ಜಾರಿಗೆ ತರಲಾಯಿತು.
ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರೊಂದಿಗೆ ಸಂವಾದ ನಡೆಸಿ ಸಲಹೆಗಳನ್ನು ಪಡೆಯಲಾಗಿದೆ. ಆದಾಯ ಪ್ರಮಾಣಪತ್ರ ಮತ್ತು ಪಡಿತರ ಚೀಟಿ ವಿತರಣಾ ಪ್ರಕ್ರಿಯೆಯನ್ನು ಸುಗಮಗೊಳಿಸಲು ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವೃದ್ದಿ ಆಯುಕ್ತರ ನೇತೃತ್ವದಲ್ಲಿ ರಚಿಸಲಾದ ಉಪಸಮಿತಿಯಿಂದ ವರದಿಯನ್ನು ಪಡೆದು ಅವುಗಳನ್ನು ಪರಿಗಣಿಸಿ ಶಿಫಾರಸುಗಳನ್ನು ಸಲ್ಲಿಸಿದೆ. 8ನೇ ವರದಿಯಲ್ಲಿ ಒಟ್ಟು 189 ಶಿಫಾರಸುಗಳನ್ನು ಮಾಡಲಾಗಿತ್ತು ಎಂದು ತಿಳಿಸಿದರು.
9 ನೇ ವರದಿಯಲ್ಲಿ ರಾಜ್ಯ ಸರ್ಕಾರದಡಿಯಲ್ಲಿ ಬರುವ ನಿಗಮ ಮಂಡಳಿಗಳು, ನಿಗಮಗಳು, ಪ್ರಾಧಿಕಾರಗಳು ಮತ್ತು ಸಂಘ ಸಂಸ್ಥೆಗಳ ಸಮಗ್ರ ಪರಾಮರ್ಶೆ ನಡೆಸಲಾಗಿದ್ದು, ಸುಮಾರು 160 ಸಂಸ್ಥೆಗಳ ಪೈಕಿ 84 ಸಂಸ್ಥೆಗಳನ್ನು ಆಳವಾದ ಅಧ್ಯಯನಕ್ಕಾಗಿ ಆಯ್ಕೆ ಮಾಡಿಕೊಳ್ಳಲಾಗಿತ್ತು. ಹಲವು ಹಂತಗಳ ಸಮಾಲೋಚನೆ ನಂತರ ಆಯೋಗವು 7 ಅರೆ ಸರ್ಕಾರಿ ಸಂಸ್ಥೆಗಳನ್ನು ಮುಚ್ಚಲು, 9 ಅರೆ ಸರ್ಕಾರಿ ಸಂಸ್ಥೆಗಳನ್ನು ಇತರೆ 7 ಸಂಸ್ಥೆಗಳೊಂದಿಗೆ ವಿಲೀನಗೊಳಿಸಲು ಮತ್ತು 2 ಸಂಸ್ಥೆಗಳನ್ನು ಸರ್ಕಾರಿ ಇಲಾಖೆಗಳೊಂದಿಗೆ ವಿಲೀನಗೊಳಿಸಲು ಶಿಫಾರಸು ಮಾಡಲಾಗಿದೆ. ಇದರಲ್ಲಿ ಒಟ್ಟು 25 ಸಾರ್ವಜನಿಕ ವಲಯದ ನಿಗಮ ಮಂಡಳಿಗಳು ಒಳಗೊಂಡಿವೆ. ಉಳಿದ 61 ಸಾರ್ವಜನಿಕ ವಲಯದ ಉದ್ದಿಮೆಗಳು ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಹೊರೆಯಾಗದಂತೆ ದಕ್ಷತೆಯಿಂದ ಕಾರ್ಯನಿರ್ವಹಿಸಲು ಪೂರಕವಾದ ಕ್ರಮಗಳನ್ನು ಕೈಗೊಳ್ಳುವಂತೆ ಶಿಫಾರಸು ಮಾಡಲಾಗಿದೆ.
