ಬೆಂಗಳೂರು : ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ರಾಜಾಜಿನಗರದ ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಡಿಸೆಂಬರ್ 23 ರಿಂದ 26ರ ವರೆಗೆ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಭಜನಾ ಕಾರ್ಯಕ್ರಮ (ಸಂಜೆ 6 ರಿಂದ 7) : ಡಿಸೆಂಬರ್ 23-ರಾಜಾಜಿನಗರದ ವಾಸವಿ ಮಹಿಳಾ ಮಂಡಲಿ, ಡಿಸೆಂಬರ್ 24-ರಾಜಾಜಿನಗರದ ವಾಸವಿ ಗಾನ ಲಹರಿ, ಡಿಸೆಂಬರ್ 25-ಶ್ರೀರಾಮಪುರದ ವೈಷ್ಣವಿ ವಾಸವಿ ಮಹಿಳಾ ಮಂಡಲಿ.
ಪ್ರವಚನ ಕಾರ್ಯಕ್ರಮ : (ಸಂಜೆ 7 ರಿಂದ 8) : ಡಿಸೆಂಬರ್ 23 ರಿಂದ 25ರ ವರೆಗೆ ಶ್ರೀ ವರದಾಚಾರ್ ಚಿಟಗುಪ್ಪ ಇವರಿಂದ ಧಾರ್ಮಿಕ ಪ್ರವಚನ. ವಿಷಯ : "ಶ್ರೀ ಲಕ್ಷ್ಮೀದೇವಿಯ ಮಹಿಮೆಗಳು"
ಹರಿನಾಮ ಸಂಕೀರ್ತನೆ : ಡಿಸೆಂಬರ್ 26, ಶುಕ್ರವಾರ ಸಂಜೆ 6-30ಕ್ಕೆ. ಗಾಯನ : ಕು|| ಹರ್ಷಿತಾ ಶ್ರೀನಿವಾಸ್, ಹಾರ್ಮೋನಿಯಂ : ಶ್ರೀ ಹರೀಶ್ ಕರಣಂ, ತಬಲಾ : ಶ್ರೀ ಎಂ.ಕೆ. ಅನಿರುದ್ಧ ದಾಸ್. ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ಬಾಲಸುಬ್ರಹ್ಮಣ್ಯಸ್ವಾಮಿ ದೇವಸ್ಥಾನ, 10ನೇ ಮುಖ್ಯರಸ್ತೆ, ಡಿ ಬ್ಲಾಕ್, 2ನೇ ಹಂತ, ರಾಜಾಜಿನಗರ, ಬೆಂಗಳೂರು-560010
ಈ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಟಿ ಟಿ ಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ವಿನಂತಿಸಿದ್ದಾರೆ.