ಇಂದ್ರಪ್ರಸ್ಥ ನಗರಿಯಲಿ ‘ಸನಾತನ ರಾಷ್ಟ್ರ’ದ ಸಿಂಹಗರ್ಜನೆ !

varthajala
0

 ದೆಹಲಿಯ ‘ಭಾರತ ಮಂಡಪಮ್’ನಲ್ಲಿ ಸನಾತನ ಸಂಸ್ಥೆಯು ಆಯೋಜಿಸಿದ್ದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ಕೇವಲ ಒಂದು ಸಮಾರಂಭವಾಗಿರಲಿಲ್ಲ, ಬದಲಿಗೆ ಅದು ಸುಪ್ತ ಹಿಂದೂ ಸಮಾಜದಲ್ಲಿ ಶೌರ್ಯದ ಕಿಚ್ಚನ್ನು ಹಚ್ಚಿದ ಐತಿಹಾಸಿಕ ಘಟನೆಯಾಗಿತ್ತು. ಡಿಸೆಂಬರ್ 13 ಮತ್ತು 14 ರಂದು ದೇಶದ ರಾಜಧಾನಿಯಲ್ಲಿ 3,000 ಕ್ಕೂ ಹೆಚ್ಚು ಹಿಂದೂ ಧರ್ಮಾಭಿಮಾನಿಗಳು ಮತ್ತು 800 ಕ್ಕೂ ಹೆಚ್ಚು ಸಂಘಟನೆಗಳ ಪದಾಧಿಕಾರಿಗಳು ಒಟ್ಟುಗೂಡಿದ್ದು ಸನಾತನ ಸಂಸ್ಕೃತಿಯ ಪುನರುತ್ಥಾನದ ಸ್ಪಷ್ಟ ಸಂಕೇತವಾಗಿದೆ. ಹಿಂದೂಗಳ ಮನಸ್ಸಿನಲ್ಲಿ ಮೂಡಿದ ‘ಸ್ವಸಂರಕ್ಷಣೆ ಮತ್ತು ರಾಷ್ಟ್ರರಕ್ಷಣೆ’ಯ ಚೈತನ್ಯವೇ ಈ ಮಹೋತ್ಸವದ ದೊಡ್ಡ ಯಶಸ್ಸು! 

ಶೌರ್ಯದ ಜಾಗೃತಿ! ಹಿಂದೂ ಸಮಾಜವು ಕೇವಲ ಹಬ್ಬ-ಹರಿದಿನಗಳ ಆನಂದದಲ್ಲಿ ಮುಳುಗಿರುವ ಈ ಸಮಯದಲ್ಲಿ, ವಿಶ್ವ ಹಿಂದೂ ಪರಿಷತ್ತಿನ ಸ್ವಾಮಿ ವಿಜ್ಞಾನಾನಂದ ಯವರು  ನೀಡಿದ ಎಚ್ಚರಿಕೆ ಕಣ್ಣು ತೆರೆಸುವಂತಿದೆ. ಕೇವಲ ಹೋಳಿ-ದೀಪಾವಳಿಯಲ್ಲಿ ಮಗ್ನರಾಗದೆ, ಉಳಿದ ಪ್ರದೇಶಗಳನ್ನು ಗೆದ್ದು ಭಾರತವನ್ನು ‘ಪ್ರಜಾಸತ್ತಾತ್ಮಕ ಹಿಂದೂ ರಾಷ್ಟ್ರ’ವನ್ನಾಗಿ ಮಾಡುವ ಗುರಿ ಹೊಂದುವುದು ಇಂದಿನ ಅಗತ್ಯವಾಗಿದೆ.ರಾಷ್ಟ್ರಮಂತ್ರ 'ವಂದೇ ಮಾತರಂ'ನ 150ನೇ ವರ್ಷದ ಅಂಗವಾಗಿ ಏರ್ಪಡಿಸಲಾಗಿದ್ದ ಪ್ರದರ್ಶನವು ಯುವ ಪೀಳಿಗೆಗೆ ಕ್ರಾಂತಿಕಾರಿಗಳ ತ್ಯಾಗವನ್ನು ಸ್ಮರಿಸುವಂತೆ ಮಾಡಿತು. ಅಫ್ಜಲ್ ಖಾನ್ ವಧೆಯ ಜೀವಂತ ಚಿತ್ರಣ ಮತ್ತು ಶಿವಕಾಲೀನ ಯುದ್ಧತಂತ್ರಗಳ ಪ್ರಾತ್ಯಕ್ಷಿಕೆಗಳು ಶತ್ರುಗಳಿಗೆ ತಕ್ಕ ಉತ್ತರ ನೀಡುವ ಮಾನಸಿಕ ಸಿದ್ಧತೆಯನ್ನು ಪ್ರೇರೇಪಿಸಿದವು. ಶ್ರೀ. ಕಪಿಲ್ ಮಿಶ್ರಾ ಅವರು ಹೇಳಿದಂತೆ, "ಎಷ್ಟೇ ಜಿಹಾದಿ ಭಯೋತ್ಪಾದಕರು ಹುಟ್ಟಿದರೂ, ಅವರನ್ನು ಹೂತುಹಾಕಲು ಈಗ ಮನೆ-ಮನೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ತಯಾರಾಗಲಿದ್ದಾರೆ". ಈ ನಿಮಿತ್ತ ದೆಹಲಿಯಲ್ಲಿ ಕಾಯಂ ‘ಶಿವಕಾಲೀನ ಶಸ್ತ್ರಾಸ್ತ್ರ ಸಂಗ್ರಹಾಲಯ’ ಸ್ಥಾಪಿಸುವುದಾಗಿ ಮಿಶ್ರಾ ಅವರು ಭರವಸೆ ನೀಡಿದರು.

