ಜಾಗತಿಕ ಆರ್ಯವೈಶ್ಯ ಸಮ್ಮಿಟ್2026: ಕರ್ನಾಟಕ ಆರ್ಯವೈಶ್ಯ ಮಹಾಸಭಾ ಆಯೋಜನೆ

varthajala
0


2026 ಡಿಸೆಂಬರ್ 24ರಿಂದ 27ವರೆಗೂ ಜಾಗತಿಕ ಆರ್ಯವೈಶ್ಯ ಸಮ್ಮಿಟ್2026: ಕರ್ನಾಟಕ ಆರ್ಯವೈಶ್ಯ ಮಹಾಸಭಾ ಆಯೋಜನೆ



ಬೆಂಗಳೂರು, ಡಿ, 7; ಕರ್ನಾಟಕ ಆರ್ಯವೈಶ್ಯ ಮಹಾಸಭಾದಿಂದ ಜಾಗತಿಕ ಆರ್ಯವೈಶ್ಯೆ ಶೃಂಗಸಭೆ ಬರುವ 2026 ರ ಡಿಸೆಂಬರ್ 24 ರಿಂದ 27 ರ ವರೆಗೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬಿಡುಗಡೆ ಸಮಾರಂಭ ನಡೆಯಿತು.

ಮಾಜಿ ರಾಜ್ಯಸಭಾ ಸದಸ್ಯ ಟಿ ಜಿ.ವೆಂಕಟೇಶ್, ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್, ಎಮರಾಲ್ಡ್ ಗ್ರೂಪ್ ಅಧ್ಯಕ್ಷರಾದ ಕೆ.ಶ್ರೀನಿವಾಸನ್, ಎಮ್ವೀ ಗ್ರೂಪ್ ಸ್ಥಾಪಕರಾದ ಡಿ.ವಿ.ಮಂಜುನಾಥ್, ಕರ್ನಾಟಕ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಮಪ್ರಸಾದ್ ಕೆ.ವಿ ಮತ್ತು ಆಂಧ್ರಪ್ರದೇಶ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷರಾದ ಚಿನ್ನರಾಮ ಸತ್ಯನಾರಾಯಣ, ತೆಲಂಗಾಣ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷರಾದ ಅಮರವಾಡಿ ಲಕ್ಷ್ಮಿನಾರಾಯಣ, ಪಾಂಡಿಚೇರಿ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷರಾದ ದಯಾನಂದಗುಪ್ತ, ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷರಾದ ಆರ್.ಪಿ.ರವಿಶಂಕರ್ , ಮಾಜಿ ಶಾಸಕರಾದ ಮಂಜುನಾಥ್ ಸಮ್ಮುಖದಲ್ಲಿ ಲಾಂಛನ ಬಿಡುಗಡೆ ಮಾಡಲಾಯಿತು.

ಆರ್.ಪಿ.ರವಿಶಂಕರ್ ಮಾತನಾಡಿ, ಸಮಾಜದ ಸರ್ವಾಂಗೀಣ ಅಭಿವೃದ್ಧಿಯನ್ನು ಬಯಸಿ 1908ರಲ್ಲಿ ಪ್ರಾರಂಭವಾದ ಕರ್ನಾಟಕ ಆರ್ಯವೈಶ್ಯ ಮಹಾಸಭೆಗೆ 1927ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ರಾಜರ್ಷಿ ಶ್ರೀ ಕೃಷ್ಣರಾಜೇಂದ್ರ ಒಡೆಯರ್‌ ಬೆಂಗಳೂರು ನಗರದ ಹೃದಯಭಾಗದ ಗಾಂಧಿನಗರದಲ್ಲಿ 52000 ಚದರ ಅಡಿ ಜಾಗವನ್ನು ಮತ್ತು ವಿದ್ಯಾರ್ಥಿಗಳ ವಸತಿನಿಲಯವನ್ನು ನಿರ್ಮಾಣ ಮಾಡಲು 10 ಸಾವಿರ ರೂ ನೆರವು ನೀಎಇ ಪ್ರೋತ್ಸಾಹಿಸಿದ್ದರು.