ಭೂ ಸ್ವಾದೀನ ಪ್ರಕ್ರಿಯೆಯು ಹೆಚ್ಚಿನ ವೆಚ್ಚ, ಕಾನೂನು ವಿವಾದಗಳು ಮತ್ತು ಯೋಜನಾ ವಿಳಂಬದಿಂದಾಗಿ ಗಂಭೀರ ಸಮಸ್ಯೆಯಾಗಿ ಗುರ್ತಿಸಲ್ಲಟ್ಟಿದ್ದು ಈ ಕುರಿತು 16 ನಿರ್ದಿಷ್ಟ ಶಿಫಾರಸುಗಳನ್ನು ಮತ್ತು 55 ಸಾಮಾನ್ಯ ಶಿಫಾರಸುಗಳನ್ನು ಸೂಚಿಸಲಾಗಿದೆ. ಒಟ್ಟಾರೆಯಾಗಿ 9ನೇ ವರದಿಯು 449 ಶಿಫಾರಸುಗಳನ್ನು ಒಳಗೊಂಡಿದ್ದು, ನಿರಂತರ ಮೇಲ್ವಿಚಾರಣೆಯಿಂದಾಗಿ ಅನುಷ್ಠಾನಗೊಂಡ ಶಿಫಾರಸುಗಳ ಸಂಖ್ಯೆ ಈ ಅಲ್ಪಾವಧಿಯಲ್ಲಿ 1500 ರಿಂದ 1850ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.
10 ನೇ ವರದಿಯಲ್ಲಿ 352 ಶಿಫಾರಸುಗಳನ್ನು ಮಾಡಲಾಗಿದೆ. ಒಟ್ಟು 2874 ಲೆಕ್ಕಶೀರ್ಷಿಕೆಗಳು / ಯೋಜನೆಗಳನ್ನು ಪರಾಮರ್ಶಿಸಲಾಗಿದೆ. ಶೂನ್ಯ ಅಥವಾ ಋಣಾತ್ಮಕ ಹಂಚಿಕೆ ಹೊಂದಿರುವ 1000 ಲೆಕ್ಕ ಶೀರ್ಷಿಕೆಗಳನ್ನು ಗುರುತಿಸಿ ಅವುಗಳನ್ನು ವಿಲೀನಗೊಳಿಸಲು ಅಥವಾ ಅಂತ್ಯಗೊಳಿಸಲು ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.
ರೂ. 1.00 ಕೋಟಿಗಿಂತ ಕಡಿಮೆ ಅನುದಾನ ಹೊಂದಿರುವ 280 ಲೆಕ್ಕ ಶೀರ್ಷಿಕೆಗಳ ಹಂಚಿಕೆಯು 1336 ಕೋಟಿಯಿಂದ 105 ಕೋಟಿಗೆ ಇಳಿದಿದೆ. ಇವುಗಳ ಅನುಷ್ಠಾನವು ಕಾರ್ಐಸಾಧುವಲ್ಲದ ಕಾರಣ ಅಂತ್ಯಗೊಳಿಸಲು ಅಥವಾ ಬೇರೊಂದು ಲೆಕ್ಕ ಶೀರ್ಷಿಕೆಯಲ್ಲಿ ವಿಲೀನಗೊಳಿಸಲು ಸೂಚಿಸಲಾಗಿದೆ. ಕಡಿಮೆ ವ್ಯಾಪ್ತಿ ಮತ್ತು ಪ್ರಯೋಜನವಿಲ್ಲದ ಹಳೇ ಯೋಜನೆಗಳನ್ನು ಕೊನೆಗೊಳಿಸಲು ಹಾಗೂ ಹೊಸ ಯೋಜನೆಗಳನ್ನು ಜಾರಿಗೆ ತರುವಾಗ ‘ಒಂದು ಹೊಸತು-ಒಂದು ಹಳೆಯದು ರದ್ದು’ ನೀತಿಯನ್ನು ಅನುಸರಿಸಬೇಕು ಎಂಬ ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು.