ಆಂತರಿಕ ಶತ್ರುಗಳ ಸವಾಲು ಮತ್ತು ಭಕ್ತಿಯ ಬಲ! ‘ರಾ’ (RAW) ಮಾಜಿ ಅಧಿಕಾರಿ ಕರ್ನಲ್ ಆರ್.ಎಸ್.ಎನ್. ಸಿಂಗ್ ಅವರು ಮಂಡಿಸಿದ ‘ದೇಶದೊಳಗಿನ ಪಾಕಿಸ್ತಾನ’ ಎಂಬ ವಿಷಯವು ಅತ್ಯಂತ ಗಂಭೀರವಾಗಿದೆ. ಗಡಿಯ ಶತ್ರುಗಳಿಗಿಂತ ಹೆಚ್ಚು ಘಾತಕವಾಗಿರುವ ಈ ಆಂತರಿಕ ವೈಚಾರಿಕ ಶತ್ರುಗಳನ್ನು ಗುರುತಿಸಿ ಅವರಿಗೆ ‘ಗಜ್ವಾ-ಎ-ಹಿಂದ್’ ಭಾಷೆಯಲ್ಲೇ ಉತ್ತರ ನೀಡುವುದು ಅಗತ್ಯವಾಗಿದೆ. ಆದರೆ, ಇದನ್ನು ಮಾಡಲು ಕೇವಲ ಭೌತಿಕ ಶಕ್ತಿ ಸಾಕಾಗುವುದಿಲ್ಲ.

ಹಿಂದೂ ಜನಜಾಗೃತಿ ಸಮಿತಿಯ ಸದ್ಗುರು ನೀಲೇಶ್ ಸಿಂಗ್ಬಾಳ್ ಅವರ ಪ್ರಕಾರ, ಭಗವಂತನ ‘ನ ಮೇ ಭಕ್ತಃ ಪ್ರಣಶ್ಯತಿ’ (ನನ್ನ ಭಕ್ತನು ಎಂದಿಗೂ ನಾಶವಾಗುವುದಿಲ್ಲ) ಎಂಬ ವಚನವನ್ನು ಸಾರ್ಥಕಗೊಳಿಸಲು ನಾವು ಈಶ್ವರನ ಭಕ್ತರಾಗಬೇಕು. ಸಾಧನೆಯ ಬಲವಿದ್ದಾಗ ಮಾತ್ರ ನಾವು ಈ ಭೀಕರ ಆಪತ್ಕಾಲವನ್ನು ಜಯಿಸಲು ಸಾಧ್ಯ.


