ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಸ್ಥಗಿತಗೊಂಡಿರುವ / ಹಂಚಿಕೆಯಾಗದೇ ಇರುವ 569 ಸನ್ನದುಗಳನ್ನು ಎಲೆಕ್ಟ್ರಾನಿಕ್ ಇ-ಹರಾಜು ಮೂಲಕ ಹಂಚಿಕೆ ಮಾಡಲು ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿರುತ್ತದೆ.ಮಾನ್ಯ ಮುಖ್ಯಮಂತ್ರಿಗಳು 2025ರ ಮಾರ್ಚ್ 7 ರಂದು 2025-26 ರ ಆಯವ್ಯಯ ಭಾಷಣದಲ್ಲಿ, ಕರ್ನಾಟಕ ಸರ್ಕಾರವು ಖಾಲಿ ಅಥವಾ ಲಭ್ಯವಿರುವ ಮದ್ಯದ ಸನ್ನದುಗಳನ್ನು ಪಾರದರ್ಶಕ ಎಲೆಕ್ಟ್ರಾನಿಕ್ ಹರಾಜಿನ ಮೂಲಕ ಹಂಚಿಕೆ ಮಾಡಲು ಹಾಗೂ ಇದರಿಂದ ಹೆಚ್ಚುವರಿ ರಾಜಸ್ಥ ಸಂಗ್ರಹಣೆಯಾಗುವ ನಿರೀಕ್ಷೆಯಿದೆ ಎಂದು ಪ್ರಸ್ತಾಪಿಸಿರುತ್ತಾರೆ.ಅಬಕಾರಿ ನಿಯಮಗಳಿಗೆ ಅಗತ್ಯ ತಿದ್ದುಪಡಿಗಳನ್ನು ತರಲಾಗಿರುತ್ತದೆ. ಸ್ಥಗಿತಗೊಂಡಿರುವ/ಹಂಚಿಕೆಯಾಗದೇ ಇರುವ ಸಿಎಲ್-2 ಮತ್ತು ಸಿಎಲ್(11-ಸಿ) ಸನ್ನದುಗಳನ್ನು ಸಿಎಲ್ (2-ಎ) ಎಂದು ಮತ್ತು ಸ್ಥಗಿತಗೊಂಡಿರುವ ಸಿಎಲ್-9 ಸನ್ನದುಗಳನ್ನು ಸಿಎಲ್ (9-ಎ) ಎಂದು ವರ್ಗೀಕರಿಸಲಾಗಿರುತ್ತದೆ. ಅದರಂತೆ, 569 ಸನ್ನದುಗಳ ಪೈಕಿ ಹರಾಜು ಪ್ರಕ್ರಿಯೆಗೆ 477 ಸಿಎಲ್(2-ಎ) ಮತ್ತು 92 ಸಿಎಲ್(9-ಎ) ಸನ್ನದುಗಳು ಲಭ್ಯವಿರುತ್ತದೆ.
ಜಿಲ್ಲಾವಾರು ಹಂಚಿಕೆ ಮಾಡಿರುವ ಸನ್ನದುಗಳ ವಿವರ: ಬಿಯುಡಿ-01- 21 ಸನ್ನದುಗಳು, ಬೀದರ್ 11, ಹಾವೇರಿ 14, ಬಿಯುಡಿ-02 28, ಹಾಸನ 13, ರಾಯಚೂರು 09, ಬಿಯುಡಿ-03 -25, ಬೆಳಗಾವಿ ಉತ್ತರ 10, ಉತ್ತರ ಕನ್ನಡ 14, ಬಿಯುಡಿ-04 -13, ತುಮಕೂರು 24, ಕೊಪ್ಪಳ 6, ದಾವಣಗೆರೆ 12, ವಿಜಯನಗರ 10, ಚಿತ್ರದುರ್ಗ 12, ಮಂಡ್ಯ 15, ಕೋಲಾರ 15, ಧರವಾಎ 19, ಕೊಡಗು 03, ಬೆಳಗಾವಿ ದಕ್ಷಿಣ 11, ಬಿಯುಡಿ-05 -14, ಚಿಕ್ಕಮಗಳೂರು 12, ಕಲಬುರಗಿ 15, ಬಿಯುಡಿ-06-26, ಶಿವಮೊಗ್ಗ 15, ಯಾದಗಿರಿ 06, ಬಿಯುಡಿ -07 22, ಬಳ್ಳಾರಿ 12, ಬಾಗÀಲಕೋಟೆ 08, ಬಿಯುಡಿ -08 -33, ಚಿಕ್ಕಬಳ್ಳಾಪುರ 11, ಮೈಸೂರು ಗ್ರಾಮಾಂತರ 14, ವಿಜಯಪುರ 08, ಚಾಮರಾಜನಗರ 07, ದಕ್ಷಿಣ ಕನ್ನಡ 30, ಗದಗ 08, ಬೆಂಗಳೂರು ಗ್ರಾಮಾಂತರ 11, ಮೈಸೂರು ನಗರ 13, ಬೆಂಗಳೂರು ದಕ್ಷಿಣ 11 ಹಾಗೂ ಉಡುಪಿ 08 ಸನ್ನದುಗಳನ್ನು ಇ-ಹರಾಜು ಮೂಲಕ ಹಂಚಿಕೆ ಮಾಡಲಾಗುವುದು.
