ಪಾಂಚಜನ್ಯ ಪ್ರತಿಷ್ಠಾನದ 13ನೇ ವಾರ್ಷಿಕೋತ್ಸವದ ಅಂಗವಾಗಿಆಧ್ಯಾತ್ಮಿಕ ಕ್ಷೇತ್ರದ ಅನನ್ಯ ಸೇವೆಗಾಗಿ ಖ್ಯಾತ ವಾಗ್ಮಿ ಶ್ರೀ ದುಷ್ಯಂತ್ ಶ್ರೀಧರ್ ಅವರಿಗೆಪ್ರತಿಷ್ಠಿತ “ಪಾಂಚಜನ್ಯ ಪುರಸ್ಕಾರ – 2025” ಪ್ರದಾನ.

varthajala
0

 ದಿನಾಂಕ: ಡಿ. 28, ಶನಿವಾರ  

ಸಮಯ: ಬೆಳಿಗ್ಗೆ 9.30

ಸ್ಥಳಯುವಪಥ – ವಿವೇಕ ಆಡಿಟೋರಿಯಂ,ಜಯನಗರ 4ನೇ ಬ್ಲಾಕ್ಬೆಂಗಳೂರು

ಪುರಸ್ಕಾರದಲ್ಲಿಅಭಿನಂದನಾ ಪತ್ರಸ್ಮರಣಿಕೆಫಲತಾಂಬೂಲ ಮತ್ತು ರೂ. 1 ಲಕ್ಷ ನಗದು

ಮುಖ್ಯ ಅತಿಥಿಶ್ರೀ ಅಶೋಕ್ ಹಾರನಹಳ್ಳಿ (ಮಾಜಿ ಅಡ್ವೊಕೇಟ್ ಜನರಲ್ಕರ್ನಾಟಕ)

ಸನಾತನ ಜ್ಞಾನ ಭಂಡಾರಿ

ಅಧ್ಯಾತ್ಮ ಲೋಕದ ಸವ್ಯಸಾಚಿ — ಶ್ರೀ ದುಷ್ಯಂತ್ ಶ್ರೀಧರ್

ಕೆಲವರು ಮಾತನಾಡುತ್ತಾರೆಕೆಲವರು ಚಿಂತನೆ ಹುಟ್ಟಿಸುತ್ತಾರೆಕೆಲವರು ಉಪನ್ಯಾಸ ಕೊಡುತ್ತಾರೆಕೆಲವರು ಜೀವನದ ದಿಕ್ಕನ್ನೇ ಬದಲಿಸುತ್ತಾರೆಶ್ರೀ ದುಷ್ಯಂತ್ ಶ್ರೀಧರ್ ಅವರು  ಎರಡನೆಯ ವರ್ಗಕ್ಕೆ ಸೇರಿದವರುಸನಾತನ ಧರ್ಮದ ಗಹನ ತತ್ವಗಳನ್ನು ಸಮಕಾಲೀನ ಬದುಕಿನ ಸ್ಪರ್ಶದೊಂದಿಗೆ ಅನಾವರಣಗೊಳಿಸುವ ಅಪರೂಪದ ವಾಗ್ಮಿ.

ಕುಂಭಕೋಣಂನ ಆರ್ಷ ಸಂಸ್ಕೃತಿಯ ಶ್ರೀವೈಷ್ಣವ ಕುಟುಂಬದ ಸಂಸ್ಕಾರಗಳಲ್ಲಿ ಬೆಳೆದ ಅವರು೧೯ ಸೆಪ್ಟೆಂಬರ್ ೧೯೮೬ರಂದು ಬೆಂಗಳೂರಿನಲ್ಲಿ ಜನಿಸಿದರುಬಾಲ್ಯದಲ್ಲಿಯೇ ಸಂಸ್ಕೃತಪುರಾಣದಿವ್ಯಪ್ರಬಂಧ ಮತ್ತು ವೇದಾಂತ ಚಿಂತನೆಗಳತ್ತ ಅವರ ಮನಸ್ಸು ಸ್ವಾಭಾವಿಕವಾಗಿ ತಿರುಗಿತು. ‘ಜನನಿಯೇ ಮೊದಲ ಗುರು’ ಎಂಬ ಮಾತಿಗೆ ಸಾಕ್ಷಿಯಾಗಿಮಾತೃಶ್ರೀ ಅವರ ಪ್ರೇರಣೆಯಿಂದ ಐದು ವರ್ಷದಲ್ಲಿಯೇ ‘ದಯಾಶತಕಮ್’ ಕಂಠಪಾಠಭಗವದ್ಗೀತೆಯ ಅಧ್ಯಯನಇವೆಲ್ಲವೂ ಅವರ ಆಧ್ಯಾತ್ಮಿಕ ಬೀಜಾಂಕುರಗಳಾದವು.