ಆದರ್ಶ ರಾಮರಾಜ್ಯದತ್ತ ಪಯಣ! ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಪುನಃಸ್ಥಾಪನೆಯ ನಂತರ ಭಾರತದ ಸಾಂಸ್ಕೃತಿಕ ಪುನರುತ್ಥಾನದ ಕಾಲಚಕ್ರವು ವೇಗವಾಗಿ ಚಲಿಸುತ್ತಿದೆ. "ವಿಶ್ವವು ಈಗ ಶಾಶ್ವತ ಶಾಂತಿಗಾಗಿ ಸನಾತನ ಧರ್ಮದತ್ತ ಆಶಯದಿಂದ ನೋಡುತ್ತಿದೆ. ಮುಂಬರುವ ಕಾಲವು ಸನಾತನ ಸಂಸ್ಕೃತಿಯದ್ದೇ ಆಗಿದೆ. 

ಆದ್ದರಿಂದ ಈ ಹಾದಿಯಲ್ಲಿ ಅಡ್ಡಿಪಡಿಸುವ ಅಧರ್ಮೀಯ ಪ್ರವೃತ್ತಿಗಳನ್ನು ಸಹಿಸಲಾಗುವುದಿಲ್ಲ" ಎಂದು ಕೇಂದ್ರ ಸಚಿವ ಶ್ರೀ. ಗಜೇಂದ್ರ ಸಿಂಗ್ ಶೇಖಾವತ್ ಅವರು ಪ್ರಖರ ಎಚ್ಚರಿಕೆ ನೀಡಿದರು. ಕುರುಕ್ಷೇತ್ರದಲ್ಲಿ ಅಧರ್ಮದ ನಾಶಕ್ಕಾಗಿ ಯೋಗೇಶ್ವರ ಶ್ರೀಕೃಷ್ಣನು ‘ಪಾಂಚಜನ್ಯ’ ಶಂಖವನ್ನು ಮೊಳಗಿಸಿದಂತೆ, ದೆಹಲಿಯ ಈ ಮಹೋತ್ಸವವು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಮೊಳಗಿದ ‘ಪಾಂಚಜನ್ಯ’ ಶಂಖನಾದವಾಗಿದೆ!
ಹಿಂದುತ್ವದ ಹುಂಕಾರ! ಈ ಮಹೋತ್ಸವದ ದೊಡ್ಡ ಸಾಧನೆಯೆಂದರೆ ‘ಹಿಂದುತ್ವದ ಹುಂಕಾರ’! ನೂರಕ್ಕೂ ಹೆಚ್ಚು ಮಾಧ್ಯಮಗಳು ಇದನ್ನು ವರದಿ ಮಾಡಿರುವುದು ಹಿಂದೂಗಳ ಹೆಚ್ಚುತ್ತಿರುವ ಪ್ರಭಾವದ ಲಕ್ಷಣವಾಗಿದೆ.

 ಈ ಮಹೋತ್ಸವವು ಕೇವಲ ಧರ್ಮಾಭಿಮಾನಿಗಳಿಗಷ್ಟೇ ಅಲ್ಲದೆ, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ನಾಗರಿಕರಿಗೂ ಸ್ವಧರ್ಮ ರಕ್ಷಣೆ ಮತ್ತು ರಾಷ್ಟ್ರಭಕ್ತಿಯ ದಿಶೆಯನ್ನು ನೀಡಿದೆ. ಈಗ ಹಿಂದೂಗಳು ಕೇವಲ ಸಂಘಟಿತರಾಗಿ ನಿಲ್ಲುವುದಲ್ಲ, ಬದಲಿಗೆ ಆದರ್ಶ ರಾಮರಾಜ್ಯದ ಸ್ಥಾಪನೆಗೆ ಕಟಿಬದ್ಧರಾಗಬೇಕಿದೆ. ಈ ಮಹೋತ್ಸವವು ಮುಂಬರುವ ‘ಸನಾತನ ಯುಗ’ದ ಮುಂಜಾವಿನಂತಿದೆ. ಪ್ರತಿಯೊಬ್ಬ ಹಿಂದೂ ಧರ್ಮಾಚರಣಿ ಮತ್ತು ರಾಷ್ಟ್ರರಕ್ಷಕನಾದಾಗ ಮಾತ್ರ ಈ ಮುಂಜಾವು ಸೂರ್ಯೋದಯವಾಗಿ ಮಾರ್ಪಡುತ್ತದೆ!

Post a Comment

0Comments

Post a Comment (0)