ಸರ್ಕಾರವು ಸಿಎಲ್(2-ಎ) ಮತ್ತು ಸಿಎಲ್ (9 -ಎ) ಸನ್ನದುಗಳನ್ನು ಇ-ಹರಾಜಿನಲ್ಲಿ ಹರಾಜು ಮಾಡುವ ಸಂಬಂಧ ಪರಿಶಿಷ್ಟ ಜಾತಿ - ಎ ವರ್ಗದವರಿಗೆ ಶೇ. 6 ರಷ್ಟು, ಪರಿಶಿಷ್ಟ ಜಾತಿ - ಬಿ ವರ್ಗದವರಿಗೆ ಶೇ.6 ರಷ್ಟು, ಪರಿಶಿಷ್ಟ ಜಾತಿ - ಸಿ ವರ್ಗದವರಿಗೆ ಶೇ.5 ರಷ್ಟು ಮತ್ತು ಪರಿಶಿಷ್ಟ ಪಂಗಡ ವರ್ಗದವರಿಗೆ ಶೇ. 7 ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ.
ಇ-ಹರಾಜನ್ನು ಭಾರತ ಸರ್ಕಾರ ಸ್ವಾಮ್ಯದ ಸಂಸ್ಥೆಯಾದ ಎಂಎಸ್ ಟಿಸಿ ಲಿಮಿಟೆಡ್‍ನ ಇ-ಪೋರ್ಟಲ್‍ನಲ್ಲಿ ನಡೆಸಲಾಗುತ್ತದೆ. ಇ-ಹರಾಜಿನ ವೇಳಾಪಟ್ಟಿಯ ವಿವರಗಳು ಕರ್ನಾಟಕ ರಾಜ್ಯ ಅಬಕಾರಿ ಇಲಾಖೆಯ ಪೋರ್ಟಲ್ https://stateexcise.karnataka. gov.in ಮತ್ತು ಇ-ಹರಾಜು ವೇದಿಕೆ ಎಂಎಸ್ ಟಿಸಿ ಯ ಪೋರ್ಟಲ್ https://www.mstcecommerce.com ನಲ್ಲಿ ಲಭ್ಯವಿರುತ್ತದೆ.
