ಬೆಂಗಳೂರು: ರಾಜ್ಯ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ – ಕರ್ನಾಟಕ ವತಿಯಿಂದ “ವಿಶ್ವ ಅಂಗವಿಕಲರ ದಿನಾಚರಣೆ ಮತ್ತು ಪರ್ಪಲ್ ಫೆಸ್ಟ್ 2026 ರ ಜನವರಿ ಮಾಹೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.2025 ನೇ ಡಿಸೆಂಬರ್ 20 ರಂದು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ಆಯುಕ್ತರು ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರ ಇವರ ಅಧ್ಯಕ್ಷತೆಯಲ್ಲಿ ನಡೆದ ವರ್ಚುಯಲ್ ಸಭೆಯಲ್ಲಿ ಜನವರಿ-2026 ರಲ್ಲಿ ಅಯೋಜಿಸಲಾಗುತ್ತಿರುವ ಈ ಎರಡೂ ಕಾರ್ಯಕ್ರಮಗಳ ಯಶಸ್ಸಿಗೆ ಎಲ್ಲಾ ಇಲಾಖೆ, ಸಂಸ್ಥೆಗಳ ಸಂಪೂರ್ಣ ಸಹಕಾರ ಅತ್ಯಂತ ಅಗತ್ಯವಾಗಿದೆ. ಕಾರ್ಯಕ್ರಮದ ವಿವಿಧ ಉದ್ದೇಶಗಳಲ್ಲಿ ಕನಿಷ್ಠ ಒಂದು ವಿಷಯದ ಅನುμÁ್ಠನದ ಸಂಪೂರ್ಣ ಜವಾಬ್ದಾರಿಯನ್ನು ತಮ್ಮ ಸಂಸ್ಥೆಯ ವತಿಯಿಂದ ವಹಿಸಿಕೊಂಡಲ್ಲಿ ಮಾತ್ರ ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಯಶಸ್ವಿಗೊಳಿಸಲು ಸಾಧ್ಯವಾಗುತ್ತದೆ.ಪರ್ಪಲ್ ಫೆಸ್ಟ್ ಕಾರ್ಯಕ್ರಮದ ವಿಷಯ ಸೂಚಿಯನ್ನು ತಿಳಿಸಿದ್ದು, ಈ ನಿಟ್ಟಿನಲ್ಲಿ ತಾವು ಕೈಗೊಳ್ಳಬಹುದಾದ ವಿಷಯದ ಬಗ್ಗೆ ಮಾಹಿತಿಯನ್ನು ನಮೂನೆಯಲ್ಲಿ ಭರ್ತಿ ಮಾಡಿ 23 ಡಿಸೆಂಬರ್ 2025ರ ಒಳಗಾಗಿ scdkarnataka@gmail.com ಅಥವಾ dirdwdscka@gmail.com ವಿಳಾಸಕ್ಕೆ ಕಳುಹಿಸಬೇಕು.
2026 ರ ಜನವರಿ ಮಾಹೆಯಲ್ಲಿ “ವಿಶ್ವ ಅಂಗವಿಕಲರ ದಿನಾಚರಣೆ ಮತ್ತು ಪರ್ಪಲ್ ಫೆಸ್ಟ್
December 22, 2025
0
ಪರ್ಪಲ್ ಫೆಸ್ಟ್ ಕರ್ನಾಟಕ: ಪ್ರಮುಖ ಉದ್ದೇಶಗಳು ಮತ್ತು ಕಾರ್ಯಸೂಚಿಗಳು:ಕರ್ನಾಟಕ ರಾಜ್ಯದಲ್ಲಿ ಪ್ರಮುಖ ಉದ್ಧೇಶಗಳೊಂದಿಗೆ ‘ಪರ್ಪಲ್ ಪ್ರೆಸ್ಟ್’ ಉತ್ಸವವನ್ನು ಆಚರಿಸುವ ಮೂಲಕ, ನೇರವಾಗಿ ವಿಕಲಚೇತನ ವ್ಯಕ್ತಿಗಳಿಗೆ ಈ ಕಾರ್ಯಕ್ರಮದ ಪ್ರಯೋಜನಗಳನ್ನು ತಲುಪಿಸುವುದು ನಮ್ಮ ಮುಖ್ಯ ಗುರಿಯಾಗಿದೆ.
ಉದ್ಯೋಗಾವಕಾಶಗಳು: ರಾಜ್ಯದ ಖಾಸಗಿ ಸಂಸ್ಥೆಗಳಲ್ಲಿ ವಿಕಲಚೇತನರಿಗೆ ಕನಿಷ್ಠ 1 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು,
ಉನ್ನತ ಶಿಕ್ಷಣ: ಅಡೆತಡೆಗಳನ್ನು ಭೇದಿಸುವುದು ಮತ್ತು ಭವಿಷ್ಯವನ್ನು ರೂಪಿಸುವುದು. ವಿಕಲಚೇತನ ವ್ಯಕ್ತಿಗಳಿಗೆ ಗುಣಮಟ್ಟದ ಹಾಗೂ ಸುಲಭವಾಗಿ ಲಭ್ಯವಾಗುವ ಉನ್ನತ ಶಿಕ್ಷಣವನ್ನು ಖಚಿತಪಡಿಸುವುದು.
