ಬೆಳಗಾವಿ / ಬೆಂಗಳೂರು : ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಅನುಸೂಚಿತ ಜಾತಿಗಳ (ಉಪ ವರ್ಗಿಕರಣ) ವಿಧೇಯಕ, 2025 ನ್ನು ವಿಧಾನ ಪರಿಷತ್ ನಲ್ಲಿ ಅಂಗೀಕರಿಸಲಾಯಿತು.ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಅವರು, ಈ ವಿಧೇಯಕವನ್ನು ಪರ್ಯಾಲೋಚಿಸಿ, ಅಂಗಿಕರಿಸುವಂತೆ ಕೋರಿದರು.
ವಿಧೇಯಕದ ಬಗ್ಗೆ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ, ರವಿಕುಮಾರ್ ಶಾಸಕರಾದ ಜಕ್ಕಪ್ಪನವರ್, ಶಾಂತರಾಮ ಬುಡ್ನ ಸಿದ್ದಿ, ಶಿವಕುಮಾರ್, ರಮೇಶ್ ಬಾಬು, ಬಲ್ಕಿಸ್ ಭಾನು, ಹೇಮಲತಾ ನಾಯಕ್ ಮಾತನಾಡಿದರು. ವಿಧೇಯಕವನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು.