ಕೆಐಐಟಿ ನಾನ್ಹಿಪಾರಿ ಲಿಟಲ್‌ ಮಿಸ್‌ ಇಂಡಿಯಾ ಸ್ಪರ್ಧೆ 2025

varthajala
0

 ಭುವನೇಶ್ವರ:  ಇಲ್ಲಿನ  ಕಳಿಂಗ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿ (ಕೆಐಐಟಿ) ಸಂಸ್ಥೆಯು ಆಯೋಜಿಸಿದ್ದ ʼಕೆಐಐಟಿ ನಾನ್ಹಿಪಾರಿ ಲಿಟಲ್ ಮಿಸ್ ಇಂಡಿಯಾ ಸ್ಪರ್ಧೆʼ ಯಲ್ಲಿ ಬೆಂಗಳೂರಿನ ಸಮೃದ್ಧಿ ತ್ರಿಪಾಠಿ ವಿಜೇತರಾಗಿದ್ದಾರೆ.ಮೊದಲ ಮತ್ತು ಎರಡನೇ ರನ್ನರ್-ಅಪ್ ಆಗಿ ಮಧ್ಯಪ್ರದೇಶದ ಪ್ರಾಂಜಲ್ ಶರ್ಮಾ ಮತ್ತು ತೆಲಂಗಾಣದ ಪಿಪ್ರಾರ್ಥಿನಿ ಸ್ಥಾನ ಪಡೆದಿದ್ದಾರೆ ಹಿಂದೆ ನಡೆದ ಸ್ಪರ್ಧೆಗಳಲ್ಲಿ ಕರ್ನಾಟಕದವರು ವಿಜೇತರಾಗಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.ಕೆಐಐಟಿ ನಾನ್ಹಿಪಾರಿ ಲಿಟಲ್‌ ಮಿಸ್‌ ಇಂಡಿಯಾ ಸ್ಪರ್ಧೆಯು ರಾಷ್ಟ್ರಮಟ್ಟದ ಪ್ರತಿಭಾ ಪ್ರದರ್ಶನ ಮತ್ತು ಸೌಂದರ್ಯ ಸ್ಪರ್ಧೆಯಾಗಿದ್ದು  ಬಾರಿ 25 ನೇ ಆವೃತ್ತಿಯ ಪ್ರದರ್ಶನವಾಗಿದ್ದು ವಿಶೇಷವಾಗಿತ್ತು.ಫೋಟೋಶೂಟ್ಅತ್ಯುತ್ತಮ ವೇಷಭೂಷಣಆಕರ್ಷಕವಾದ ನಡಿಗೆ ಮತ್ತು ಅತ್ಯುತ್ತಮ ಭಂಗಿಅತ್ಯುತ್ತಮ ಪರ್ಸನಾಲಿಟಿ ಹೀಗೇ ಹಲವು ವಿಭಾಗಗಳಲ್ಲಿ ಸ್ಪರ್ಧೆ ನಡೆದಿತ್ತು. 


ಡಿಸೆಂಬರ್ 21‌ ರಿಂದ 23 ರವರೆಗೆ ಸ್ರ‍್ಧೆಯ ಸೆಮಿ ಫೈನಲ್‌ ಮತ್ತು ಫೈನಲ್‌ ಹಂತದ ಚಟುವಟಿಕೆಗಳು ನಡೆದಿದ್ದವು. ಸೆಮಿ ಫೈನಲ್‌ ಮತ್ತು ಫೈನಲ್‌ಗೂ ಮೊದಲು ದೇಶದಾದ್ಯಂತ ಮೂರು ತಿಂಗಳು ಆಡಿಷನ್‌ ನಡೆದಿತ್ತು. ಆಡಿಷನ್‌ನಲ್ಲಿ ಆಯ್ಕೆಯಾದವರಿಗೆ ಸೆಮಿಫೈನಲ್‌ನಲ್ಲಿ ಸ್ರ‍್ಧಿಸಲು ಅವಕಾಶ ನೀಡಲಾಗುತ್ತದೆ. ಪೂನಾ, ಬೆಂಗಳೂರು, ಮುಂಬೈ, ದೆಹಲಿ, ಅರ‍್ತಲಾ ಸೇರಿದಂತೆ 25 ನಗರಗಳಲ್ಲಿ ಆಡಿಷನ್‌ ನಡೆದಿತ್ತು.ಮೊದಲ ವಿನ್ನರ್‌ಗೆ ರೂ. 28 ಲಕ್ಷವರೆಗೆ ಬಹುಮಾನ ನೀಡಲಾಯಿತು. ಇದರಲ್ಲಿ ರೂ.10 ಲಕ್ಷ ನಗದು ಹಾಗೂ ಕೆಐಐಟಿ ವಿಶ್ವವಿದ್ಯಾಲಯದಲ್ಲಿ ಯಾವುದೇ ವಿಷಯ ಅಧ್ಯಯನಕ್ಕೆ ಶೇ 100 ರಷ್ಟು ಶೈಕ್ಷಣಿಕ ಶುಲ್ಕ ವಿನಾಯಿತಿ ಸೇರಿದೆ. ಮೊದಲನೇ ರನ್ನರ್‌ ಅಪ್‌ಗೆ ರೂ. 14 ಲಕ್ಷವರೆಗೆ ಗೂ ಎರಡನೇ ರನ್ನರ್‌ ಅಪ್‌ ಗೆ ರೂ. 12 ಲಕ್ಷವರೆಗೆ ಬಹುಮಾನ ನೀಡಲಾಯಿತು. 