ಪ್ರತಿಷ್ಠಿತ ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ (ಪಿಲಾನಿ)ನಲ್ಲಿ ಸಂಯೋಜಿತ ರಾಸಾಯನಿಕ ಇಂಜಿನಿಯರಿಂಗ್ ಮತ್ತು ರಸಾಯನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರುಒಂದು ದಶಕ ಕಾಲ ಕಾರ್ಪೊರೇಟ್ ವಲಯದಲ್ಲಿ ಕಾರ್ಯನಿರತರಾಗಿದ್ದರು.ಆದರೆ ಮುಂಬೈನಲ್ಲಿ ನಡೆದ ೩೬ ಗಂಟೆಗಳ ರಾಮಾಯಣ ಉಪನ್ಯಾಸ ಸರಣಿ ಅವರ ಬದುಕಿನ ತಿರುವು ನಂತರ ವೃತ್ತಿಯ ಬಂಧನವನ್ನು ಕಳಚಿಅಧ್ಯಾತ್ಮ ಕ್ಷೇತ್ರವನ್ನೇ ಜೀವನ ಧರ್ಮವನ್ನಾಗಿ ಸ್ವೀಕರಿಸಿದರು.

ಶ್ರೀ ಅಹೋಬಿಲ ಮಠದ ಆಚಾರ್ಯರು ಹಾಗೂ ಖ್ಯಾತ ಯತಿವರ್ಯರ ಸಾನ್ನಿಧ್ಯದಲ್ಲಿ ವೇದಾಂತ ಅಧ್ಯಯನ ನಡೆಸಿದ ಅವರುತಮಿಳುಕನ್ನಡತೆಲುಗುಸಂಸ್ಕೃತಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಪ್ರವಚನ ನೀಡುವ ಬಹುಭಾಷಾ ಕೋವಿದಗಹನ ತತ್ವಗಳನ್ನು ಸರಳವಾಗಿಆದರೆ ತಾತ್ವಿಕ ಗಂಭೀರತೆಯನ್ನು ಕಳೆದುಕೊಳ್ಳದೆ ನಿರೂಪಿಸುವುದು ಅವರ ವಾಗ್ವೈಖರಿಯ ವಿಶೇಷ.


ಅಮೆರಿಕಾಆಸ್ಟ್ರೇಲಿಯಾಯೂರೋಪ್ ಸೇರಿದಂತೆ ೨೩ ದೇಶಗಳ ೧೨೫ಕ್ಕೂ ಹೆಚ್ಚು ನಗರಗಳಲ್ಲಿ ೩೫೦೦ಕ್ಕೂ ಮೀರಿದ ಪ್ರವಚನಗಳ ಮೂಲಕ ಅವರು ಭಾರತೀಯ ಧಾರ್ಮಿಕ ಪರಂಪರೆಯನ್ನು ಜಾಗತಿಕ ವೇದಿಕೆಗೆ ತಂದು ನಿಲ್ಲಿಸಿದ್ದಾರೆಬರಹಗಾರರಾಗಿ ‘ThePeerles Poet and Preceptor’ ಮತ್ತು ‘ರಾಮಾಯಣಮ್’ ಕೃತಿಗಳ ಮೂಲಕ ಪುರಾಣ ಸಾಹಿತ್ಯಕ್ಕೆ ನವ್ಯ ದೃಷ್ಟಿ ನೀಡಿದ್ದಾರೆ .

ಸಂಸ್ಕೃತ ಭಾಷೆಯ ಸಂರಕ್ಷಣೆಗೆ ಸಮರ್ಪಿತ ಚಲನಚಿತ್ರ ‘ಶಾಕುಂತಲಾ’, ‘ವೇದಾಂತ ದೇಶಿಕ’ ಚಿತ್ರದಲ್ಲಿನ ಅಭಿನಯ, ‘ಪೆರಿಯವರ್ವೆಬ್ಸರಣಿ ,ಹಾಗೂ ನೃತ್ಯರೂಪಕಗಳು ಸಂಗೀತಕಲೆ ಮತ್ತು ವೇದಾಂತಗಳ ಸಮನ್ವಯದ ಜೀವಂತ      ಉದಾಹರಣೆಗಳು.

ಹಿಂದೂ ದೇವಾಲಯಗಳ ಸ್ವಾತಂತ್ರ್ಯ, ಸಂರಕ್ಷಣೆ ಮತ್ತು ಜೀರ್ಣೋದ್ಧಾರಕ್ಕಾಗಿ ದೇಶಿಕ ದಯಾ ಟ್ರಸ್ಟ್ ಮೂಲಕ ನಡೆಸುತ್ತಿರುವ ಕಾರ್ಯಗಳು, ಅವರ ಅಧ್ಯಾತ್ಮ ಚಿಂತನೆಯ ಸಾಮಾಜಿಕ ಆಯಾಮವನ್ನು ಸ್ಪಷ್ಟಪಡಿಸುತ್ತವೆ.

 ಎಲ್ಲ ಸಾಧನೆಗಳನ್ನು ಗೌರವಿಸಿಸನಾತನ ಧರ್ಮ ಪರಂಪರೆಗೆ ಅನನ್ಯ ಕೊಡುಗೆ ನೀಡುತ್ತಿರುವ ಶ್ರೀ ದುಷ್ಯಂತ್ ಶ್ರೀಧರ್ ಅವರಿಗೆಪಾಂಚಜನ್ಯ ಪುರಸ್ಕಾರ ೨೦೨೫ ಪ್ರದಾನಿಸಿರುವುದು ಒಬ್ಬ ವ್ಯಕ್ತಿಗೆ ಸಲ್ಲಿಸಿದ ಗೌರವ ಮಾತ್ರವಲ್ಲಒಂದು ಪರಂಪರೆಗೆ ಸಲ್ಲಿಸಿದ ಗೌರವ.


Post a Comment

0Comments

Post a Comment (0)