ಬೆಂಗಳೂರು: ದಕ್ಷಿಣ ಭಾರತದ ರಾಜ್ಯಗಳ ಮೇಲೆ ಕೇಂದ್ರ ಸರ್ಕಾರ ಗದಾ ಪ್ರಹಾರ ಮಾಡುತ್ತಿರುವ ವಿಷಯ ತಮಗೂ ಸಹ ಗೊತ್ತಿದ್ದು, ಮುಂದೆ ದೇಶದಲ್ಲಿ ಜನಗಣತಿ ನಡೆಯಲಿದ್ದು, ಉತ್ತರ ಭಾರತದ ಜನಸಂಖ್ಯೆ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಅದರಂತೆ ಜನಸಂಖ್ಯೆಗೆ ಅನುಗುಣವಾಗಿ ಲೋಕಸಭೆಯಲ್ಲಿ ದಕ್ಷಿಣ ರಾಜ್ಯದ ಪ್ರತಿನಿಧಿಗಳ ಸಂಖ್ಯೆಗಿಂತ ಉತ್ತರ ಭಾರತದ ಲೋಕಸಭಾ ಸದಸ್ಯರ ಸಂಖ್ಯೆ ದೊಡ್ಡಮಟ್ಟಕ್ಕೆ ಏರಿಕೆಯಾಗಿರುತ್ತದೆ. ಈ ಪಕ್ಷಪಾತ ನಡೆದರೆ ದಕ್ಷಿಣ ಭಾರತದ ರಾಜ್ಯಗಳಿಗೆ ದೊಡ್ಡ ಅನ್ಯಾಯವಾಗುವ ಸಾದ್ಯತೆ ಇರುತ್ತದೆ.
ಈ ಹಿನ್ನೆಲೆಯಲ್ಲಿ, ಈ ಸಭೆ ಬಹು ಮಹತ್ವದಾಯಕವಾಗಿರುವುದರಿಂದ, ತಾವು ಈ ಕಾರ್ಯಕ್ರಮಕ್ಕೆ ಬಂದು ಉದ್ಘಾಟನೆ ಮಾಡಬೇಕೆಂದು ತಮ್ಮಲ್ಲಿ ಕೋರುತ್ತೇನೆ. ಈಗಾಗಲೆ ತಾವು ಉದ್ಘಾಟನೆಗೆ ಒಪ್ಪಿಗೆ ಸೂಚಿಸಿರುವುದರಿಂದ, ಅಧಿಕೃತ ಆಮಂತ್ರಣ ಪತ್ರವನ್ನು ತಲುಪಿಸಲಾಗುವುದು ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ (ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಕ್ಯಿಕ ಇಲಾಖೆ) ಉಪಾಧ್ಯಕ್ಷರಾದ ಬಿ.ಆರ್.ಪಾಟೀಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.