ಇ-ಹರಾಜಿನ ವೇಳಾಪಟ್ಟಿ: ಅಧಿಸೂಚನೆ ಹೊರಡಿಸಿದ ದಿನಾಂಕ 2025 ರ ಡಿಸೆಂಬರ್ 19, ಬಿಡ್‍ದಾರರ ನೋಂದಣಿ ಪ್ರಾರಂಭ ಡಿಸೆಂಬರ್ 22, ಸಂಭಾವ್ಯ ಬಿಡ್‍ದಾರರಿಗೆ ಹಾಗೂ ಜಿಲ್ಲಾ ಇ- ಹರಾಜು ನೋಡಲ್ ಅಧಿಕಾರಿಗಳಿಗೆ ತರಬೇತಿ 2025 ರ ಡಿಸೆಂಬರ್ 23 ರಿಂದ 2026 ರ ಜನವರಿ 7 ರವರೆಗೆ ಹಾಗೂ ನೇರ ಹರಾಜನ್ನು 2026 ರ ಜನವರಿ 13 ರಿಂದ 20 ರವರೆಗೆ ನಡೆಯಲಿದೆ.ಬಿಡ್‍ದಾರರು ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಮತ್ತು ಅವರ ವ್ಯಾಲೆಟ್‍ನಲ್ಲಿ ಪಾವತಿಯನ್ನು ಆನ್‍ಲೈನ್‍ನಲ್ಲಿ ದೃಢೀಕರಿಸಿದ ನಂತರವೇ ಆನ್‍ಲೈನ್ ಹರಾಜಿನಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಆದ್ದರಿಂದ, ಬಿಡ್ಡÀರ್‍ಗಳು ತಾವು ಭಾಗವಹಿಸಲು ಬಯಸುವ ನಿರ್ದಿಷ್ಟ ಸ್ಲಾಟ್‍ನ ಹರಾಜು ಪ್ರಾರಂಭವಾಗುವ 48 ಗಂಟೆಗಳ ಮೊದಲು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸೂಚಿಸಲಾಗಿದೆ. ನೆಟ್‍ವರ್ಕ್ ವೈಫಲ್ಯ ಮತ್ತು ಇತರ ತಾಂತ್ರಿಕ ಸಮಸ್ಯೆಗಳ ಸಂದರ್ಭದಲ್ಲಿ ಯಾವುದೇ ವಿಳಂಬವನ್ನು ತಪ್ಪಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಬಿಡ್ಡÀರ್‍ಗಳು ಈ ಸಲಹೆಗಳನ್ನು ಪಾಲಿಸಲು ಸೂಚಿಸಲಾಗಿದೆ.
ಆದಾಗ್ಯೂ, ಬಿಡರ್‍ಗಳು ಆಯಾ ಸ್ಟಾಟ್‍ಗಳ ನಿಗದಿತ ಇ-ಹರಾಜಿಗೆ ಕೇಂದ್ರ / ರಾಜ್ಯ ಸರ್ಕಾರಿ ರಜಾದಿನಗಳನ್ನು ಹೊರತುಪಡಿಸಿ ಎರಡು ಕೆಲಸದ ದಿನಗಳ ಮೊದಲು ನೋಂದಾಯಿಸಿಕೊಳ್ಳಬಹುದು.
ಲೈವ್ ಬಿಡ್ಡಿಂಗ್ ಅನ್ನು ದಿನಾಂಕ:14-01-2026 ರಂದು ಬೆಳಿಗ್ಗೆ 10 ಗಂಟೆಗೆ ನಿಗದಿಪಡಿಸಿದ್ದರೆ, ಸಂಭಾವ್ಯ ಬಿಡ್ಡÀರ್‍ಗಳು ದಿನಾಂಕ:12-01-2026 ರಂದು ಬೆಳಿಗ್ಗೆ 10 ಗಂಟೆಯ ಮೊದಲು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ. ಲೈವ್ ಬಿಡ್ಡಿಂಗ್ ಅನ್ನು ದಿನಾಂಕ:19-01-2026 ರಂದು ಮಧ್ಯಾಹ್ನ 3 ಗಂಟೆಗೆ ನಿಗದಿಪಡಿಸಿದ್ದರೆ, ಸಂಭಾವ್ಯ ಬಿಡ್ಡರ್‍ಗಳು ದಿನಾಂಕ:16-01-2026 ರಂದು ಮಧ್ಯಾಹ್ನ 3 ಗಂಟೆಯ ಮೊದಲು ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ.
ಅಬಕಾರಿ ಆಯುಕ್ತರು ಹೊರಡಿಸುವ ತರಬೇತಿ ವೇಳಾಪಟ್ಟಿಯನ್ನು ಅಬಕಾರಿ ಇಲಾಖೆಯ ವೆಬ್‍ಸೈಟ್ https://stateexcise.karnataka. gov.in ಮತ್ತು MSTC ಇ-ಹರಾಜು ಪೋರ್ಟಲ್ https://www.mstcecommerce.com ನಲ್ಲಿ ಪ್ರಕಟಿಸಲಾಗುತ್ತದೆ.