ಕೆಲಸದ ಹೊರೆಯ ಮೌಲ್ಯಮಾಪನದ ಆಧಾರದ ಮೇಲೆ ಸಿಬ್ಬಂದಿಗಳ ಪುನರ್ ನಿಯೋಜನೆ ಮಾಡಬೇಕು. ಹೆಚ್ಚುವರಿ ಸಿಬ್ಬಂದಿಗಳನ್ನು ಖಾಲಿಯಿರುವ ಮುಂಚೂಣಿ ಕಛೇರಿಗಳಿಗೆ ನಿಯೋಜಿಸಬೇಕು. ಬಳಕೆಯಲ್ಲಿಲ್ಲದ ಅಥವಾ ಭರ್ತಿಯಾಗದ ಲಿಪಿಕ ಹುದ್ದೆಗಳನ್ನು ಬಹು ಕಾರ್ಯ ನಿರ್ವಹಣೆಗಾಗಿ ಕಾರ್ಯನಿರ್ವಾಹಕ ಮತ್ತು ತಾಂತ್ರಿಕ ಹುದ್ದೆಗಳಾಗಿ ಪರಿವರ್ತಿಸಬೇಕು. ಜಿಲ್ಲೆಯ ಜನಸಂಖ್ಯೆ, ಭೌಗೋಳಿಕ ವಿಸ್ತೀರ್ಣ ಮತ್ತು ಹಿಂದುಳಿದಿರುವಿಕೆಯ ಆಧಾರದ ಮೇಲೆ ಜಿಲ್ಲಾವಾರು ಹುದ್ದೆಗಳ ವೈಜ್ಞಾನಿಕ ವಿಂಗಡಣೆಗೆ ಶಿಫಾರಸು ಮಾಡಲಾಗಿದೆ. ಖಾಲಿ ಹುದ್ದೆಗಳ ಅನುಮೋದನೆಗೆ ಒಂದೊಂದಾಗಿ ಅನುಮೋದಿಸುವ ಬದಲು ವಾರ್ಷಿಕ ನೇಮಕಾತಿ ಯೋಜನೆ ಸಿದ್ದಪಡಿಸಿ ಒಟ್ಟಾರೆ ಅನುಮೋದನೆ ನೀಡುವ ನೀತಿಯನ್ನು ರೂಪಿಸಬೇಕು. ಪುನರ್ ನಿಯೋಜನೆ ಪೂರ್ಣಗೊಳ್ಳುವವರೆಗೆ ಹೊಸ ಹುದ್ದೆಗಳ ಸೃಷ್ಟಿ ಅಥವಾ ಮೇಲ್ದರ್ಜೆಗೇರಿಸುವುದನ್ನು ಅನುಮತಿಸಬಾರದು ಎಂದು ಶಿಫಾರಸು ಮಾಡಲಾಗಿದೆ ಎಂದರು.
ಆಯೋಗದ ರಚನೆ ಮತ್ತು ಹಿನ್ನೆಲೆ :ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆಗಳು, ಸೇವಾ ವಿತರಣಾ ಕಾರ್ಯವಿಧಾನಗಳು, ಸಾಂಸ್ಥಿಕ ರಚನೆಗಳು ಮತ್ತು ಆಡಳಿತ ಪ್ರಕ್ರಿಯೆಗಳ ಸಮಗ್ರ ಪರಿಶೀಲನೆ ನಡೆಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಜನವರಿ 2021ರಲ್ಲಿ “ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2” ನ್ನು ರಚಿಸಿತು. 21ನೇ ಶತಮಾನದ ಆಡಳಿತಾತ್ಮಕ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಪಾರದರ್ಶಕತೆ, ಹೊಣೆಗಾರಿಕೆ, ದಕ್ಷತೆ ಮತ್ತು ನಾಗರಿಕ ಕೇಂದ್ರಿತ ಆಡಳಿತವನ್ನು ಬಲಪಡಿಸುವ ನಿಟ್ಟಿನಲ್ಲಿ ಸುಧಾರಣೆಗಳನ್ನು ಶಿಫಾರಸು ಮಾಡುವ ಜವಾಬ್ದಾರಿಯನ್ನು ಅಯೋಗಕ್ಕೆ ವಹಿಸಲಾಗಿತ್ತು.
