ಶ್ರೀ ಲಾಲ್ ದಾಸ್ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ 29ನೇ ಧನುರ್ಮಾಸ ಸಂಗೀತೋತ್ಸವ

varthajala
0

 ಬೆಂಗಳೂರು : ಬಳೇಪೇಟೆಯಲ್ಲಿರುವ ಪುರಾತನ ದೇವಸ್ಥಾನವಾದ ಲಾಲ್ ದಾಸ್ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಶ್ರೀ ಲಾಲ್ ದಾಸ್ ಭಕ್ತಾಂಜನೇಯ ಸ್ವಾಮಿ ಭಜನೆ ಮಂಡಳಿ ನಡೆಸುತ್ತಿರುವ 29ನೇ ವರ್ಷದ ಧನುರ್ಮಾಸ ಸಂಗೀತೋತ್ಸವವು ಡಿಸೆಂಬರ್ 16 ರಿಂದ ಜನವರಿ 15ರ ವರೆಗೂ ಹಮ್ಮಿಕೊಂಡಿದ್ದು ವಿವರಗಳು ಈ ರೀತಿ ಇವೆ ; ಪ್ರತಿದಿನ ಬೆಳಗ್ಗೆ 5-30 ರಿಂದ 6-30ರ ವರೆಗೆ ಶ್ರೀ ಭಕ್ತ ಆಂಜನೇಯ ಸ್ವಾಮಿ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ಇರುತ್ತದೆ.

