ಬೆಳಗಾವಿ / ಬೆಂಗಳೂರು: ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ-2025 ನ್ನು ವಿಧಾನ ಪರಿಷತ್ ನಲ್ಲಿ ಅಂಗೀಕರಿಸಲಾಯಿತು.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ, 2007 (2007ರ ಕರ್ನಾಟಕ ಅಧಿನಿಯಮ 21)ನ್ನು ಖಾಸಗಿ ವೈದ್ಯಕೀಯ ಸಂಸ್ಥೆ'ಯ ಪರಿಭಾμÉಯೊಳಗೆ 'ಮಾನಸಿಕ ಆರೋಗ್ಯ ಸಂಸ್ಥೆ'ಯನ್ನು ಸೇರಿಸಲು,
ಭಾರತೀಯ ವೈದ್ಯಕೀಯ ಸಂಘದಿಂದ ಒಬ್ಬ ಸದಸ್ಯ ಮತ್ತು ನೋಂದಾಯಿತ ವೈದ್ಯಕೀಯ ಸಂಸ್ಥೆ ಅಥವಾ ಆಯುμï ವೈದ್ಯಕೀಯ ವೃತ್ತಿನಿರತರ ಸಂಘವನ್ನು ಪ್ರತಿನಿಧಿಸುವ ಒಬ್ಬ ಸದಸ್ಯನನ್ನು ನೋಂದಣಿ ಮತ್ತು ಕುಂದುಕೊರತೆ ಪರಿಹಾರ ಪ್ರಾಧಿಕಾರಕ್ಕೆ ಸದಸ್ಯನಾಗಿ ನಾಮನಿರ್ದೇಶಿಸಲು, ಕಾರ್ಯವಿಧಾನಗಳನ್ನು ಉಪಬಂಧಿಸುವುದಕ್ಕಾಗಿ, ನೋಂದಣಿ ಮತ್ತು ಕುಂದುಕೊರತೆ ಪರಿಹಾರ ಪ್ರಾಧಿಕಾರವು ತಾತ್ಕಾಲಿಕ ನೋಂದಣಿ ಪ್ರಮಾಣ ಪತ್ರವನ್ನು ಮಂಜೂರು ಮಾಡಲು ಅಥವಾ ನವೀಕರಿಸಲು, ಅವಧಿ ಮುಕ್ತಾಯಗೊಂಡ ತಾತ್ಕಾಲಿಕವಾಗಿ ನೋಂದಾಯಿಸಿದ ಖಾಸಗಿ ವೈದ್ಯಕೀಯ ಸಂಸ್ಥೆಗಳ ಪಟ್ಟಿಯನ್ನು ಪ್ರಕಟಿಸಲು, ಖಾಸಗಿ ವೈದ್ಯಕೀಯ ಸಂಸ್ಥೆಗಳು ಶಾಶ್ವತ ನೋಂದಣಿ ಅಥವಾ ನವೀಕರಣಕ್ಕಾಗಿ ಅರ್ಜಿ ಸಲ್ಲಿಸುವುದು ಹಾಗೂ ಶಾಶ್ವತ ನೋಂದಣಿ ಅಥವಾ ನೋಂದಣಿ ನವೀಕರಣವನ್ನು ಮಂಜೂರು ಮಾಡುವುದಕ್ಕಾಗಿ ಪೂರ್ವಾಪೇಕ್ಷಿತಗಳನ್ನು (pre-requisites) ನಿಯಮಿಸುವುದು ಮತ್ತು ಅರ್ಜಿಗಳ ವಿಲೇವಾರಿಗಾಗಿ ಕಾರ್ಯವಿಧಾನವನ್ನು ನಿಯಮಿಸಲು, ಇತರೆ ಕೆಲವು ಅನುಷಂಗಿಕ ತಿದ್ದುಪಡಿಗಳನ್ನು ಸಹ ಮಾಡಲು, ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಿದ್ದು, ಈ ವಿಧೇಯಕವನ್ನು ಪರ್ಯಾಲೋಚಿಸಿ, ಅಂಗೀಕರಿಸುವಂತೆ ಕೋರಿದರು.ವಿಧೇಯಕದ ಬಗ್ಗೆ ಶಾಸಕರಾದ ಐವನ್ ಡಿಸೋಜ, ಭೋಜೇಗೌಡ, ಎಸ್.ವಿ.ಸಂಕನೂರ್, ಮಾತನಾಡಿದರು.ವಿಧೇಯಕವನ್ನು ಧ್ವನಿಮತದಿಂದ ಅಂಗೀಕರಿಸಲಾಯಿ