ಜನವರಿ 2024ರಲ್ಲಿ, ಹಿರಿಯ ಶಾಸಕರು ಹಾಗೂ ಮಾಜಿ ಸಚಿವರಾದ ಆರ್. ವಿ. ದೇಶಪಾಂಡೆ ಅವರನ್ನು ಸಂಪುಟ ದರ್ಜೆಯ ಸಚಿವರ ಸ್ಥಾನಮಾನದೊಂದಿಗೆ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಅವರ ನೇತೃತ್ವದಲ್ಲಿ ಆಯೋಗವು ವಿವಿಧ ಇಲಾಖೆಗಳೊಂದಿಗೆ ತೀವ್ರಗತಿಯ ಪರಿಶೀಲನೆ, ಅನುμÁ್ಠನದ ವ್ಯವಸ್ಥಿತ ಮೇಲ್ವಿಚಾರಣೆ ಮತ್ತು ಹಿರಿಯ ರಾಜಕೀಯ ಹಾಗೂ ಆಡಳಿತಾತ್ಮಕ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಸುಧಾರಣಾ ಕಾರ್ಯಸೂಚಿಯನ್ನು ಚುರುಕುಗೊಳಿಸಿತು. ಆಯೋಗವು ಮೇ 2025ರಲ್ಲಿ 8ನೇ ವರದಿ, ಅಕ್ಟೋಬರ್ 2025ರಲ್ಲಿ 9ನೇ ವರದಿಯನ್ನು ಸಲ್ಲಿಸಿದ್ದು, ಇದೀಗ ಡಿಸೆಂಬರ್ 2025ರಲ್ಲಿ 10ನೇ ವರದಿಯನ್ನು ಸಲ್ಲಿಸುವ ಮೂಲಕ ತನ್ನ ಕಾರ್ಯಾದೇಶವನ್ನು ಪೂರ್ಣಗೊಳಿಸಿದೆ.
10ನೇ ವರದಿಯ ವ್ಯಾಪ್ತಿ ಮತ್ತು ಆದ್ಯತೆ :ಆಯೋಗದ 10ನೇ ವರದಿಯು ಹಿಂದಿನ ವರದಿಗಳಲ್ಲಿ ಸೇರ್ಪಡೆಯಾಗದ ಕೆಲವು ನಿರ್ಣಾಯಕ ವಿಷಯಗಳ ಮೇಲೆ ಕೇಂದ್ರೀಕೃತವಾಗಿದೆ. ಮೊದಲ ಆಡಳಿತ ಸುಧಾರಣಾ ಆಯೋಗ ಮತ್ತು ಕರ್ನಾಟಕ ಆಡಳಿತ ಸುಧಾರಣಾ ಆಯೋಗ -2ರ ಶಿಫಾರಸುಗಳ ಅನುμÁ್ಠನದ ಸ್ಥಿತಿಗತಿಯ ಪರಿಶೀಲನೆ.ಆರ್ಥಿಕ ಹಂಚಿಕೆ ಮತ್ತು ಪ್ರಸ್ತುತತೆಯ ಆಧಾರದ ಮೇಲೆ ರಾಜ್ಯ ವಲಯದ ಯೋಜನೆಗಳ ವೈಜ್ಞಾನಿಕ ಮರುಜೋಡಣೆ, ವಿಲೀನ ಮತ್ತು ರದ್ದತಿ. ಕೆಲಸದ ಹೊರ ಮತ್ತು ಸೇವಾ ವಿತರಣಾ ಅಗತ್ಯತೆಗಳ ಆಧಾರದ ಮೇಲೆ ವಿವಿಧ ವೃಂದ ಮತ್ತು ಇಲಾಖೆಗಳಲ್ಲಿ ಸಿಬ್ಬಂದಿಗಳ ಮರುಹಂಚಿಕೆ. ಸಾಂಸ್ಥಿಕ ಕಾರ್ಯವಿಧಾನಗಳನ್ನು ಬಲಪಡಿಸಲು ಮತ್ತು ಸಾರ್ವಜನಿಕ ಸಂಪನ್ಮೂಲಗಳ ಗರಿಷ್ಠ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಸಾಮಾನ್ಯ ಮತ್ತು ಇಲಾಖಾವಾರು ಶಿಫಾರಸುಗಳು ಒಳಗೊಂಡಿವೆ.