ವ್ಯಾಪಾರ ವ್ಯವಹಾರ ಉದ್ಯಮಗಳನ್ನೇ ವೃತ್ತಿಯಾಗಿಸಿಕೊಂಡಿದ್ದ ಆರ್ಯವೈಶ್ಯ ಸಮಾಜದ ಬಂಧುಗಳ ಆರ್ಥಿಕ ಸೌಲಭ್ಯಕ್ಕಾಗಿ ಮಹಾಸಭೆ ಆಶ್ರಯದಲ್ಲಿ ದಿ ವೈಶ್ಯ ಬ್ಯಾಂಕ್ ಲಿ.. ವೈಶ್ಯ ಕೋ-ಆಪರೇಟಿವ್ ಬ್ಯಾಂಕ್‌ಗಳನ್ನು ಆರಂಭಮಾಡಿದರು. ನಂತರದ ಕಾಲಮಾನದಲ್ಲಿ ವೈಶ್ಯ ಬ್ಯಾಂಕ್ ಇಂದಿನ ಕೋಟಕ್ ಬ್ಯಾಂಕ್ ಜೊತೆಗೆ, ವೈಶ್ಯ ಕೋ-ಆಪರೇಟಿವ್ ಬ್ಯಾಂಕ್ ನಿ., ಕರ್ನಾಟಕ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಬ್ಯಾಂಕ್ ಜೊತೆ ವಿಲೀನವಾಗಿದ್ದು ಅದು ಇತಿಹಾಸ ಎಂದರು.

ರಾಜ್ಯಾದ್ಯಂತ 90ಕ್ಕೂ ಮೀರಿದ ಸಹಕಾರ ಸಂಘಗಳು, 9 ಸಹಕಾರ ಬ್ಯಾಂಕುಗಳು, 97 ಶಾಲೆಗಳು, 287 ಶ್ರೀ ವಾಸವಿ ದೇವಾಲಯಗಳು, 252 ಕಲ್ಯಾಣ ಮಂಟಪಗಳು, ಸರಿಸುಮಾರು 1800 ಸಂಘ ಸಂಸ್ಥೆಗಳ ಮೂಲಕ ಸಮಾಜದ ಸಂಘಟನೆಯನ್ನು ಸಧೃಡವಾಗಿಸಿರುವ ಕರ್ನಾಟಕ ಆರ್ಯವೈಶ್ಯ ಮಹಾಸಭಾ, ಯುವ ಜನತೆಯ ಭವ್ಯ ಭವಿಷ್ಯಕ್ಕಾಗಿ ಮತ್ತು ಯುವ ಜನತೆಯನ್ನು ಹೊಸ ಉದ್ಯಮಗಳತ್ತ ಸೆಳೆಯುವ ಈಗಾಗಲೇ ಇರುವ ಉದ್ಯಮಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳಸಿ ಉದ್ಯಮಶೀಲರಾಗಿ ಅಂತರರಾಷ್ಟ್ರೀಯ ಮಟ್ಟದವರೆವಿಗೂ ಬೆಳೆಯಲು ಸಹಕಾರಿಯಾಗುವಂತಹ ಮಾರ್ಗದರ್ಶನ, ತಾಂತ್ರಿಕ/ಆರ್ಥಿಕಸಲಹೆ, ಸಹಕಾರಗಳನ್ನು ನೀಡುವುದಲ್ಲದೆ, ರಾಜ್ಯ/ಕೇಂದ್ರ ಸರ್ಕಾರಗಳ ನೀತಿಗಳ ಬಗ್ಗೆ, ಅಲ್ಲಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಸೂಕ್ತವಾದ ಪರಿಣಾಮಕಾರಿಯಾದ ಮಾಹಿತಿಗಳನ್ನು ಮುಟ್ಟಿಸಿ. ನಮ್ಮ ಭವಿಷ್ಯದ ಯುವ ಜನಾಂಗವನ್ನು ಉದ್ದಿಮೆಗಳ ಆರಂಭದತ್ತ ಸೆಳೆಯುವ ಸಲುವಾಗಿ ಕರ್ನಾಟಕ ಆರ್ಯವೈಶ್ಯ ಮಹಾಸಭೆ ಆಶ್ರಯದಲ್ಲಿ ವಿಶ್ವ ಆರ್ಯವೈಶ್ಯ ಸಮಾವೇಶವನ್ನು ನಡೆಸಲು ಉದ್ದೇಶಿಸಿದೆ ಎಂದರು.