ಗಾನ ಸಂಗೀತ ಮತ್ತು ವಾದ್ಯ ಸಂಗೀತ ಕಾರ್ಯಕ್ರಮಗಳು : ಪ್ರತಿದಿನ ಬೆಳಗ್ಗೆ 6-30 ರಿಂದ 7-30. ಡಿಸೆಂಬರ್ 16ರಂದು ವಿ|| ಶ್ರೀಕಿರಣ್ ಹಾಗೂ ನಂದನ್ ಜೋಷಿಯಾರ್ (ಗಾಯನ), ಡಿಸೆಂಬರ್ 17ರಂದು ವಿ|| ಶ್ರೀಮತಿ ಇಂದಿರಾ ದತ್ತಾತ್ರೇಯ ಶರ್ಮಾ (ಗಾಯನ), ಡಿಸೆಂಬರ್ 18ರಂದು ವಿ|| ಶ್ರೀ ತಿರುಮಲೆ ಶ್ರೀನಿವಾಸ್ (ಗಾಯನ), ಡಿಸೆಂಬರ್ 19ರಂದು ಕು|| ಮನಸ್ವಿ ಜಿ. ಕಶ್ಯಪ್ (ಗಾಯನ), ಡಿಸೆಂಬರ್ 20ರಂದು ವಿ|| ಶ್ರೀಮತಿ ಮಾನಸ ಕುಲಕರ್ಣಿ (ಗಾಯನ), ಡಿಸೆಂಬರ್ 21ರಂದು ವಿ|| ರಾಜಪ್ಪ (ಗಾಯನ), ಡಿಸೆಂಬರ್ 22ರಂದು ವಿ|| ನಾಗೇಶ್ (ಗಾಯನ), ಡಿಸೆಂಬರ್ 23ರಂದು ವಿ|| ಸಿ. ರಮೇಶ್ (ಗಾಯನ), ಡಿಸೆಂಬರ್ 24ರಂದು ವಿ|| ಶ್ರೀಮತಿ ರಕ್ಷಾ ರಾವ್ (ಗಾಯನ), ಡಿಸೆಂಬರ್ 25ರಂದು ವಿ|| ಜಿ ಎಸ್ ನಾಗರಾಜ್ ಮತ್ತು ತಂಡ (ತಾಳವಾದ್ಯ), ಡಿಸೆಂಬರ್ 26ರಂದು ಕು||ಅನನ್ಯ ಬೆಳವಾಡಿ (ಗಾಯನ), ಡಿಸೆಂಬರ್ 27ರಂದು ವಿ|| ಆನೂರ್ ಸುನಾದ್ ಹಾಗೂ ತಂಡ (ತಾಳವಾದ್ಯ), ಡಿಸೆಂಬರ್ 28ರಂದು ವಿ|| ಶ್ರೀಮತಿ ಸರಳಾ ರಾಘವೇಂದ್ರ (ಗಾಯನ), ಡಿಸೆಂಬರ್ 29ರಂದು ವಿ|| ಚಿಂತಲಪಲ್ಲಿ ವಿ ಶ್ರೀನಿವಾಸ್ (ಗಾಯನ), ಡಿಸೆಂಬರ್ 30ರಂದು ವೈಕುಂಠ ಏಕಾದಶಿ, ಡಿಸೆಂಬರ್ 31ರಂದು ವಿ|| ನಾಗೇಶ್ ಮತ್ತು ತಂಡ (ಗಾಯನ).ಜನವರಿ 1ರಂದು ವಿ|| ಎಲ್ ವಿ ಮುಕುಂದ್ ಮತ್ತು ತಂಡ (ಕೊಳಲು ವಾದನ), ಜನವರಿ 2ರಂದು ವಿ|| ನಂದಕುಮಾರ್ ಮತ್ತು ತಂಡ (ಕೊಳಲು ವಾದನ), ಜನವರಿ 3ರಂದು ವಿ|| ಶ್ರೀಮತಿ ರೇಖಾ ಪ್ರಸಾದ್ (ಗಾಯನ), ಜನವರಿ 4ರಂದು ವಿ|| ಶ್ರೀಮತಿ ಸುಜಾತಾ ಮಂಜುನಾಥ್ (ಗಾಯನ), ಜನವರಿ 5ರಂದು ವಿ|| ಶ್ರೀಮತಿ ಅನುಕೃಪಾ ರೌಡೂರ್, ಬಳ್ಳಾರಿ (ಗಾಯನ), ಜನವರಿ 6ರಂದು ವಿ|| ವಿಷ್ಣು ವೆಂಕಟೇಶ್ (ಮ್ಯಾಂಡೋಲಿನ್ ವಾದನ), ಜನವರಿ 7ರಂದು ವಿ|| ಶ್ರೀಮತಿ ಅಂಜಲಿ ಶ್ರೀರಾಮ್ (ಗಾಯನ), ಜನವರಿ 8ರಂದು ವಿ|` ಅನಂತಪದ್ಮನಾಭ (ಗಾಯನ), ಜನವರಿ 9ರಂದು ವಿ|| ಆನೂರ್ ಅನಂತ ಕೃಷ್ಣ ಶರ್ಮಾ ಹಾಗೂ ಮೇಧಾ ಮಂಜುನಾಥ್ (ಗಾಯನ), ಜನವರಿ 10ರಂದು ವಿ|| ಶ್ರೀಮತಿ ಅಪೇಕ್ಷ ಅಪ್ಪಾಲ (ಗಾಯನ), ಜನವರಿ 11ರಂದು  ಬೆಂಗಳೂರು ಸಹೋದರರಾದ ವಿ|| ಅಶೋಕ್ ಮತ್ತು ವಿ|| ಹರಿಹರನ್ (ಗಾಯನ), ಜನವರಿ 12ರಂದು ವಿ|| ಪಟ್ಟಾಭಿರಾಮ್ ಪಂಡಿತ್ (ಗಾಯನ), ವಿ|| ವೆಂಕಟೇಶ್ ಜೋಷಿಯಾರ್ (ಪಿಟೀಲು), ವಿ|| ಎಚ್ ಎಸ್ ಸುಧೀoದ್ರ (ಮೃದಂಗ), ಜನವರಿ 13ರಂದು ಶ್ರೀರಾಗ ಮ್ಯೂಸಿಕ್ ಶಾಲೆ, ಜನವರಿ 14ರಂದು ವಿ|| ಸ್ವಾಮೀಜಿ (ಗಾಯನ), ಜನವರಿ 15ರಂದು ನಗರ ಸಂಕೀರ್ತನೆ ಮತ್ತು ಸಮಾರೋಪ ಸಮಾರಂಭ ಜರುಗಲಿದೆ ಎಂದು ಮಂಡಲಿಯ ಮುಖ್ಯಸ್ಥರಾದ ಮೃದಂಗ ವಿದ್ವಾನ್ ಶ್ರೀ ಶ್ರೀನಿವಾಸ್ ಅನಂತರಾಮಯ್ಯ ಅವರು ತಿಳಿಸಿದ್ದಾರೆ.
 

Post a Comment

0Comments

Post a Comment (0)