ಶಿಫಾರಸುಗಳ ಅನುμÁ್ಠನದ ಪ್ರಗತಿ:2024-25ರ ಅವಧಿಯಲ್ಲಿ ಅಯೋಗವು ಶಿಫಾರಸುಗಳ ಅನುμÁ್ಠನಕ್ಕೆ ಹೆಚ್ಚಿನ ಒತ್ತು ನೀಡಿದೆ. ಮಾನ್ಯ ಅಧ್ಯಕ್ಷರು ಮುಖ್ಯಮಂತ್ರಿಗಳು, ಸಚಿವರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾಲಮಿತಿಯೊಳಗೆ ಕ್ರಮ ಕೈಗೊಳ್ಳಲು ಅರೆ ಸಕಾರಿ. ಪತ್ರಗಳನ್ನು ಬರೆದಿದ್ದಾರೆ. ಇದರ ಫಲವಾಗಿ, 2,014 ಶಿಫಾರಸುಗಳನ್ನು ಸಂಪೂರ್ಣವಾಗಿ ಜಾರಿಗೆ ತರಲಾಗಿದೆ. 186 ಶಿಫಾರಸುಗಳನ್ನು ಅಂಶಿಕವಾಗಿ ಜಾರಿಗೆ ತರಲಾಗಿದೆ. 839 ಶಿಫಾರಸುಗಳು ಸಕ್ರಿಯ ಅನುμÁ್ಠನದ ಹಂತದಲ್ಲಿವೆ. 2,274 ಶಿಫಾರಸುಗಳನ್ನು ಇಲಾಖೆಗಳು ಪರಿಶೀಲಿಸುತ್ತಿವೆ. ಕಳೆದ ಎರಡು ತಿಂಗಳ ಅವಧಿಯಲ್ಲೇ ಸುಮಾರು 200 ಶಿಫಾರಸುಗಳನ್ನು ಜಾರಿಗೆ ತರಲಾಗಿದೆ.
ರಾಜ್ಯ ವಲಯದ ಯೋಜನೆಗಳ ವೈಜ್ಞಾನಿಕ ಮರುಜೋಡಣೆ:ಯೋಜನಾ ಇಲಾಖೆಯ ದತ್ತಾಂಶಗಳ ಆಧಾರದ ಮೇಲೆ ಸರ್ಕಾರವು ನಿರ್ವಹಿಸುತ್ತಿರುವ 2,874 ಲೆಕ್ಕ ಶೀರ್ಷಿಕೆಗಳನ್ನು ಆಯೋಗವು ವಿವರವಾಗಿ ಪರಿಶೀಲಿಸಿದೆ. ಸುಮಾರು 1,000 ಲೆಕ್ಕ ಶೀರ್ಷಿಕೆಗಳಲ್ಲಿ ಶೂನ್ಯ ಅಥವಾ ಅತ್ಯಲ್ಪ ಹಂಚಿಕೆ ಕಂಡುಬಂದಿದೆ. ಸುಮಾರು 280 ಯೋಜನೆಗಳಿಗೆ 1 ಕೋಟಿ ರೂ.ಗಿಂತ ಕಡಿಮೆ ಹಂಚಿಕೆ ಇದ್ದು, ಇವುಗಳ ಹಂಚಿಕೆಯು ಭಾರಿ ಕುಸಿತ ಕಂಡಿದೆ. ಅನೇಕ ಯೋಜನೆಗಳು ಕೇಂದ್ರ ಪುರಸ್ಕøತ ಯೋಜನೆಗಳೊಂದಿಗೆ ಹೋಲಿಕೆ ಹೊಂದಿವೆ. ಅದ್ದರಿಂದ ಇಂತಹ ಯೋಜನೆಗಳನ್ನು ಸ್ಥಗಿತಗೊಳಿಸಲು, ವಿಲೀನಗೊಳಿಸಲು ಅಥವಾ ಮರುಜೋಡಣೆ ಮಾಡಲು ಆಯೋಗವು ಶಿಫಾರಸು ಮಾಡಿದೆ.