ಆಸಕ್ತ ಬಿಡ್‍ದಾರರು ಬಿಡ್ಡಿಂಗ್ ಪ್ರಾರಂಭವಾಗುವ ಮೊದಲೇ ಒSಖಿಅ ಲಿಮಿಟೆಡ್‍ನ ಇ-ಹರಾಜು ವೇದಿಕೆ https://www.mstcecommerce.com ಪೋರ್ಟಲ್‍ನಲ್ಲಿ ಆನ್‍ಲೈನ್ ನಲ್ಲಿ ನೋಂದಾಯಿಸಿಕೊಳ್ಳಬೇಕು.
ಇ-ಹರಾಜಿನಲ್ಲಿ ಯಾವುದೇ ವ್ಯಕ್ತಿ / ಏಕವ್ಯಕ್ತಿ ಮಾಲೀಕತ್ವ ಅಥವಾ ಭಾರತದ ಕಾನೂನುಗಳ ಅಡಿಯಲ್ಲಿ ನೋಂದಾಯಿಸಲಾದ ಟ್ರಸ್ಟ್ / ಸೊಸೈಟಿ / ಪಾಲುದಾರಿಕೆ ಸಂಸ್ಥೆ / ಸೀಮಿತ ಪಾಲುದಾರಿಕೆ ಒಡಂಬಡಿಕೆ / ಕಂಪನಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಬಿಡ್‍ದಾರರು ಒಂದು ಬಾರಿ ನೊಂದಣಿ ಶುಲ್ಕ ರೂ. 1,000/- ಗಳನ್ನು ಮತ್ತು ಅನ್ವಯವಾಗುವ ಜಿಎಸ್‍ಟಿ ಅನ್ನು ಆನ್‍ಲೈನ್‍ನಲ್ಲಿ ಪಾವತಿಸಬೇಕು. ಪ್ರತಿ ಸನ್ನದು ಅರ್ಜಿ ಶುಲ್ಕ, ರೂ. 50,000/- (ಐವತ್ತು ಸಾವಿರ ಮಾತ್ರ) ಆಗಿರುತ್ತದೆ. ಇದನ್ನು ಮರುಪಾವತಿಸಲಾಗುವುದಿಲ್ಲ. (Non-Refundable), ಬಿಡ್‍ದಾರರು ಒಂದಕ್ಕಿಂತ ಹೆಚ್ಚು ಸನ್ನದುಗಳಿಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ.
ಒಂದು ಸನ್ನದಿಗಾಗಿ ಒಂದು ಅರ್ಜಿಯಂತೆ ಪ್ರತಿ ಅರ್ಜಿಗೆ ಪ್ರತ್ಯೇಕ ಅರ್ಜಿ ಶುಲ್ಕ ಮತ್ತು ಪ್ರತ್ಯೇಕ ಮುಂಗಡ ಠೇವಣಿ ಮೊತ್ತ ಪಾವತಿಗೆ ಒಳಪಟ್ಟಿರುತ್ತದೆ. ಆನ್‍ಲೈನ್ ಮೂಲಕ ವ್ಯಾಲೆಟ್‍ಗೆ ಹಣ ಪಾವತಿಯನ್ನು ಮಾಡಲು ಬಿಡ್‍ದಾರರಿಗೆ ಅವಕಾಶವನ್ನು ಕಲ್ಪಿಸಲಾಗಿರುತ್ತದೆ. ಬಿಡ್‍ದಾರರ ವ್ಯಾಲೆಟ್ ನಿಂದ ಅರ್ಜಿ ಶುಲ್ಕ ಮತ್ತು ಮುಂಗಡ ಠೇವಣಿ ಮೊತ್ತವನ್ನು ನೈಜ ಸಮಯದಲ್ಲಿ ಕ್ರಿಯಾತ್ಮಕವಾಗಿ ಹೊಂದಿಸಲು ಅವಕಾಶ ಇರುತ್ತದೆ ಮುಂಗಡ ಠೇವಣಿ ಮೊತ್ತವು ಸನ್ನದಿನ ಮೂಲ ಬೆಲೆಯ ಶೇ.2 ಆಗಿದ್ದು ಅರ್ಜಿಯನ್ನು ಸಲ್ಲಿಸುವ ಸಮಯದಲ್ಲಿ ಆನ್‍ಲೈನ್ ಮೂಲಕ ಮುಂಗಡ ಠೇವಣಿ ಮೊತ್ತವನ್ನು ಪಾವತಿಸಬೇಕು.