2026ರ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರು ನಗರದಲ್ಲಿ ನಡೆಯಲಿರುವ ಜಾಗತಿಕ ಮಟ್ಟದ ಈ ಸಮಾವೇಶದ ಮೂಲಕ ಮುಂದಿನ 10 ವರ್ಷಗಳಲ್ಲಿ ಸುಮಾರು 5000 ನವೋದ್ಯಮಗಳನ್ನು ಆರಂಭಿಸುವ ಮತ್ತು 2 ಲಕ್ಷಕ್ಕೂ ಮೀರಿದ ಉದ್ಯೋಗಗಳನ್ನು ಸೃಷ್ಟಿಸುವ ಮಹತ್ಕಾರ್ಯಕ್ಕೆ ಮುಂದಡಿ ಇಟ್ಟಿದೆ. ವಿಶ್ವ ಆರ್ಯವೈಶ್ಯ ಸಮಾವೇಶಕ್ಕೆ ವಿಶ್ವದ ನಾನಾ ಭಾಗಗಳಿಂದ ಸುಮಾರು ಒಂದೂವರೆ ಲಕ್ಷ ಜನ ಬರುವರೆಂಬ ನಿರೀಕ್ಷೆಯನ್ನು ಹೊಂದಿದ್ದೇವೆ ಎಂದು ಪಿ.ಆರ್. ರವಿಕುಮಾರ್ ಹೇಳಿದರು.

2026ರ ವಿಶ್ವ ಆರ್ಯವೈಶ್ಯ ಸಮಾವೇಶದ ಹಿನ್ನೆಲೆ. ಬೆಂಗಳೂರು ನಗರದ ಗಾಂಧಿನಗರದಲ್ಲಿರುವ ಜ್ಞಾನಜ್ಯೋತಿ ಸಭಾಂಗಣದಲ್ಲಿ ವಿಶ್ವ ಆರ್ಯವೈಶ್ಯ ಸಮಾವೇಶದ ಲಾಂಚನ ಹಾಗೂ ಧೈಯೋದ್ದೇಶಗಳನ್ನು ಬಿಡುಗಡೆ ಮಾಡುತ್ತಿದ್ದೇವೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ದೇಶದ ಪ್ರತಿಷ್ಟಿತ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾದ ಹಾಗೂ ಆಂಧ್ರಪ್ರದೇಶ ಸರ್ಕಾರದ ಮಾಜಿ ಸಚಿವರು, ಮಾಜಿ ರಾಜ್ಯಸಭಾ ಸದಸ್ಯರೂ ಆಗಿರುವ ಶ್ರೀ ಟಿ.ಜಿ. ವೆಂಕಟೇಶ್‌ರವರು ಉದ್ಘಾಟನೆ ಮಾಡಲಿದ್ದಾರೆ. ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಡಿ.ಎಸ್.ಅರುಣ್ ವಿಶ್ವ ಆರ್ಯವೈಶ್ಯ ಸಮಾವೇಶದ ಲಾಂಚನವನ್ನು ಮತ್ತು ದೇಶದ ಪ್ರತಿಷ್ಟಿತ ಚಿನ್ನಾಭರಣಗಳ ಉದ್ಯಮಿ ಎಮರಾಲ್ಡ್ ಗ್ರೂಪ್‌ನ ಮುಖ್ಯಸ್ಥರಾದ ಶ್ರೀ ಶ್ರೀನಿವಾಸರವರು ಸಮಾವೇಶದ ಧೈಯೋದ್ದೇಶಗಳನ್ನು, ಅಂತೆಯೇ ಸೌರಶಕ್ತಿ ಕ್ಷೇತ್ರದಲ್ಲಿ ದೇಶ ವಿದೇಶಗಳಲ್ಲಿ ಖ್ಯಾತಿ ಹೊಂದಿರುವ ಎಂ.ವಿ.ಗ್ರೂಪ್ ಅಧ್ಯಕ್ಷರಾದ ಡಿ.ವಿ. ಮಂಜುನಾಥ್‌ ರವರು ಸಮಾವೇಶದ ವೆಬ್‌ ಸೈಟ್ ಲೋಕಾರ್ಪಣೆ ಮಾಡಲಿದ್ದಾರೆ ಎಂದರು.

Post a Comment

0Comments

Post a Comment (0)