ಡಿಸೆಂಬರ್ 16 ರಂದು ವಿಜಯ ದಿವಸ್ ದಿನಾಚರಣೆ

varthajala
0

 ಬೆಂಗಳೂರು, ‘ವಿಜಯ ದಿವಸ್ʼ ಸಂಭ್ರಮಾಚರಣೆಯನ್ನು ಡಿಸೆಂಬರ್ 16 ರಂದು ಬೆಳಿಗ್ಗೆ 09:00 ಗÀಂಟೆಗೆ ಬೆಂಗಳೂರಿನ ರಾಷ್ಟ್ರೀಯ ಮಿಲಿಟರಿ ಸ್ಮಾರಕ ಇಲ್ಲಿ ಆಚರಿಸಲಾಗುತ್ತಿದೆ.ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಮಾಜಿ ಸೈನಿಕರ ಗುರುತಿನ ಚೀಟಿ/ ಮಾಜಿ ಸೈನಿಕರ ವಿಧವೆಯರ ಗುರುತಿನ ಚೀಟಿ/ಇ.ಸಿ.ಎಚ್‍ಎಸ್ ಕಾರ್ಡ್/ಸಿಎಸ್ ಡಿ ಕಾರ್ಡ್ ಅಥವಾ ಸೇವಾ ಪುಸ್ತಕ ಯಾವುದಾದರು ಒಂದು ಮೂಲ ದಾಖಲೆಗಳನ್ನು ಹಾಜರು ಪಡಿಸಿ ಭಾಗವಹಿಸಬಹುದಾಗಿದೆ.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 080-25589459ಗೆ ಕರೆ ಮಾಡಬಹುದಾಗಿದೆ.ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ಎಲ್ಲಾ ಅತಿಥಿಗಳು ಹಾಗೂ ಆಹ್ವಾನಿತರಿಗೆ ವಾಹನ ನಿಲುಗಡೆಗಾಗಿ ನೆಹರು ತಾರಾಲಯದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲರೂ ಬೆಳಿಗ್ಗೆ 08:45ಕ್ಕಿಂತ ಮೊದಲೇ ಆಗಮಿಸಿ ಆಸೀನರಾಗುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಪ್ರಭಾರ ನಿರ್ದೇಶಕರಾದ  ನಿವೃತ್ತ ಫ್ಲೈಟ್ ಲೆಫ್ಟಿನೆಂಟ್ ಎಮ್ ಎಸ್ ಲೋಲಾಕ್ಷ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)