ಪ್ರತಿ ಸನ್ನದಿನ ಬಿಡ್, ಸನ್ನದಿನ ಮೂಲ ಬೆಲೆಯಿಂದ ಪ್ರಾರಂಭವಾಗುತ್ತದೆ ಬಿಡ್‍ದಾರರು ಪ್ರತಿ ಬಿಡ್‍ಗೆ ರೂ. 2 ಲಕ್ಷ ಅಥವಾ ಅದರ ಗುಣಾಕಾರದ ಹೆಚ್ಚಳಕ್ಕೆ ಬಿಡ್ ಮಾಡಬೇಕು (Multiples of 2 lakhs) ಇ-ಹರಾಜಿನಲ್ಲಿ ಯಶಸ್ವಿ ಬಿಡ್ ಮಾಡಿರುವ ಬಿಡ್‍ದಾರರನ್ನು (H-1) ಆಯ್ಕೆಯನ್ನು ಆನ್‍ಲೈನ್ ಮೂಲಕ ಮಾಡಲಾಗುತ್ತದೆ.
ಗೆಲ್ಲುವ ಬಿಡ್ ಮೌಲ್ಯವನ್ನು ಬಿಡ್ ಮಾಡಿದ ಬಿಡ್‍ದಾರರು ವಿನ್ನಿಂಗ್ ಬಿಡ್‍ದಾರರು (ಯಶಸ್ವಿ ಬಿಡ್ಡರ್) (H-1) ಆಗುತ್ತಾರೆ. ಯಶಸ್ವಿ ಬಿಡ್‍ದಾರರಿಗೆ ಇ-ಮೇಲ್ ಮೂಲಕ ತಾತ್ಕಾಲಿಕ ಸೂಚನಾ ಪತ್ರ (Provisional Intimation Letter) ನ್ನು ರವಾನಿಸಲಾಗುತ್ತದೆ. ವಿನ್ನಿಂಗ್ ಬಿಡ್‍ದಾರರು (ಯಶಸ್ವಿ, ಬಿಡ್ಕರ್ ಊ-1) ಗೆಲ್ಲುವ ಬಿಡ್ ಮೊತ್ತದ 0.42% ಮತ್ತು ಅನ್ವಯವಾಗುವ ಜಿ.ಎಸ್.ಟಿ ಹಣವನ್ನು ವಹಿವಾಟು ಶುಲ್ಕವಾಗಿ ತಾತ್ಕಾಲಿಕ ಸೂಚನೆಯ ಪತ್ರ ತಲುಪಿದ 07 ಕೆಲಸದ ದಿನಗಳೊಳಗಾಗಿ ಎಂಎಸ್‍ಟಿಸಿ ಲಿಮಿಟೆಡ್‍ಗೆ https://www.mstcecommerce.com ಪೋರ್ಟಲ್‍ನಲ್ಲಿ ಕಡ್ಡಾಯವಾಗಿ ಪಾವತಿಸಬೇಕು.
ಯಶಸ್ವಿ ಬಿಡ್‍ದಾರರು ಹೆಚ್-1, ದಿನಾಂಕ:25-01-2026 ರಿಂದ ದಿನಾಂಕ:03-02-2026 ರ ಒಳಗಾಗಿ ವೆಬ್ ಲಿಂಕ್ URL: https://ksbclonline.karnataka. gov.in/EXCISE-ERP/#/auth/ signin ಮೂಲಕ ಆನ್‍ಲೈನ್ ನಲ್ಲಿ ಗೆಲ್ಲುವ ಬಿಡ್ ಮೊತ್ತದ ಕನಿಷ್ಠ 50% ಅನ್ನು ಕಡ್ಡಾಯವಾಗಿ ಪಾವತಿಸಬೇಕು. ಒಂದು ವೇಳೆ ಯಶಸ್ವಿ ಬಿಡದಾರರು (ಹೆಚ್-1) ಬಿಡ್‍ನ ಸಂಪೂರ್ಣ ಹಣವನ್ನು ಪಾವತಿ ಮಾಡಲು ಇಚ್ಛಿಸಿದ್ದಲ್ಲಿ ಪಾವತಿಸಲು ಅವಕಾಶವಿರುತ್ತದೆ.