ಸಮಾನ ಅವಕಾಶಗಳ ನೀತಿ: ಸಮಾನ ಅವಕಾಶಗಳ ನೀತಿಗಳ ರೂಪಿಸುವಿಕೆ ಮತ್ತು ಅನುμÁ್ಠನದ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವುದು.
ಅಂತರ್ಗತ ಸಿ.ಎಸ್.ಆರ್: ವಿಕಲಚೇತನರ ಸಬಲೀಕರಣಕ್ಕಾಗಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಉಪಕ್ರಮಗಳನ್ನು ಉತ್ತೇಜಿಸುವುದು.
ಕಾಣದ ಅಂಗವೈಕಲ್ಯಗಳು: ‘ಅದೃಶ್ಯ’ ಅಥವಾ ಕಾಣದ ಅಂಗವೈಕಲ್ಯಗಳಿಗೆ ಸಂಬಂಧಿಸಿದ ವೈದ್ಯಕೀಯ ವಿಷಯಗಳು ಮತ್ತು ಸವಾಲುಗಳ ಬಗ್ಗೆ ಸಂವಾದ ಹಾಗೂ ವಿಚಾರಗೋಷ್ಠಿಗಳನ್ನು ಆಯೋಜಿಸುವುದು.
ಪುನರ್ವಸತಿ ಮತ್ತು ಆರೈಕೆದಾರರ ಬೆಂಬಲ: ವಿಕಲಚೇತನರ ಪುನರ್ವಸತಿ ಚೌಕಟ್ಟನ್ನು ಮರುರೂಪಿಸುವುದು ಮತ್ತು ಅವರ ಆರೈಕೆದಾರರ ಯೋಗಕ್ಷೇಮವನ್ನು ಖಚಿತಪಡಿಸುವುದು.
ಸಾರ್ವಜನಿಕ ಜಾಗೃತಿ: ವಿಕಲಚೇತನರ ಹಕ್ಕುಗಳು ಮತ್ತು ಒಳಗೊಳ್ಳುವಿಕೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ವ್ಯಾಪಕ ಅಭಿಯಾನಗಳನ್ನು ನಡೆಸುವುದು.
ಕ್ರೀಡೆ ಮತ್ತು ಅಥ್ಲೆಟಿಕ್ಸ್: ವಿಕಲಚೇತನರಿಗಾಗಿ ಪ್ಯಾರಾ-ಸ್ಪೋಟ್ರ್ಸ್ ಸ್ಪರ್ಧೆಗಳು ಮತ್ತು ದೇಶೀಯ ಕ್ರೀಡೆಗಳನ್ನು ಏರ್ಪಡಿಸುವುದು.
ಸಾಂಸ್ಕøತಿಕ ಕಾರ್ಯಕ್ರಮಗಳು: ಸಮುದಾಯದ ಪ್ರತಿಭೆಗಳನ್ನು ಪ್ರದರ್ಶಿಸಲು ಅಂತರ್ಗತ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
ಸಹಾಯಕ ತಂತ್ರಜ್ಞಾನ: ವಿಕಲಚೇತನರಿಗೆ ಅಗತ್ಯವಿರುವ ಆಧುನಿಕ ಸಾಧನ ಸಲಕರಣೆಗಳು, ಸಾಫ್ಟ್‍ವೇರ್ ಮತ್ತು ತಾಂತ್ರಿಕ ಪರಿಹಾರಗಳ ಬಗ್ಗೆ ಸಮಾಲೋಚನೆ ಹಾಗೂ ಪ್ರದರ್ಶನಗಳನ್ನು ಏರ್ಪಡಿಸುವುದು.
ಸಾರಿಗೆ ಮತ್ತು ವಸತಿ ವ್ಯವಸ್ಥೆ: ಭಾಗವಹಿಸುವವರಿಗೆ ಸುಗಮ ಸಾರಿಗೆ ಮತ್ತು ತಂಗುವಿಕೆಯ ವ್ಯವಸ್ಥೆಯನ್ನು ನಿರ್ವಹಿಸುವುದು.
ಊಟದ ವ್ಯವಸ್ಥೆ: ಕಾರ್ಯಕ್ರಮದ ಅವಧಿಯಲ್ಲಿ ಗುಣಮಟ್ಟದ ಆಹಾರ ಮತ್ತು ಪಾನೀಯಗಳ ವ್ಯವಸ್ಥೆಯನ್ನು ಸಂಯೋಜಿಸುವುದು.
ಸ್ವಯಂಸೇವಕರ ನಿರ್ವಹಣೆ: ಉತ್ಸವದ ಯಶಸ್ಸಿಗೆ ಬೆಂಬಲ ನೀಡಲು ಸಮರ್ಪಿತ ಸ್ವಯಂಸೇವಕರ ತಂಡವನ್ನು ಸಜ್ಜುಗೊಳಿಸುವುದು.
ಇತರ ವಿಷಯಗಳು: ಕಾರ್ಯಕ್ರಮದ ಯಶಸ್ಸಿಗಾಗಿ ತಾವು ಪ್ರಸ್ತಾವಿಸಲು ಇಚ್ಛಿಸುವ ಯಾವುದೇ ಇತರ ನವೀನ ವಿಷಯಗಳು ಅಥವಾ ಉಪಕ್ರಮಗಳು.