ಇತರ ಹಲವು ಸ್ರ‍್ಧಿಗಳಿಗೆ ವಿಶೇಷ ವಿಭಾಗದಲ್ಲಿ ಬಹುಮಾನ ನೀಡಲಾಯಿತು. ಸಮೃದ್ಧಿ ತ್ರಿಪಾಠಿ ಅವರು, ಮಿಸ್‌ ರ‍್ವಶಿ ವಿಭಾಗದಲ್ಲಿ ಬಹುಮಾನವನ್ನೂ ಪಡೆದರು. ಕೆಐಐಟಿ ಮತ್ತು ಕೆಐಎಸ್‌ಎಸ್ ಸಂಸ್ಥಾಪಕರಾದ ಡಾ. ಅಚ್ಯುತ ಸಮಂತ, ಪೋಷಕರಾದ ಮಲೇ ಮೊಹಪಾತ್ರ ಮತ್ತು ಇತರ ಅತಿಥಿಗಳು ವಿಜೇತರಿಗೆ ಕಿರೀಟ ಧಾರಣೆ ಮಾಡಿದರು. ಈ ಅದ್ದೂರಿ ಕರ‍್ಯಕ್ರಮದಲ್ಲಿ ಫೆಮಿನಾ ಮಿಸ್ ಇಂಡಿಯಾ ರ‍್ಲ್ಡ್ 2024 ರ ನಿಕಿತಾ ಪರ‍್ವಾಲ್, 1 ನೇ ರನ್ನರ್-ಅಪ್ ರೇಖಾ ಪಾಂಡೆ ಹಾಗೂ 2023 ರ ಫೆಮಿನಾ ಮಿಸ್ ಇಂಡಿಯಾ ರ‍್ಲ್ಡ್ ನಂದಿನಿ ಗುಪ್ತಾ ಅವರು ಹಾಜರಿದ್ದರು.2001 ರಲ್ಲಿ ಸಣ್ಣ ಮಟ್ಟದಲ್ಲಿ ಆರಂಭವಾದ ಕೆಐಐಟಿ ನಾನ್ಹಿಪಾರಿ ಕಳೆದ 25 ರ‍್ಷಗಳಲ್ಲಿ ರಾಷ್ಟ್ರೀಯ ಮಟ್ಟದ 'ಲಿಟಲ್ ಮಿಸ್ ಇಂಡಿಯಾ' ಸ್ರ‍್ಧೆಯಾಗಿ ಬೆಳೆದಿದೆ. ಈ ಸ್ರ‍್ಧೆಯು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಹಲವಾರು ಸೌಂರ‍್ಯ ಸ್ರ‍್ಧೆಗಳಲ್ಲಿ ಭಾಗವಹಿಸುವವರಿಗೆ ಹೊಸದಾರಿಯನ್ನು ಒದಗಿಸಿದೆ. ಇಷ್ಟು ರ‍್ಷಗಳಲ್ಲಿ ನಡೆದ ಸ್ರ‍್ಧೆಗಳಲ್ಲಿ ನೂರಾರು ಸ್ರ‍್ಧಿಗಳಿಗೆ ವೇದಿಕೆ ಒದಗಿಸಿದೆ. 


25 ರ‍್ಷಗಳಲ್ಲಿ 15 ಸಾವಿರ ಭಾಗವಹಿಸುವಿಕೆ

ಕೆಐಐಟಿ ನಾನ್ಹಿಪಾರಿಯ ಹೇಗೆ ಅತ್ಯುತ್ತಮ ವೇದಿಕೆಯಾಗಿ ಹೆಸರು ಗಳಿಸಿದೆ ಎಂಬುದು ಇದರಲ್ಲಿ ಭಾಗವಹಿಸಿರುವ ಜನರ ಅಂಕಿ- ಸಂಖ್ಯೆಯೇ ಹೇಳುತ್ತದೆ. ಕಳೆದ 25 ರ‍್ಷಗಳಲ್ಲಿ 15 ಸಾವಿರ ಜನರು ಬೇರೆ ಬೇರೆ ರೀತಿ ಸ್ರ‍್ಧೆಗಳಲ್ಲಿ ಭಾಗವಹಿಸಿದ್ದಾರೆ. ಈ ರ‍್ಷವೊಂದರಲ್ಲೇ 5,000 ಕ್ಕೂ ಹೆಚ್ಚು ನೋಂದಣಿಯಾಗಿದ್ದವು.

Post a Comment

0Comments

Post a Comment (0)