ಎಂಎಸ್‍ಟಿಸಿ ವಹಿವಾಟು ಶುಲ್ಕ ಮತ್ತು ಗೆಲ್ಲುವ ಬಿಡ್ ಮೌಲ್ಯದ ಕನಿಷ್ಠ 50% ಪಾವತಿಸಿದ ನಂತರ ಅಪರ ಆಯುಕ್ತರು (ಕೇಂದ್ರಸ್ಥಾನ & ತಪಾಸಣೆ), ರಾಜ್ಯ ಅಬಕಾರಿ ಇಲಾಖೆ ಇವರು ಅಂಗೀಕಾರ ಪತ್ರ ನೀಡುತ್ತಾರೆ. ಅಂಗೀಕಾರ ಪತ್ರ ಪಡೆದ ನಂತರ, ಹೆಚ್1 ಬಿಡ್‍ದಾರರು ಅಬಕಾರಿ ಸೇವೆಗಳ ವೆಬ್‍ಸೈಟ್ https://ksbclonline.karnataka. gov.in/EXCISE-ERP/#/auth/ signin ಗೆ ಲಾಗಿನ್ ಆಗುವ ಮೂಲಕ ಸನ್ನದಿಗಾಗಿ ಅಬಕಾರಿ ಕಾಯ್ದೆ / ನಿಯಮಗಳನ್ವಯ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಗೆಲ್ಲುವ ಬಿಡ್ ಮೊತ್ತದ ಉಳಿದ ಹಣವನ್ನು 2026 ನೇ ಫೆಬ್ರವರಿ 28 ರಂದು ಅಥವಾ ಅದಕ್ಕೂ ಮೊದಲು https://ksbclonline.karnataka. gov.in/EXCISE-ERP/#/auth/ signin ಲಾಗಿನ್ ಆಗುವ ಮೂಲಕ ಪಾವತಿಸತಕ್ಕದ್ದು. ಮುಂಗಡ ಠೇವಣಿ ಮೊತ್ತವನ್ನು ಅಂತಿಮ ಕಂತಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುತ್ತದೆ.
ಹರಾಜಿಗೆ ಒಳಪಡಿಸಿದ ಸನ್ನದುಗಳನ್ನು ಹರಾಜು ನಡೆಸಿದ ಅಬಕಾರಿ ವರ್ಷ ಮತ್ತು ಅಂಗೀಕಾರ ಪತ್ರ (Letter of Acceptance) ನೀಡಿದ ವರ್ಷ ಸೇರಿದಂತೆ 5 ಅಬಕಾರಿ ವರ್ಷಗಳ ಅವಧಿಗೆ ಅಂದರೆ 30-06-2030 ರವರೆಗೆ ನೀಡಲಾಗುತ್ತದೆ.
ಯಶಸ್ವಿ ಬಿಡ್‍ದಾರರು ಹೆಚ್-1 ಮೊದಲ ಅಬಕಾರಿ ವರ್ಷಕ್ಕೆ ಸನ್ನದು ಶುಲ್ಕ ಪಾವತಿಯಿಂದ ವಿನಾಯಿತಿ ಹೊಂದಿರುತ್ತಾರೆ. ಆದಾಗ್ಯೂ, ಹೆಚ್-1 ಬಿಡ್‍ದಾರರು ಮುಂದಿನ 04 ವರ್ಷಗಳ ಅವಧಿಗೆ ಪ್ರತಿ ವರ್ಷ ವಾರ್ಷಿಕ ಸನ್ನದು ಶುಲ್ಕ ಮತ್ತು ಹೆಚ್ಚುವರಿ ಸನ್ನದು ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ.ಇ-ಹರಾಜು ಅಧಿಸೂಚನೆ ಮತ್ತು ಬಿಡ್ಡಿಂಗ್‍ಗಾಗಿ ಅಬಕಾರಿ ಇಲಾಖೆಯ ಜಾಲತಾಣ https://stateexcise.karnataka. gov.in ಮತ್ತು MSTC ಇ- ಹರಾಜು ಪೋರ್ಟಲ್ https://www.mstcecommerce.com ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಅಬಕಾರಿ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.