ಸಿಬ್ಬಂದಿಗಳ ಮರುಹಂಚಿಕೆ ಮತ್ತು ಸುಧಾರಣೆ:ಇಲಾಖೆಗಳು, ಮಂಡಳಿ ಮತ್ತು ನಿಗಮಗಳಲ್ಲಿನ ಮಂಜೂರಾದ, ಭರ್ತಿಯಾದ ಮತ್ತು ಹೊರಗುತ್ತಿಗೆ ಹುದ್ದೆಗಳ ಸಮಗ್ರ ಪರಿಶೀಲನೆ ನಡೆಸಲಾಗಿದೆ. ಕೆಲಸದ ಹೊರೆ ಕಡಿಮೆ ಇರುವ ಘಟಕಗಳಿಂದ ಸಿಬ್ಬಂದಿಗಳನ್ನು ಅಗತ್ಯವಿರುವ ಕಡೆಗಳಿಗೆ ಮರುಹಂಚಿಕೆ ಮಾಡುವುದು. ಪ್ರಸ್ತುತ ಅಪ್ರಸ್ತುತವಾಗಿರುವ ಹುದ್ದೆಗಳನ್ನು ರದ್ದುಪಡಿಸುವುದು ಅಥವಾ ತಾಂತ್ರಿಕ ಹುದ್ದೆಗಳಾಗಿ ಪರಿವರ್ತಿಸುವುದು. ಗ್ರೂಪ್-ಸಿ ಮತ್ತು ಗ್ರೂಪ್-ಡಿ ವೃಂದಗಳ ಅನಿಯಂತ್ರಿತ ವಿಸ್ತರಣೆಗೆ ಕಡಿವಾಣ ಹಾಕುವುದು.
ಸಾಂಸ್ಥಿಕ ಶಿಫಾರಸುಗಳು : ಆಯೋಗದ ಅವಧಿ ಮುಗಿದ ನಂತರವೂ ಅನುμÁ್ಠನದ ಮೇಲೆ ನಿರಂತರ ನಿಗಾ ಇರಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯಲ್ಲಿ ಸುಧಾರಣಾ ಮೇಲ್ವಿಚಾರಣಾ ಘಟಕ ಸ್ಥಾಪಿಸುವುದು. ಆನ್‍ಲೈನ್ ಟ್ರ್ಯಾಕಿಂಗ್ ಪೆÇೀರ್ಟಲ್ ಮೂಲಕ ಪಾರದರ್ಶಕ ಮೇಲ್ವಿಚಾರಣೆ ಮುಂದುವರಿಸುವುದು.
10ನೇ ವರದಿಯು 355 ಹೊಸ ಶಿಫಾರಸುಗಳನ್ನು ಒಳಗೊಂಡಿದ್ದು, ಅಯೋಗವು ಒಟ್ಟು 10 ವರದಿಗಳ ಮೂಲಕ 42 ಇಲಾಖೆಗಳಿಗೆ ಸಂಬಂಧಿಸಿದಂತೆ 6,000 ಕ್ಕೂ ಹೆಚ್ಚು ಶಿಫಾರಸುಗಳನ್ನು ನೀಡಿದೆ. 10ನೇ ವರದಿಯನ್ನು ಸಲ್ಲಿಸುವುದರೊಂದಿಗೆ ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ತನ್ನ ಕಾರ್ಯವನ್ನು ಪೂರ್ಣಗೊಳಿಸಿದೆ. ಸುಧಾರಣೆಗಳ ಪ್ರಯೋಜನಗಳು ಜನಸಾಮಾನ್ಯರಿಗೆ ತಲುಪುವಂತೆ ಮಾಡಲು ಮತ್ತು ಆಡಳಿತ ಸುಧಾರಣೆಯ ನಿರಂತರತೆಯನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ.